ಜಗನ್ ಮಾಸ್ಟರ್ ಪ್ಲಾನ್‌ಗೆ ಒಪ್ಪಿಗೆ, ಆಂಧ್ರಕ್ಕಿನ್ನು ಮೂರು ಮೂರು  ರಾಜಧಾನಿ

Published : Jul 31, 2020, 10:16 PM ISTUpdated : Jul 31, 2020, 10:18 PM IST
ಜಗನ್ ಮಾಸ್ಟರ್ ಪ್ಲಾನ್‌ಗೆ ಒಪ್ಪಿಗೆ, ಆಂಧ್ರಕ್ಕಿನ್ನು ಮೂರು ಮೂರು  ರಾಜಧಾನಿ

ಸಾರಾಂಶ

ರಾಜ್ಯದಲ್ಲಿ ಅಧಿಕಾರ ವಿಕೇಂದ್ರಿಕರಣ ಶಕೆ/ ಆಂಧ್ರ ಪ್ರದೇಶಕ್ಕೆ ಇನ್ನು ಮುಂದೆ ಮೂರು ರಾಜಧಾನಿ/ ಜಗನ್ ಸರ್ಕಾರದ ಹೊಸ ಆಲೋಚನೆಗೆ ಆಂಧ್ರ ರಾಜ್ಯಪಾಲರ ಅಂಕಿತ/ ಅಮರಾವತಿ, ವಿಶಾಖಪಟ್ಟಣ ಮತ್ತು ಕರ್ನೂಲು

ಅಮರವಾತಿ(ಜು. 31`) ಆಂಧ್ರ ಪ್ರದೇಶಕ್ಕೆ ಇನ್ನು ಮುಂದೆ ಒಂದಲ್ಲ- ಎರಡಲ್ಲ ಮೂರು ರಾಜಧಾನಿ.  'ಪ್ರತ್ಯೇಕಿತ' ಆಂಧ್ರ ಪ್ರದೇಶಕ್ಕೆ ಮೂರು ರಾಜಧಾನಿ ಮಾಡುವ ಸಿಎಂ ಜಗನ್ ಮೋಹನ್ ರೆಡ್ಡಿ ಸರ್ಕಾರದ ಪ್ರಸ್ತಾವನೆಗೆ ಆಂಧ್ರ ಪ್ರದೇಶ ರಾಜ್ಯಪಾಲ ಬಿಸ್ವಾಭೂಷಣ್ ಹರಿಚಂದನ್ ಅಂಕಿತ ಹಾಕಿದ್ದಾರೆ. 

ಅಮರಾವತಿ ಆಡಳಿತಾತ್ಮಕ ರಾಜಧಾನಿಯಾಗಿ ಮಾತ್ರ ಉಳಿಯಲಿದೆ. ಉಳಿದಂತೆ ವಿಶಾಖ ಪಟ್ಟಣ ಕಾರ್ಯ ನಿರ್ವಾಹಕ ರಾಜಧಾನಿಯಾಗಿರಲಿದ್ದು, ಕರ್ನೂಲು ಜಿಲ್ಲೆ ನ್ಯಾಯ ರಾಜಧಾನಿಯಾಗಿರಲಿದೆ. ಇದು ಜಗನ್ ಅವರ ಹೊಸ ಆಲೋಚನೆ.

ಆಂಧ್ರ ಪ್ರದೇಶದಲ್ಲಿ ಶಾಲೆ ಆರಂಭಕ್ಕೆ ದಿನಾಂಕ ಫಿಕ್ಸ್

ಆಂಧ್ರ ಪ್ರದೇಶಕ್ಕೆ ಮೂರು ರಾಜಧಾನಿಗಳನ್ನು ಘೋಷಣೆ ಮಾಡುವ ಕುರಿತು ಸರ್ಕಾರ ಅಲ್ಲಿನ ವಿಧಾನಸಭೆಯ ಅನುಮೋದನೆ ಪಡೆದಿತ್ತು. ವಿಧಾನಸಭೆಯಲ್ಲಿ ಆಂಧ್ರಪ್ರದೇಶ ಹಣಕಾಸು ಸಚಿವ ಬುಗ್ಗನ್​​ ರಾಜೇಂದ್ರನಾಥ್​​ ರೆಡ್ಡಿ, ರಾಜ್ಯಾಡಳಿತ ವಿಕೇಂದ್ರಿಕರಣ ಮಸೂದೆ ಮಂಡಿಸಿದ್ದರು. ಸಮಗ್ರ ಅಭಿವೃದ್ಧಿದಾಗಿ ಇದು ಅಗತ್ಯ ಎಂದು ಸಾರಿ ಹೇಳಿದ್ದರು.

ಆಂಧ್ರ ಪ್ರದೇಶ ವಿಧಾನ ಪರಿಷತ್ ನಲ್ಲೂ ಮಂಡಿಸಿದಾಗ ಟಿಡಿಪಿ ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿತ್ತು.  ಆದರೆ ಅಲ್ಲಿಯೂ ಪಾಸಾಗಿ ರಾಜ್ಯಪಾಲರ ಅಂಕಿತಕ್ಕೆ ಹೋಗಿತ್ತು.  ಈ ಮಸೂದೆ ಅನ್ವಯ ಆಂಧ್ರದಲ್ಲಿ ಮೂರು ದೊಡ್ಡ ಸ್ಮಾರ್ಟ್ ಸಿಟಿಗಳು ತಲೆ ಎತ್ತಲಿವೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

Vande Mataram ಎರಡು ಪದಗಳ ಅರ್ಥ ವಿವರಿಸಿದ ಇಕ್ರಾ ಹಸನ್: ಸಂಸದೆಯ ಮಾತು ವೈರಲ್
ವಿದೇಶಗಳಿಗೆ ಭಾರತೀಯ ಪ್ರತಿಭೆ : ನಷ್ಟವೋ ? ಪ್ರಭಾವವೋ?