ಕಣ್ಣಂಚನ್ನು ತೇವಗೊಳಿಸುವ ಫೋಟೋ... ಸ್ಪೂರ್ತಿದಾಯಕ ಸಂದೇಶ ನೀಡಿದ ಆನಂದ್‌ ಮಹೀಂದ್ರಾ

By Suvarna News  |  First Published Jan 1, 2022, 6:36 PM IST
  • ಸ್ಪೂರ್ತಿದಾಯಕ ಫೋಟೋ ಶೇರ್‌ ಮಾಡಿದ ಆನಂದ್‌ ಮಹೀಂದ್ರಾ
  • ತಳ್ಳು ಗಾಡಿ ಮೇಲೆ ಕುಳಿತು ಪಠ್ಯ ಬರೆಯುತ್ತಿರುವ ಬಾಲಕ
  • ಕಣ್ಣಂಚಿನಲ್ಲಿ ನೀರು ತರಿಸುತಿದೆ ಈ ಫೋಟೋ
     

ಮುಂಬೈ(ಡಿ.1): ಕೈಗಾರಿಕೋದ್ಯಮಿ, ಮಹೀಂದ್ರಾ & ಮಹೀಂದ್ರಾ ಗ್ರೂಪ್‌ನ ಮಾಲೀಕ ಆನಂದ್‌ ಮಹೀಂದ್ರ ಸಾಮಾಜಿಕ ಜಾಲತಾಣಗಳಲ್ಲಿ ಸದಾ ಆಕ್ಟಿವ್‌. ಕಷ್ಟದಲ್ಲಿರುವ ಹಲವರಿಗೆ ನೆರವಾಗಿರುವ ಆನಂದ್‌, ಪ್ರತಿಭೆ ಇದ್ದು, ಬಡತನದಿಂದಾಗಿ ಮುಂದೆ ಬರಲಾಗದ ಅನೇಕರಿಗೆ ನೆರವಿನ ಹಸ್ತ ಚಾಚಿದ್ದಾರೆ. ಈಗ ಟ್ವಿಟ್ಟರ್‌ನಲ್ಲಿ ಅವರು ಕಣ್ಣಂಚಿನಲ್ಲಿ ನೀರು ಬರುವಂತಹ ಫೋಟೋವೊಂದನ್ನು ಶೇರ್‌ ಮಾಡಿದ್ದು, ಇದು 2021ರ ನನ್ನ ಫೇವರಿಟ್‌ ಫೋಟೋ ಎಂದು ಕ್ಯಾಪ್ಷನ್‌ ನೀಡಿದ್ದಾರೆ. ಈ ಫೋಟೋದಲ್ಲಿ  ತಳ್ಳು ಗಾಡಿಯ ಮೇಲೆ ಒಂದು ಹಳೆಯ ಸೂಟ್‌ಕೇಸ್‌ ಇದ್ದು, ಅದರಲ್ಲಿ ಸಮವಸ್ತ್ರ ತೊಟ್ಟ ಶಾಲಾ ಬಾಲಕನೋರ್ವ ಕುಳಿತುಕೊಂಡು ಪಠ್ಯ ಬರೆಯುತ್ತಿದ್ದು,  ಅದರ ಪಕ್ಕದಲ್ಲೇ ಒಬ್ಬರು ವ್ಯಕ್ತಿ(ಬಹುಶಃ ಬಾಲಕನ ತಂದೆ) ನಿಂತು ನೋಡುತ್ತಿರುವ ದೃಶ್ಯವಿದೆ. 

ಆನಂದ್ ಮಹೀಂದ್ರಾ ಅವರ  ಟ್ವಿಟ್ಟರ್‌ (Twitter) ಖಾತೆಯು ಹಾಸ್ಯದ, ಚಿಂತನೆ ಪ್ರಚೋದಕ ಮತ್ತು ಸ್ಪೂರ್ತಿದಾಯಕ ಪೋಸ್ಟ್‌ಗಳ ಸಂಯೋಜನೆಯಾಗಿದೆ. ಈ ಸ್ಪೂರ್ತಿದಾಯಕ ಫೋಟೋವನ್ನು ಶೇರ್‌ ಮಾಡುವ ಮೂಲಕ ಆನಂದ್‌ ಮಹೀಂದ್ರಾ ಟ್ವಿಟ್ಟರ್‌ನಲ್ಲಿ ಎಲ್ಲರಿಗೂ ಹೊಸ ವರ್ಷದ ಶುಭಾಶಯ ತಿಳಿಸಿದರು. ಇವರ ಕೆಲವು ಪೋಸ್ಟ್‌ಗಳು ತಮಾಷೆಯಾಗಿದ್ದರೆ ಮತ್ತೂ ಕೆಲವು ಎಲ್ಲರ ಹೃದಯವನ್ನು ಗೆದ್ದು ಕಣ್ಣು ತೇವಗೊಳ್ಳುವಂತೆ ಮಾಡುತ್ತದೆ. 

And here’s my favourite photo of the year. Apologies, I don’t know who took it so cannot acknowledge the photographer. It showed up in my inbox. Hope, Hard Work, Optimism. The essence of why we live…Once again, have a fulfilling New Year. pic.twitter.com/TwucYZruQA

— anand mahindra (@anandmahindra)

Tap to resize

Latest Videos

ಈ ವರ್ಷದ ನನ್ನ ನೆಚ್ಚಿನ ಫೋಟೋ ಇಲ್ಲಿದೆ. ಒಬ್ಬ ವ್ಯಕ್ತಿ ತನ್ನ ತಳ್ಳುಗಾಡಿಯ ಮುಂದೆ ನಿಂತಿದ್ದಾನೆ. ಆತ ತುಂಬಾ ಚಿಂತೆಯಿಂದ ಇರುವಂತೆ ಕಾಣುತ್ತಿದೆ. ಹಾಗೂ ಶಾಲಾ ಯುನಿಫಾರ್ಮ್‌ ತೊಟ್ಟು ಗಾಡಿಯ ಮೇಲೆ ಇರುವ ಹಳೆಯ ಸೂಟ್‌ಕೇಸ್ ಮೇಲೆ ಮಗ ಕುಳಿತಿದ್ದಾನೆ. ಈ ಫೋಟೋವನ್ನು ಯಾರು ತೆಗೆದಿದ್ದಾರೆ ಎಂದು ನನಗೆ ಗೊತ್ತಿಲ್ಲ. ಇದು ನನ್ನ ಇನ್‌ಬಾಕ್ಸ್‌ನಲ್ಲಿ ಇತ್ತು. ಭರವಸೆ, ಕಠಿಣ ಪರಿಶ್ರಮ, ಆಶಾವಾದ, ನಾವು ಏಕೆ ಬದುಕುತ್ತೇವೆ ಎಂಬುದರ ಸಾರ ಈ ಫೋಟೋದಲ್ಲಿದೆ. ಮತ್ತೊಮ್ಮೆ ಹೊಸ ವರ್ಷದ ಶುಭಾಶಯ ಎಂದು ಬರೆದು ಆನಂದ್‌ ಮಹೀಂದ್ರ ಟ್ವಿಟ್‌ ಮಾಡಿದ್ದಾರೆ. 

Vehicle Built from Scrap: ಗುಜುರಿ ವಸ್ತುಗಳಿಂದ ಹೊಸ ವಾಹನ ನಿರ್ಮಾಣ: ಆನಂದ್ ಮಹೀಂದ್ರಾ ಇಂಪ್ರೆಸ್! 

ಆನಂದ್‌ ಮಹೀಂದ್ರಾ ಅವರು, ಕೆಲವು ವೈರಲ್ ಆಗಿರುವ ವಿಡಿಯೋಗಳಲ್ಲಿರುವ ವ್ಯಕ್ತಿಗಳನ್ನು ಪತ್ತೆ ಹಚ್ಚಿ ಅವರಿಗೆ ನೆರವು ನೀಡಿದ್ದಾರೆ. ಇತ್ತೀಚೆಗೆ ಮಹಾರಾಷ್ಟ್ರದ ವ್ಯಕ್ತಿಯೊಬ್ಬರು ಸ್ಕ್ರ್ಯಾಪ್ ಮೆಟಲ್ (Scrap Metal) ಬಳಸಿ ನಿರ್ಮಿಸಿದ ನಾಲ್ಕು ಚಕ್ರದ ವಾಹನದಿಂದ (4 Wheeler) ಆನಂದ್‌ ಮಹೀಂದ್ರ ಇಂಪ್ರೆಸ್‌ ಆಗಿದ್ದರು. ಯೂಟ್ಯೂಬ್ ಚಾನೆಲ್ ಹಿಸ್ಟೋರಿಕಾನೊ ಈ ಬಗ್ಗೆ ವರದಿ ಮಾಡಿದ್ದು ದತ್ತಾತ್ರಯ ಲೋಹಾರ್ ( Dattatraya Lohar) ಅವರು ತಮ್ಮ ಮಗನ ಆಸೆಗಳನ್ನು ಪೂರೈಸಲು ವಾಹನವನ್ನು ನಿರ್ಮಿಸಿದರು ಎಂದು ಹೇಳಿದೆ.  ನಾಲ್ಕು ಚಕ್ರದ ವಾಹನವನ್ನು ಕೇವಲ ₹60,000 ಹೂಡಿಕೆಯಲ್ಲಿ ತಯಾರಿಸಲಾಗಿದೆ ಮತ್ತು ದ್ವಿಚಕ್ರ ವಾಹನಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಕಿಕ್-ಸ್ಟಾರ್ಟ್ (Kick Start) ಕಾರ್ಯವಿಧಾನವನ್ನು ಇದರಲ್ಲಿ ಬಳಸಲಾಗಿದೆ. 

Anand Mahindra Offer ಕೈ-ಕಾಲಿಲ್ಲದ ಪರಿಶ್ರಮಿಗೆ ಆನಂದ್ ಮಹೀಂದ್ರ ಉದ್ಯೋಗ ಆಫರ್, ಮುಗ್ದ ಸಾಧಕನ ಹಿಂದಿಂದೆ ನೋವಿನ ಕತೆ!

click me!