ಆಂಧ್ರಪ್ರದೇಶ ಸರ್ಕಾರವು ಮದ್ಯದ ಬೆಲೆಯನ್ನು ಇಳಿಸಲು ನಿರ್ಧರಿಸಿದ್ದು, ಕಡಿಮೆ ಬೆಲೆಯಲ್ಲಿ ಎಲ್ಲಾ ಪ್ರೀಮಿಯಂ ಬ್ರಾಂಡ್‌ಗಳ ಮದ್ಯವನ್ನು ಜನರಿಗೆ ಒದಗಿಸಲು ಚಿಂತನೆ ನಡೆಸಿದೆ. ಅಕ್ರಮ ಮದ್ಯ ಮಾರಾಟ ತಡೆಗಟ್ಟುವುದು ಮತ್ತು ರಾಜ್ಯದ ಆದಾಯ ಹೆಚ್ಚಿಸುವುದು ಇದರ ಉದ್ದೇಶವಾಗಿದೆ. ಹೊಸ ನೀತಿಯು ಅಕ್ಟೋಬರ್ 1 ರಿಂದ ಜಾರಿಗೆ ಬರಲಿದೆ.
ಅಮರಾವವತಿ: ಚಂದ್ರಬಾಬು ನಾಯ್ಡು ನೇತೃತ್ವದ ಆಂಧ್ರಪ್ರದೇಶ ಸರ್ಕಾರವೂ ಅಲ್ಲಿ ಮದ್ಯಪ್ರಿಯರಿಗೆ ಗುಡ್‌ನ್ಯೂಸೊಂದನ್ನು ನೀಡುತ್ತಿದೆ. ಮದ್ಯದ ಬೆಲೆಯನ್ನು ಇಳಿಸುವುದಕ್ಕೆ ಸರ್ಕಾರ ನಿರ್ಧರಿಸಿದ್ದು, ಕಡಿಮೆ ಬೆಲೆಯಲ್ಲಿ ಎಲ್ಲಾ ಪ್ರೀಮಿಯಂ ಬ್ರಾಂಡ್‌ಗಳ ಮದ್ಯವನ್ನು ಜನರಿಗೆ ಒದಗಿಸಲು ಚಿಂತನೆ ನಡೆಸಿದೆ.
ಸರ್ಕಾರದ ಒಂದು ದೇಶ ಒಂದು ತೆರಿಗೆ ಪಾಲಿಸಿಯೂ ಅಲ್ಕೋಹಾಲ್‌ಗೆ ಅನ್ವಯವಾಗುವುದಿಲ್ಲ, ಹೀಗಾಗಿ ದೇಶದ ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಮದ್ಯದ ಬೆಲೆಯಲ್ಲಿ ತುಂಬಾ ವ್ಯತ್ಯಾಸವಿದೆ. ಆದರೆ ಈಗ ಆಂಧ್ರ ಪ್ರದೇಶ ಸರ್ಕಾರ ದರ ಇಳಿಕೆ ಮಾಡಲು ಮುಂದಾಗಿರುವುದರಿಂದ ಹಲವು ಬ್ರಾಂಡ್‌ಗಳ ಮದ್ಯವನ್ನು ಜನ ಕಡಿಮೆ ಬೆಲೆಗೆ ಕೊಳ್ಳಬಹುದಾಗಿದೆ. ಅಕ್ರಮವಾಗಿ ಮದ್ಯ ಉತ್ಪಾದಿಸಿ ಮಾರಾಟ ಮಾಡುವುದನ್ನು ತಡೆಗಟ್ಟಲು ಹಾಗೂ ರಾಜ್ಯದಲ್ಲಿ ಆದಾಯ ಹೆಚ್ಚಿಸಲು ಈ ನಿರ್ಧಾರ ಮಾಡಲಾಗಿದೆ. ದರ ಕಡಿಮೆ ಮಾಡಿರುವುದರಿಂದ ಅಕ್ರಮ ಮದ್ಯ ಸಾಗಣೆಯನ್ನು ಕಡಿಮೆ ಮಾಡುವುದು ಹಾಗೂ ಜನ ಅಧಿಕೃತ ಸ್ಟೋರ್‌ಗಳಿಂದಲೇ ಮದ್ಯ ಖರೀದಿಸುವರು ಎಂದು ಆಂಧ್ರ ಸರ್ಕಾರ ನಂಬಿದೆ.
ಕೇರಳ ಮದ್ಯದ ಮಳಿಗೆ ಸಿಬ್ಬಂದಿ ಪೈಕಿ ಶೇ.50ರಷ್ಟು ಮಹಿಳೆಯರು : ಸ್ತ್ರೀಯರ ಪಾಲು ಇಷ್ಟು ಇನ್ನೆಲ್ಲೂ ಇಲ್ಲ
ಅಮರಾವತಿಯಲ್ಲಿ ಸಿಎಂ ಚಂದ್ರಬಾಬು ನಾಯ್ಡು ನೇತೃತ್ವದಲ್ಲಿ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಈ ಹೊಸ ಮದ್ಯ ಕಾಯ್ದೆಗೆ ಅನುಮೋದನೆ ಸಿಕ್ಕಿದ್ದು, ಈ ಹೊಸ ನಿಯಮಗಳನ್ವಯ ಮದ್ಯದ ಬೆಲೆಯಲ್ಲಿ ಮಹತ್ವದ ಬದಲಾವಣೆಯಾಗಲಿದೆ. ಇದರಿಂದ ಜನ ಯಾವುದೇ ಬ್ರಾಂಡ್‌ನ ಮದ್ಯವನ್ನು ಕೇವಲ 99 ರೂಪಾಯಿಗೆ ಖರೀದಿಸಬಹುದಾಗಿದೆ. ಆಕ್ಟೋಬರ್ 1 ರಿಂದ ಈ ಹೊಸ ಅಬಕಾರಿ ನೀತಿ ಜಾರಿಗೆ ಬರಲಿದೆ.
ರಾಜ್ಯ ಸರ್ಕಾರದಿಂದ ಮದ್ಯ ಪ್ರಿಯರಿಗೆ ಶಾಕ್, ಒಂದೂವರೆ ವರ್ಷದಲ್ಲಿ 3ನೇ ಬಾರಿ ದರ ಏರಿಕೆ!
ಹೊಸ ಅಬಕಾರಿ ಪಾಲಿಸಿಯ ಪ್ರಮುಖ ಅಂಶಗಳು
ಎಲ್ಲಾ ಬ್ರಾಂಡ್‌ನ 180 ಎಂಎಲ್ ಮದ್ಯ ಕೇವಲ 99 ರೂಪಾಯಿಗೆ ಸಿಗಲಿವೆ.
ಇದರಿಂದ ರಾಜ್ಯ ಸರ್ಕಾರದ ಬೊಕ್ಕಸಕ್ಕೆ 2 ,000 ಕೋಟಿ ಆದಾಯ ಬರಬಹುದು ಎಂದು ಸರ್ಕಾರ ಅಂದಾಜಿದೆ.
ಗುಣಮಟ್ಟ ಹಾಗೂ ಕೈಗೆಟುಕುವ ದರ: ಗುಣಮಟ್ಟದೊಂದಿಗೆ ಕೈಗೆಟುಕುವ ದರದಲ್ಲಿ ಗ್ರಾಹಕರ ಕೈಗೆ ಒಳ್ಳೆಯ ಮದ್ಯ ಲಭ್ಯವಾಗಲಿದೆ.
ಲೈಸೆನ್ಸ್ ಪ್ರಕ್ರಿಯೆ: ಇದಕ್ಕಾಗಿ ಹೊಸದಾಗಿ ಲೈಸೆನ್ಸ್ ಪಡೆಯುವವರು 2ಲಕ್ಷ ರುಪಾಯಿ ರೀಫಂಡ್ ಮಾಡದ ಹಣ ಪಾವತಿ ಮಾಡಬೇಕಾಗುತ್ತದೆ. ಇದರ ಜೊತೆಗೆ 4 ಸ್ಲಾಬ್‌ಗಳನ್ನು ಸೆಟ್ ಮಾಡಲಾಗಿದ್ದು, 50 ಲಕ್ಷದಿಂದ 80 ಲಕ್ಷದವರೆಗೆ ಬೆಲೆ ಇದೆ. ಇದರ ಜೊತೆಗೆ ರಾಜ್ಯದಲ್ಲಿ 15 ಪ್ರೀಮಿಯಂ ಲಿಕ್ಕರ್ ಸ್ಟೋರ್‌ಗಳನ್ನು ರಾಜ್ಯದಲ್ಲಿ ತೆರೆಯಲಾಗುತ್ತದೆ. ಇವುಗಳಿಗೆ 5 ವರ್ಷದವರೆಗೆ ಲೈಸೆನ್ಸ್ ನೀಡಲಾಗುತ್ತದೆ.