ಸಿದ್ದರಾಮಯ್ಯ ಭೇಟಿಗೆ ಬಂದ ಆಂಧ್ರ ಡಿಸಿಎಂ ಪವನ್ ಕಲ್ಯಾಣ್ ವಾಹನದಲ್ಲಿ ಹೆಬ್ಬಾವು!

By Sathish Kumar KHFirst Published Aug 8, 2024, 6:45 PM IST
Highlights

ಸಿಎಂ ಸಿದ್ದರಾಮಯ್ಯ ಭೇಟಿಯಾಗಲು ಬಂದ ಆಂಧ್ರ ಡಿಸಿಎಂ ಹಾಗೂ ನಟ ಪವನ್ ಕಲ್ಯಾಣ್ ಬೆಂಗಾವಲು ವಾಹನದಲ್ಲಿ ಹೆಬ್ಬಾವು ಪತ್ತೆಯಾಗಿ

ಬೆಂಗಳೂರು (ಆ.08): ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಲು ಆಗಮಿಸಿದ ಆಂಧ್ರಪ್ರದೇಶ ರಾಜ್ಯದ ಉಪ ಮುಖ್ಯಮಂತ್ರಿ ಹಾಗೂ ನಟ ಪವನ್ ಕಲ್ಯಾಣ್ ಅವರ ಬೆಂಗಾವಲು ಪಡೆಯ ವಾಹನದಲ್ಲಿ ಬೃಹತ್ ಗಾತ್ರದ ಹೆಬ್ಬಾವು ಪತ್ತೆಯಾಗಿದೆ.

ಕಾಡು ಪ್ರಾಣಿಗಳ ಹಾವಳಿ, ನಿಯಂತ್ರಣ ಮತ್ತು ಆನೆ ಕಾರ್ಯಾಚರಣೆ ಕುರಿತು ನಿಗದಿಯಾಗಿರುವ ಸಭೆಯಲ್ಲಿ ಭಾಗವಹಿಸಲು ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾವೇರಿ ನಿವಾಸಕ್ಕೆ ಆಗಮಿಸಿದ್ದ ಆಂಧ್ರ ಪ್ರದೇಶ ಡಿಸಿಎಂ ಪವನ್ ಕಲ್ಯಾಣ್ ಸಭೆ ಮುಗಿಸಿ ವಾಪಸ್ ಹೋಗುವಾಗ ಬೆಂಗಾವಲು ವಾಹನದಲ್ಲಿ ಹೆಬ್ಬಾವು ಕಾಣಿಸಿಕೊಂಡಿದೆ. ಇದರಿಂದ ಆತಂಕಕ್ಕೆ ಒಳಗಾದ ಬೆಂಗಾವಲು ಪಡೆ ಕೂಡಲೇ ಅರಣ್ಯ ಇಲಾಖೆ ಸಿಬ್ಬಂದಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಕೂಡಲೇ ವಾಹನ ಪರಿಶೀಲನೆ ಮಾಡಿದ ಉರಗ ರಕ್ಷಣಾ ತಂಡದ ಸದಸ್ಯರು ಹಾವನ್ನು ರಕ್ಷಣೆ ಮಾಡಿದ್ದಾರೆ.

Latest Videos

ಅರಣ್ಯ ಸಚಿವ ಈಶ್ವರ್ ಖಂಡ್ರೆ ಜೊತೆಗೆ ಸಭೆ ನಡೆಸಿದ್ದ ಪವನ್ ಕಲ್ಯಾಣ್, ಆನೆಗಳ ಸೆರೆ ಕಾರ್ಯಾಚರಣೆ, ಮತ್ತು ಪಳಗಿಸುವ ಕ್ರಮ, ಮಾವುತರಿಗೆ ತರಬೇತಿ ವಿಚಾರವಾಗಿ ಸಭೆಯಲ್ಲಿ ಮಾತನಾಡಿದ್ದರು. ಈ ಸಭೆಯ ಬಳಿಕ ಅರಣ್ಯ ಇಲಾಖೆಗೆ ಭೇಟಿ ನೀಡಿದ್ದ ಪವನ್ ಕಲ್ಯಾಣ್ ಅವರ ವಾಹನದಲ್ಲಿ ಹೆಬ್ಬಾವು ಸೇರಿಕೊಂಡಿದೆ. ಇನ್ನೇನು ಆಂಧ್ರ ಪ್ರದೇಶಕ್ಕೆ ಹೊರಡಲು ಸಿದ್ಧರಾಗಬೇಕು ಎನ್ನುವಷ್ಟರಲ್ಲಿ ಬೆಂಗಾಲವು ಪಡೆಯ ಮುಂಬದಿಯ ಬಾನೆಟ್‌ನಲ್ಲಿ ಹೆಬ್ಬಾವಿನ ತಲೆ ಕಂಡುಬಂದಿದೆ. ಕೂಡಲೇ, ಹೆಬ್ಬಾವಿನ ರಕ್ಷಣೆಗೆ ಮುಂದಾದ ಅರಣ್ಯ ಇಲಾಖೆ ಸಿಬ್ಬಂದಿ ತುಸು ಹೊತ್ತು ಪರದಾಡಿದ್ದಾರೆ.

ಅಪ್ಪನಾಗುತ್ತಿದ್ದಾರೆ ಅಭಿಷೇಕ್ ಅಂಬರೀಶ್; ಮತ್ತೆ ಹುಟ್ಟಿಬರಲಿದ್ದಾರಾ ಮಂಡ್ಯದ ಗಂಡು ರೆಬೆಲ್ ಸ್ಟಾರ್ ಅಂಬಿ

ಹೆಬ್ಬಾವು ಯಾವುದೇ ಒಂದು ವಸ್ತುವನ್ನು ಗಟ್ಟಿಯಾಗಿ ಸುತ್ತಿಕೊಂಡರೆ ಏಳೂರು ಕೆರೆಯ ನೀರು ಕುಡಿದರೂ ಬಿಡಿಸಲು ಸಾಧ್ಯವಿಲ್ಲ ಎಂದು ಹೇಳುತ್ತಾರೆ. ಇನ್ನು ಪವನ್ ಕಲ್ಯಾಣ್ ವಾಹನದ ಬೆಂಗಾವಲು ಪಡೆಯ ಬಾನೆಟ್‌ ಕೆಳಗೆ ಸುತ್ತಿಕೊಂಡು ಕುಳಿತಿದ್ದ ಹೆಬ್ಬಾವು ಹೊರ ತೆಗೆಯಲು ಅರಣ್ಯ ಇಲಾಖೆ ಸಿಬ್ಬಂದಿ ಹರಸಾಹಸ ಪಟ್ಟಿದ್ದಾರೆ. ಹಾವನ್ನು ಜೋರಾಗಿ ಎಳೆದರೆ ವಾಹನದ ಯಂತ್ರಗಳಿಗೆ ಹಾನಿಯಾಗುತ್ತದೆ. ಹೀಗಾಗಿ, ಹುಷಾರಾಗಿ ಹೆಬ್ಬಾವನ್ನು ಹೊರಗೆ ತೆಗೆಯಲು ಪರದಾಡಿದ್ದಾರೆ. ಕೊನೆಗೆ ಹಾವನ್ನು ರಕ್ಷಣೆ ಮಾಡಿದ್ದಾರೆ.

click me!