
ಆಂಧ್ರ ಪ್ರದೇಶ(ಜು.02): ಕೊರೋನಾ ವೈರಸ್ ಅಟ್ಟಹಾಸಕ್ಕೆ ಬ್ರೇಕ್ ಹಾಕಲು ನಡೆಯುತ್ತಿರುವ ಪ್ರಯತ್ನಗಳೆಲ್ಲಾ ಪರಿಣಾಮಕಾರಿಯಾಗುತ್ತಿಲ್ಲ. ಇತ್ತ ಸರ್ಕಾರಗಳು ಚಿಕಿತ್ಸೆ, ಟೆಸ್ಟಿಂಗ್ ಸೇರಿದಂತೆ ಸೋಂಕಿತರ ಆರೈಕೆಗೆ ಹೆಚ್ಚಿನ ಗಮನ ನೀಡುತ್ತಿದೆ. ಆದರೆ ಸೋಂಕಿತರಿಗೆ ಬೆಡ್ ಸಮಸ್ಯೆ, ಆ್ಯುಂಬುಲೆನ್ಸ್ ಸಿಗದೆ ಪರದಾಟ ಸೇರಿದಂತೆ ಹಲವು ಸಮಸ್ಯೆಗಳು ಪ್ರತಿ ದಿನ ವರದಿಯಾಗುತ್ತಿದೆ. ಇದೀಗ ಜಗನ್ ಮೋಹನ್ ರೆಡ್ಡಿ ನೇತೃತ್ವದ ಆಂಧ್ರ ಪ್ರದೇಶ ಸರ್ಕಾರ, ನೂತನ ಆ್ಯಂಬುಲೆನ್ಸ್ ಸೇವೆ ಆರಂಭಿಸಿದೆ.
ಆಸ್ಪತ್ರೆಯಿಂದ ಆಸ್ಪತ್ರೆಗೆ ಗರ್ಭಿಣಿ ಅಲೆದಾಟ, ಕೇಳುವವರು ಯಾರು ಗೋಳಾಟ?.
108 ಆ್ಯಂಬುಲೆನ್ಸ್ ಸೇವೆ ಹಾಗೂ 104 ಮೊಬೈಲ್ ಮೆಡಿಕನ್ ಯುನಿಟ್‌ಗೆ ಚಾಲನೆ ನೀಡಲಾಗಿದೆ. ಬರೋಬ್ಬರಿ 201 ಕೋಟಿ ರೂಪಾಯಿ ವೆಚ್ಚದಲ್ಲಿ ಹೊಸ ಆ್ಯಂಬುಲೆನ್ಸ್ ಸೇವೆ ಆರಂಭಿಸಲಾಗಿದೆ. 432 ಆ್ಯಂಬುಲೆನ್ಸ್ ಹಾಗೂ 656 ಮೊಬೈಲ್ ಮೆಡಿಕಲ್ ಯುನಿಟ್‌ಗೆ ಚಾಲನೆ ನೀಡಲಾಗಿದೆ.
ಚೀನಾ ಕಡೆ ನೋಡಿದ್ದು ಸಾಕು, ಕೊರೋನಾ ಸ್ವಾಬ್ ಟೆಸ್ಟ್ ಕಿಟ್ ಬೆಂಗ್ಳೂರಿನಲ್ಲೇ ತಯಾರು!..
ಒಟ್ಟು 1068 ಹೊಚ್ಚ ಹೊಸ ಆ್ಯಂಬುಲೆನ್ಸ್ ಹಾಗೂ ಮೊಬೈಲ್ ಮೆಡಿಕಲ್ ಯುನಿಟ್ ಇದೀಗ ಆಂಧ್ರ ಪ್ರದೇಶದಲ್ಲಿ ಲಭ್ಯವಿದೆ. ಅತ್ಯಾಧುನಿಕ ವೈದ್ಯಕೀಯ ಸಲಕರಣೆ ಹಾಗೂ ಎಲ್ಲಾ ಸೌಲಭ್ಯ ಹೊಂದಿರುವ ಈ ಆ್ಯಂಬುಲೆನ್ಸ್ ಜನರ ಸೇವೆಗೆ ಮುಕ್ತವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ