
ನವದೆಹಲಿ(ಜು.21): ದೇಶದಲ್ಲಿ ಕೊರೋನಾ ಸೋಂಕಿನಿಂದ 4-5 ಲಕ್ಷ ಮಂದಿ ಸಾವನ್ನಪ್ಪಿದ್ದಾರೆ ಎಂಬ ಸರಕಾರದ ಅಂಕಿ ಅಂಶ ಸುಳ್ಳು. ಒಟ್ಟಾರೆಯಾಗಿ ಕನಿಷ್ಠ 52.4 ಲಕ್ಷ ಮಂದಿ ಕೋವಿಡ್‌ನಿಂದ ಮೃತಪಟ್ಟಿದ್ದಾರೆ ಎಂದು ರಾಜ್ಯಸಭೆಯ ವಿರೋಧಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ.
ರಾಜ್ಯಸಭೆಯಲ್ಲಿ ಮಂಗಳವಾರ ಕೋವಿಡ್ ನಿರ್ವಹಣೆ ಬಗ್ಗೆ ಮಾತನಾಡಿದ ಅವರು, ‘ಸಾವಿನ ಬಗ್ಗೆ ಸರಕಾರದ ಅಂಕಿ ಅಂಶ ಸಂಪೂರ್ಣ ಸುಳ್ಳು. ಇದು ಸತ್ಯಕ್ಕಿಂತ ತುಂಬಾ ದೂರವಿದೆ. ದೇಶದಲ್ಲಿ 6,38,565 ಹಳ್ಳಿಗಳಿವೆ. ಪ್ರತೀ ಹಳ್ಳಿಯಲ್ಲಿ ಕನಿಷ್ಠ 5 ಸಾವುಗಳ ಸಂಭವಿಸಿದರೂ ಸಾವಿನ ಸಂಖ್ಯೆ 31,91,825 ಆಗಲಿದೆ. 7,935 ನಗರಗಳಿದ್ದು, ಪ್ರತೀ ನಗರದಲ್ಲಿ 10 ಸಾವನ್ನು ಲೆಕ್ಕ ಮಾಡಿದರೂ 7,93,500ಕ್ಕೂ ಅಧಿಕ ಸಾವುಗಳಾಗಲಿವೆ. 19 ಮೆಟ್ರೋ ಸಿಟಿಗಳಲ್ಲಿ ಸುಮಾರು 3,60,000 ಸಾವುಗಳು ಸಂಭವಿಸಿವೆ. ಹೀಗಾಗಿ 52.43 ಲಕ್ಷ ಕೋವಿಡ್ ಸಾವುಗಳಾಗುತ್ತದೆ. ಇದಕ್ಕಿಂತ ಕಡಿಮೆ ಆಗಲು ಸಾಧ್ಯವಿಲ್ಲ. ಆದರೂ ಸರಕಾರ 4-5 ಲಕ್ಷ ಸಾವು ಸಂಭವಿಸಿದೆ ಎಂದು ಹೇಳುತ್ತಲೇ ಇದೆ. ಪ್ರಧಾನಿ ನರೇಂದ್ರ ಮೋದಿ ಕೊರೋನ ಸೋಂಕಿನ ನಿರ್ವಹಣೆಯಲ್ಲಿ ವಿಫಲರಾಗಿದ್ದಾರೆ. ಆದರೆ ಆರೋಗ್ಯ ಸಚಿವರಾಗಿದ್ದ ಹರ್ಷವರ್ಧನ್ ಅವರನ್ನು ಇದಕ್ಕೆ ಹೊಣೆ ಮಾಡಿದ್ದಾರೆ ಎಂದು ದೂರಿದರು.
ಇತರೆ ದೇಶಗಳು ಕೋವಿಡ್ ಎರಡನೇ ಅಲೆ ವಿರುದ್ಧ ಹೋರಾಟುತ್ತಿದ್ದರೆ, ಮೋದಿ ಸರಕಾರ ಚುನಾವಣೆ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡಿತ್ತು. ಪ್ರಧಾನಿ ಮೋದಿ ಯಾವುದಕ್ಕೂ ಹೊಣೆ ಹೊರುವುದಿಲ್ಲ. ಅವರು ಬೇರೆಯವರನ್ನೇ ಹೊಣೆ ಮಾಡುತ್ತಾರೆ ಎಂದು ಖರ್ಗೆ ಟೀಕಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ