
ಅಮ್ಮ ಎಲ್ಲೇ ಇರ್ಲಿ, ಹೇಗೆ ಇರಲಿ ಅಮ್ಮ ಅಮ್ಮನೇ. ಮಕ್ಕಳು ಅವಳದ್ದಾಗಿರಲಿ ಇಲ್ಲ ಬೇರೆಯವರದ್ದಾಗಿರಲಿ, ಮಕ್ಕಳ ವಿಷ್ಯ ಬಂದಾಗ ಅಮ್ಮನಾದವಳು ಪ್ರಾಣ ಪಣಕ್ಕಿಡಲೂ ಸಿದ್ಧ ಇರ್ತಾಳೆ. ಇದು ಬರೀ ಅಮ್ಮನ ಹೊಗಳಿಕೆ ಮಾತಲ್ಲ. ಅನೇಕ ತಾಯಂದಿರುವ ಇದಕ್ಕೆ ಉದಹಾರಣೆಯಾಗಿದ್ದಾರೆ. ಮಧ್ಯಪ್ರದೇಶದಲ್ಲಿ ತಾಯಿಯೊಬ್ಬಳು, ಅಂಗನವಾಡಿ ಮಕ್ಕಳಿಗಾಗಿ ತನ್ನ ಪ್ರಾಣ ಬಲಿಕೊಟ್ಟಿದ್ದಾಳೆ.
ಮಧ್ಯಪ್ರದೇಶದ ನೀಮುಚ್ ಜಿಲ್ಲೆಯ ಜಾವಾದ್ ತಹಸಿಲ್ನ ರಣಪುರ ಗ್ರಾಮದಲ್ಲಿ ಮಾನವೀಯತೆ, ಹೃದಯಸ್ಪರ್ಶಿ ಘಟನೆ ನಡೆದಿದೆ. ಮಡವಾಡ ಪಂಚಾಯತ್ ಬಳಿ ಇರುವ ಅಂಗನವಾಡಿ ಕೇಂದ್ರದಲ್ಲಿ ಜೇನುನೊಣಗಳ ಹಿಂಡು ಇದ್ದಕ್ಕಿದ್ದಂತೆ ದಾಳಿ ಮಾಡಿದೆ. ಅಂಗನವಾಡಿ ಆವರಣದಲ್ಲಿ ಮಕ್ಕಳು ಆಡ್ತಿದ್ದರು. ಜೇನುನೊಣದ ದಾಳಿಯಿಂದ ಮಕ್ಕಳು ಭಯಗೊಂಡಿದ್ದರು. ಅಂಗನವಾಡಿಯಲ್ಲಿ ಅಡುಗೆ ಮಾಡ್ತಿದ್ದ ಕಾಂಚನ್ ಬಾಯಿ ಮೇಘವಾಲ್ ಮಕ್ಕಳಿಗೆ ಕಾಲವಾಗಿ ನಿಂತ್ರು.
ಹಂಪಿ ಪ್ರವಾಸಕ್ಕೆ ಬರುತ್ತಿದ್ದ ಕೇರಳ ವಿದ್ಯಾರ್ಥಿಗಳ ಬಸ್ ಪಲ್ಟಿ; ಶಿಕ್ಷಕಿ, ಮಕ್ಕಳು ಸೇರಿ ನಾಲ್ವರಿಗೆ ಗಾಯ
ಕಾಂಚನ್ ಬಾಯಿ, ತಮ್ಮ ಪ್ರಾಣವನ್ನು ಲೆಕ್ಕಿಸದೆ, ಮಕ್ಕಳನ್ನು ಟಾರ್ಪಾಲ್ ಮತ್ತು ಚಾಪೆಯಿಂದ ಮುಚ್ಚಿ ಒಬ್ಬೊಬ್ಬರಾಗಿ ಸುಮಾರು 20 ಮಕ್ಕಳನ್ನು ಸುರಕ್ಷಿತವಾಗಿ ಕೋಣೆಗೆ ಕರೆದೊಯ್ದರು. ಈ ಸಮಯದಲ್ಲಿ, ನೂರಾರು ಜೇನುನೊಣಗಳ ಹಿಂಡು ಕಾಂಚನ್ ಬಾಯಿ ಮೇಲೆ ದಾಳಿ ಮಾಡಿತ್ತು. ಮಕ್ಕಳನ್ನು ಸಾವಿನಿಂದ ರಕ್ಷಿಸುವ ಪ್ರಯತ್ನದಲ್ಲಿದ್ದ ಕಾಂಚನ್ ಬಾಯಿಗೆ ಇದರ ಪರಿವೆ ಇರಲಿಲ್ಲ.
ನೂರಾರು ಜೇನುನೊಣಗಳಿಂದ ಕಚ್ಚಿಸಿಕೊಂಡಿದ್ದ ಕಾಂಚನ್ ಬಾಯಿ ಗಂಭೀರವಾಗಿ ಗಾಯಗೊಂಡಿದ್ದರು. ಅವರನ್ನು ಸ್ಥಳೀಯರು ರಕ್ಷಿಸುವ ಪ್ರಯತ್ನ ಮಾಡಿದ್ದಾರೆ. ಆದ್ರೆ ಕಾಂಚನ್ ಬಾಯಿ ಸ್ಥಿತಿ ಗಂಭೀರವಾಗಿತ್ತು. ಕಾಂಚನ್ ಬಾಯಿ ಅವರನ್ನು ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಗಿತ್ತು. ಆದ್ರೆ ಚಿಕಿತ್ಸೆಗೂ ಮುನ್ನವೇ ಕಾಂಚನಾ ಬಾಯಿ ಸಾವನ್ನಪ್ಪಿದ್ದರು.
ಜೈ ಮಾತಾ ದಿ ಸ್ವ-ಸಹಾಯ ಗುಂಪಿನ ಅಧ್ಯಕ್ಷೆಯಾಗಿ ಕಾಂಚನ್ ಬಾಯಿ ಗ್ರಾಮದಲ್ಲಿ ಸಕ್ರಿಯ ಮತ್ತು ಗೌರವಾನ್ವಿತ ಮಹಿಳೆಯಾಗಿದ್ದರು. ಅವರ ಸಾವು ಕುಟುಂಬ ಮಾತ್ರವಲ್ಲ ಇಡೀ ಗ್ರಾಮವನ್ನು ದುಃಖದಲ್ಲಿ ಮುಳುಗಿಸಿದೆ. ಅವರ ಪತಿ ಶಿವಲಾಲ್ ಈಗಾಗಲೇ ಗಂಭೀರ ಕಾಯಿಲೆ, ಪಾರ್ಶ್ವವಾಯು ರೋಗದಿಂದ ಬಳಲುತ್ತಿದ್ದಾರೆ. ಒಬ್ಬ ಮಗ ಮತ್ತು ಇಬ್ಬರು ಹೆಣ್ಣುಮಕ್ಕಳು ತಾಯಿಯ ಪ್ರೀತಿಯನ್ನು ಕಳೆದುಕೊಂಡಿದ್ದಾರೆ.
ರಾಯಚೂರು: ಲವ್ ಫೇಲ್ ಅಂತ ರೈಲು ಹಳಿ ಮೇಲೆ ಮಲಗಿ ಪ್ರಾಣ ಬಿಟ್ಟ ನೀರಮಾನ್ವಿ ಯುವತಿ!
ಘಟನೆಯ ನಂತರ ಇಡೀ ರಣಪುರ ಗ್ರಾಮದಲ್ಲಿ ಶೋಕ ಮತ್ತು ಭೀತಿಯ ವಾತಾವರಣ ಆವರಿಸಿದೆ. ಅಂಗನವಾಡಿಯ ಬಳಿಯ ಮರದ ಮೇಲೆ ಜೇನು ಗೂಡುಕಟ್ಟಿತ್ತು. ಆಡಳಿತ ಜೇನುಗೂಡುಗಳನ್ನು ತೆಗೆದು ಪ್ರದೇಶವನ್ನು ಸುರಕ್ಷಿತಗೊಳಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸುತ್ತಿದ್ದಾರೆ. ಮಂಗಳವಾರ ಜಿಲ್ಲಾ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ. ಕಾಂಚನ್ ಬಾಯಿ ಅವರ ಮೃತದೇಹ ಗ್ರಾಮಕ್ಕೆ ಬಂದ ತಕ್ಷಣ, ಗ್ರಾಮದಲ್ಲಿ ನೀರವ ಮೌನ ಆವರಿಸಿತ್ತು. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಜೇನುನೊಣ ಅಪಾಯಕಾರಿ ?
ಜೇನುನೊಣಗಳು ಸಾಮಾನ್ಯವಾಗಿ ಶಾಂತವಾಗಿರುತ್ತವೆ. ಅವುಗಳಿಗೆ ತೊಂದರೆಯಾಗದ ಅವು ಆಕ್ರಮಣಕಾರಿಯಾಗುತ್ತವೆ. ಜೇನುನೊಣದ ವಿಷ ಅಲರ್ಜಿ ಇರುವ ಜನರಿಗೆ ಜೇನುನೊಣ ಕಚ್ಚಿದ್ರೆ ಅಪಾಯಕಾರಿ. ಅದ್ರಲ್ಲೂ ನೂರಾರು ಜೇನುನೊಣ ಒಟ್ಟಿಗೆ ಕಚ್ಚಿದಾಗ ಬದುಕುಳಿಯೋ ಸಾಧ್ಯತೆ ಬಹಳ ಕಡಿಮೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ