ತುಪ್ಪದ ಹಿಂದೆ ಹೋಗಿ ತಪ್ಪು ಮಾಡಿದ ಸರ್ಕಾರಿ ನೌಕರ, ಈಗ ತುಪ್ಪವೂ ಇಲ್ಲ, ಲಕ್ಷ ಸಂಬಳದ ಕೆಲಸವೂ ಇಲ್ಲ!

By Mahmad Rafik  |  First Published Aug 8, 2024, 5:07 PM IST

ಓರ್ವ ಸರ್ಕಾರಿ ಅಧಿಕಾರಿ ಹೋಟೆಲ್‌ವೊಂದರಲ್ಲಿ 8 ಕೆಜಿ ತುಪ್ಪ ಮತ್ತು 25 ಸಾವಿರ ರೂಪಾಯಿ ಲಂಚ ಪಡೆಯುವ ಸಂದರ್ಭದಲ್ಲಿ ಭ್ರಷ್ಟಾಚಾರ ನಿಗ್ರಹ ದಳಕ್ಕೆ ಸಿಕ್ಕಿದ್ದಾನೆ. 


ಜೈಪುರ: 1 ಲಕ್ಷ ಸಂಬಳ ಪಡೆಯುತ್ತಿದ್ದ ಸರ್ಕಾರಿ ಉದ್ಯೋಗಿ 8 ಕೆಜಿ ತುಪ್ಪದ ಆಸೆಗಾಗಿ ತನ್ನ ಉದ್ಯೋಗವನ್ನೇ ಕಳೆದುಕೊಂಡಿದ್ದಾನೆ. ರಾಜಸ್ಥಾನದ ಸರ್ಕಾರಿ ಉದ್ಯೋಗಿ ಲಂಚ ಪಡೆದುಕೊಳ್ಳುತ್ತಿದ್ದ ಸಂದರ್ಭದಲ್ಲಿ ರೆಡ್ ಹ್ಯಾಂಡ್‌ ಆಗಿ ತಗ್ಲಾಕೊಂಡಿದ್ದಾನೆ. ಕೆಲವೊಮ್ಮೆ ಲಕ್ಷಾಂತರ ರೂಪಾಯಿ ಸಂಬಳ ಪಡೆಯುವ ಅಧಿಕಾರಿಗಳು ಕೇವಲ 100 ರೂ. ಲಂಚ ಪಡೆದು ಸುದ್ದಿಯಾಗಿದ್ದುಂಟು. ರಾಜಸ್ಥಾನದ ಜಲವಾರ್ ಜಿಲ್ಲೆಯ ಓರ್ವ ಸರ್ಕಾರಿ ಅಧಿಕಾರಿ ಹೋಟೆಲ್‌ವೊಂದರಲ್ಲಿ 8 ಕೆಜಿ ತುಪ್ಪ ಮತ್ತು 25 ಸಾವಿರ ರೂಪಾಯಿ ಲಂಚ ಪಡೆಯುವ ಸಂದರ್ಭದಲ್ಲಿ ಭ್ರಷ್ಟಾಚಾರ ನಿಗ್ರಹ ದಳಕ್ಕೆ ಸಿಕ್ಕಿದ್ದಾನೆ. 

ಭ್ರಷ್ಟಾಚಾರ ನಿಗ್ರಹ ದಳದ ತಂಡ ಬೀಸಿದ ಬಲೆಗೆ ಭಾರತೀಯ ಲೆಕ್ಕ ಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯ ಸಹಾಯಕ ಲೆಕ್ಕ ಪರಿಶೋಧನಾ ಅಧಿಕಾರಿ ಮನೋಜ್ ಕುಮಾರ್ ಬಿದ್ದಿದ್ದಾನೆ. ಲಂಚ ಪಡೆಯುತ್ತಿರುವ ಸಂದರ್ಭದಲ್ಲಿಯೇ ಈ ದಾಳಿ ನಡೆಸಲಾಗಿತ್ತು. ಮನೋಜ್ ಕುಮಾರ್ ಲಂಚ ಪಡೆಯುತ್ತಿರುವ ಖಚಿತ ಮಾಹಿತಿ ಬೆನ್ನಲ್ಲೇ ಎಸಿಬಿ ತಂಡ ಈ ದಾಳಿ ನಡೆಸಿತ್ತು. ಸದ್ಯ ಎಸಿಬಿ ತಂಡ, ಮನೋಜ್ ಕುಮಾರ್‌ಗೆ ಸಂಬಂಧಿಸಿದ ಹಲವು ಸ್ಥಳಗಳ ಮೇಲೆ ನಡೆಸಿದ್ದು, ದಾಖಲೆಗಳ ಪರಿಶೀಲನೆಯಲ್ಲಿ ತೊಡಗಿಕೊಂಡಿದೆ.

Tap to resize

Latest Videos

ವರದಿಗಳ ಪ್ರಕಾರ, ಜಿಲ್ಲೆಯ ಹಲವು ಗೋಶಾಲೆಗಳಿಂದ ನಿರಂತರವಾಗಿ ಹಣ ವಸೂಲಿ ಮಾಡುತ್ತಿದ್ದನು. ಲೆಕ್ಕ ಪರಿಶೋಧನೆಗಾಗಿ ಗೋಶಾಲೆಗಳಿಂದ ಹಣ ಪಡೆದುಕೊಳ್ಳುತ್ತಿದ್ದನು. ಗೋಶಾಲೆಯೊಂದರ ಅಡಿಟ್‌ಗೆ ಮನೋಜ್ ಕುಮಾರ್ 25 ಸಾವಿರ ರೂಪಾಯಿ ಮತ್ತು 8 ಕೆಜಿ ಶುದ್ಧ ತುಪ್ಪ ನೀಡುವಂತೆ ಕೇಳಿರುವ ಬಗ್ಗೆ ಎಸಿಬಿಗೆ ದೂರು ಸಲ್ಲಿಕೆಯಾಗಿತ್ತು. ದೂರು ದಾಖಲಾದ ಬಳಿಕ ಅದರ ಸತ್ಯಾಸತ್ಯೆಯನ್ನು ಪರಿಶೀಲಿಸಿದ ಬಳಿಕವೇ ಎಸಿಬಿ ಅಧಿಕಾರಿಗಳ ತಂಡ ಈ ದಾಳಿಯನ್ನು ನಡೆಸಿತ್ತು. ಈ ಸಮಯದಲ್ಲಿ ಜಿಲ್ಲಾ ಗೋಶಾಲೆಗಳ ಸಂಘದ ಅಧ್ಯಕ್ಷ ದೇವೇಂದ್ರ ಯಾದವ್ ಸಹ ಉಪಸ್ಥಿತರಿದ್ದರು. 

ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ದಾಳಿ ನಡೆಸಿ ವಿಚಾರಣೆ ನಡೆಸುತ್ತಿರು ಸಂದರ್ಭದಲ್ಲಿಯೇ ಮನೋಜ್ ಕುಮಾರ್ ಆರೋಗ್ಯದಲ್ಲಿ ಏರುಪೇರು ಉಂಟಾಗಿತ್ತು. ನಂತರ ಹೋಟೆಲ್‌ನಲ್ಲಿಯೇ ಮನೋಜ್‌ ಕುಮಾರ್‌ಗೆ ವೈದ್ಯಕೀಯ ಸಿಬ್ಬಂದಿಯನ್ನು ಕರೆಸಿ ಚಿಕಿತ್ಸೆ ಕೊಡಿಸಲಾಗಿದೆ. ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದ ಬಳಿಕ ವಿಚಾರಣೆ ನಡೆಸಲು ಅಧಿಕಾರಿಗಳು ನಿರ್ಧರಿಸಿದ್ದಾರೆ. ಇತ್ತ ಎಸಿಬಿ ಅಧಿಕಾರಿಗಳ ಮನೋಕ್ ಕುಮಾರ್ ಒಟ್ಟು ಆಸ್ತಿಯ ಬಗ್ಗೆ ಲೆಕ್ಕಾಚಾರ ಹಾಕುತ್ತಿದ್ದಾರೆ.

click me!