Mizoram traffic Rules ಕಟ್ಟು ನಿಟ್ಟಾಗಿ ಟ್ರಾಫಿಕ್ ರೂಲ್ಸ್ ಪಾಲಿಸ್ತಾರೆ ಮಿಜೋರಾಂ ಜನ, ದೇಶದ ಗಮಸೆಳೆಯಿತು ಮಹೀಂದ್ರ ಟ್ವೀಟ್!

By Suvarna News  |  First Published Mar 2, 2022, 8:35 PM IST
  • ಟ್ರಾಫಿಕ್ ನಿಯಮ ಪಾಲನೆಯಲ್ಲಿ ಭಾರತೀಯ ತುಸು ಹಿಂದೆ
  • ಮಿಜೋರಾಂ ಜನತೆ ಎಲ್ಲರಿಗಿಂತ ಭಿನ್ನ, ಚಾಚು ತಪ್ಪದೆ ರೂಲ್ಸ್ ಫಾಲೋ
  • ಮಿಜೋರಾಂ ಜನತೆ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ ಮಹೀಂದ್ರ
     

ನವದೆಹಲಿ(ಮಾ.01): ನಗರ ವಾಸಿಗಳ ಪ್ರತಿ ದಿನ ಸಮಸ್ಯೆ ಟ್ರಾಫಿಕ್. ಇದೀಗ ಸಣ್ಣ ಪಟ್ಟಣಕ್ಕೂ ವಿಸ್ತರಿಸಿದೆ. ಟ್ರಾಫಿಕ್ ಸಮಸ್ಯೆಯಿಂದ ಬಹುತೇಕರು ಟ್ರಾಫಿಕ್ ನಿಯಮ ಪಾಲನೆಯನ್ನೇ ಗಾಳಿಗೆ ತೂರುತ್ತಾರೆ. ಹೀಗಾಗಿ ಸಿಗ್ನಲ್ ಬಿದ್ದಾಗ ಟುವೇ ರಸ್ತೆಯಾಗಿದ್ದಾರೆ, ಅದು ಒನ್ ವೇಯಾಗಿ ಬದಲಾಗುತ್ತದೆ. ಸಿಗ್ನಲ್ ಬಿಟ್ಟಾಗ ಎರಡು ಬದಿಯಿಂದ ವಾಹನ ಚಲಿಸಲಾಗದೇ ಮತ್ತೆ ಟ್ರಾಪಿಕ್ ಜಾಮ್. ಇದು ಭಾರತದ ಬಹುತೇಕ ಕಡೆಗಳಲ್ಲಿ ಕಾಣಸಿಗುವ ಚಿತ್ರಣ. ಆದರೆ ಮಿಜೋರಾಂನಲ್ಲಿ ಈ ಚಿತ್ರಣ ಕಾಣಸಿಗುವುದಿಲ್ಲ. ಮಿಜೋರಾಂ ಜನ ಕಟ್ಟು ನಿಟ್ಟಾಗಿ ಟ್ರಾಫಿಕ್ ನಿಯಮ ಪಾಲಿಸುತ್ತಾರೆ. ಈ ಕುರಿತು ಉದ್ಯಮಿ ಆನಂದ್ ಮಹೀಂದ್ರ ಮಾಡಿದ ಟ್ವೀಟ್ ಇದೀಗ ದೇಶದ ಗಮನಸೆಳೆದಿದೆ.

ಟ್ರಾಫಿಕ್‌ನಲ್ಲಿ ಸಿಲುಕಿದ ವಾಹನ ಸವಾರರು ಪಾಲಿಸಬೇಕಾದ ಹಲವು ನಿಯಮಗಳಿವೆ. ಆದರೆ ಬಹುತೇಕರ ಪಾಲಿಸುುದಿಲ್ಲ. ರಸ್ತೆ ಸಂಪೂರ್ಣ ನಮ್ಮದೆ ಎಂದು ಮಧ್ಯದ ಗೆರೆ ದಾಟಿ ಮುಂದೆ ಸಾಗುತ್ತಾರೆ. ಆದರೆ ಮಿಜೋರಾಂ ಜನ ಗೆರೆ ದಾಟಿ ಒಬ್ಬರೂ ಒಂದು ಕಾಲನ್ನೂ ಇಟ್ಟಿಲ್ಲ. ಈ ನಿಯಮ ಪಾಲನೆ ಹಾಗೂ ಶಿಸ್ತು ಎಲ್ಲರೂ ರೂಢಿಸಿಕೊಳ್ಳಬೇಕು ಎಂದು ಆನಂದ್ ಮಹೀಂದ್ರ ಹೇಳಿದ್ದಾರೆ.

Latest Videos

undefined

Nairobi Police Car ಕೀನ್ಯಾ ಪೊಲೀಸರ ಸೇವೆಗೆ ಮಹೀಂದ್ರ ಸ್ಕಾರ್ಪಿಯೋ, ಸಂತಸ ಹಂಚಿಕೊಂಡ ಆನಂದ್ ಮಹೀಂದ್ರ!

ಟ್ವೀಟ್ ಮೂಲಕ ಆನಂದ್ ಮಹೀಂದ್ರ ಮಿಜೋರಾಂ ಟ್ರಾಫಿಕ್ ನಿಯಮ ಪಾಲನೆ ಕುರಿತು ವಿವರಿಸಿದ್ದಾರೆ. ಇದರ ಜೊತೆಗೆ ಭಾರತೀಯರನ್ನು ಎಚ್ಚರಿಸಿದ್ದಾರೆ. ಎಂಥಾ ಅತ್ಯುತ್ತಮ ಚಿತ್ರ. ಒಂದೇ ಒಂದು ವಾಹನ ರೋಡ್ ಮಾರ್ಕ್‌ನಿಂದ ಹೊರಹೋಗಿಲ್ಲ. ಇದು ನಮ್ಮೆಲ್ಲರಿಗೂ ಸ್ಪೂರ್ತಿ ಹಾಗೂ ಮಹತ್ವದ ಸಂದೇಶ ಸಾರುವ ಚಿತ್ರವಾಗಿದೆ. ನಾವೆಲ್ಲರು ನಮ್ಮ ಜೀವನದ ಗುಣಮಟ್ಟತೆಯನ್ನು ಹೆಚ್ಚಿಸುವಲ್ಲಿ ಗಮನಹರಿಸಬೇಕು. ಮಿಜೋರಾಂ ಜನತೆಗೆ ಬಿಗ್ ಸಲ್ಯೂಟ್ ಎಂದು ಆನಂದ್ ಮಹೀಂದ್ರ ಹೇಳಿದ್ದಾರೆ.

 

What a terrific pic; Not even one vehicle straying over the road marker. Inspirational, with a strong message: it’s up to US to improve the quality of our lives. Play by the rules… A big shoutout to Mizoram. 👏🏼👏🏼👏🏼 https://t.co/kVu4AbEYq8

— anand mahindra (@anandmahindra)

ಮಿಜೋರಾಂನಲ್ಲಿ ಎಲ್ಲರೂ ಟ್ರಾಫಿಕ್ ನಿಯಮ ಪಾಲಿಸುತ್ತಾರೆ. ಇಲ್ಲಿ ಪೊಲೀಸರು ಕಟ್ಟು ನಿಟ್ಟಾಗಿ ಟ್ರಾಫಿಕ್ ನಿಯಮ ಪಾಲನೆ ಮಾಡುವಂತೆ ನೋಡಿಕೊಳ್ಳುತ್ತಾರೆ. ರಾಜಕಾರಣಿಗಳು, ಮಂತ್ರಿಗಳು, ಶಾಸಕರು ಕೂಡ ಮಿಜೋರಾಂನಲ್ಲಿ ಟ್ರಾಫಿಕ್ ನಿಯಮ ಉಲ್ಲಂಘನೆ ಮಾಡುವುದಿಲ್ಲ. ಮಾಡಿದ ಉದಾಹರೆಗಳು ತೀರಾ ವಿರಳ. ಇತರ ರಾಜ್ಯ ಹಾಗೂ ನಗರಗಳಲ್ಲಿ ಪರಿಸ್ಥಿತಿ ಹೀಗಿಲ್ಲ.

ಕಣ್ಣಂಚನ್ನು ತೇವಗೊಳಿಸುವ ಫೋಟೋ... ಸ್ಪೂರ್ತಿದಾಯಕ ಸಂದೇಶ ನೀಡಿದ ಆನಂದ್‌ ಮಹೀಂದ್ರಾ

ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯವಾಗಿರುವ ಆನಂದ್ ಮಹೀಂದ್ರ ದೇಶದ ಗಮನಸೆಳೆಯುವ ಹಲವು ವಿಚಾರಗಳ ಕುರಿತು ಬೆಳಕು ಚೆಲ್ಲಿದ್ದಾರೆ. ಇಷ್ಟೇ ಅಲ್ಲ  ಹಲವು ಸಾಮಾಜಿಕ ಕಾರ್ಯಗಳಲ್ಲಿ ಆನಂದ್ ಮಹೀಂದ್ರ ತೋಡಗಿಸಿಕೊಂಡಿದ್ದಾರೆ. ಹಲವರಿಗೆ ಉಚಿತ ವಾಹನ ನೀಡಿ ನೆರವಾಗಿದ್ದಾರೆ.

30 ವರ್ಷ ಶ್ರಮಿಸಿ 3 ಕಿ.ಮೀ. ಕಾಲುವೆ ತೋಡಿದ ರೈತನಿಗೆ ಮಹಿಂದ್ರಾ ಟ್ರಾಕ್ಟರ್‌ ಗಿಫ್ಟ್‌
ಬಿಹಾರದಲ್ಲಿ ಸ್ವಂತ ಪರಿಶ್ರಮದಿಂದ 3 ಕಿ.ಮೀ. ಉದ್ದದ ಕಾಲುವೆ ನಿರ್ಮಿಸಿದ ರೈತನಿಗೆ ಮಹೀಂದ್ರಾ ಗ್ರೂಪ್‌ನ ಮುಖ್ಯಸ್ಥ ಆನಂದ್‌ ಮಹೀಂದ್ರಾ ಅವರು ಟ್ರಾಕ್ಟರ್‌ವೊಂದನ್ನು ಉಡುಗೊರೆ ನೀಡುವುದಾಗಿ ತಿಳಿಸಿದ್ದಾರೆ. ಬಿಹಾರದ ಗಯಾ ಜಿಲ್ಲೆಯ ಲಹ್ತುವಾ ಪ್ರದೇಶದ ಕೋಠಿಲಾವಾ ಎಂಬ ಗ್ರಾಮಕ್ಕೆ ಸಮೀಪದ ಗುಡ್ಡವೊಂದರಿಂದ ನೀರು ಹರಿಸಲು ಲೌಂಗಿ ಬುಹಿಯಾನ್‌ ಏಕಾಂಗಿಯಾಗಿ 30 ವರ್ಷ ಶ್ರಮಿಸಿ ಕಾಲುವೆ ನಿರ್ಮಿಸಿ ದೇಶದ ಗಮನ ಸೆಳೆದಿದ್ದರು. ಬಿಹಾರದ ರೈತನ ಈ ಸಾಧನೆ ತಾಜ್‌ ಮಹಲ್‌ ಅಥವಾ ಪಿರಾಮಿಡ್‌ ಸ್ಮಾರಕಗಳಿಗೆ ಸಮ. ನಾವು ಅವರಿಗೆ ಟ್ರಾಕ್ಟರ್‌ವೊಂದನ್ನು ಉಡುಗೊರೆ ನೀಡಲು ಬಯಸುತ್ತೇವೆ. ಒಂದು ವೇಳೆ ಅವರು ಮಹಿಂದ್ರಾ ಟ್ರ್ಯಾಕ್ಟರ್‌ ಅನ್ನು ಬಳಸಲು ಒಪ್ಪಿದರೆ ಅದು ನಮ್ಮ ಗೌರವ ಎಂಬುದಾಗಿ ಭಾವಿಸುತ್ತೇವೆ ಎಂದು ಆನಂದ್‌ ಮಹಿಂದ್ರಾ ಟ್ವೀಟ್‌ ಮಾಡಿದ್ದಾರೆ.

ನೀರಜ್‌ಗೆ ಸಿಎಸ್‌ಕೆಯಿಂದ 1 ಕೋಟಿ ರು. ಬಹುಮಾನ!
ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಐತಿಹಾಸಿಕ ಚಿನ್ನದ ಪದಕ ಗೆದ್ದ ಜಾವೆಲಿನ್‌ ಥ್ರೋ ಪಟು ನೀರಜ್‌ ಚೋಪ್ರಾರನ್ನು ಚೆನ್ನೈ ಸೂಪರ್‌ ಕಿಂಗ್ಸ್‌ ವತಿಯಿಂದ ಭಾನುವಾರ ಸನ್ಮಾನ ಮಾಡಲಾಯಿತು. ಕಾರ‍್ಯಕ್ರಮದಲ್ಲಿ ಚೆನ್ನೈ ತಂಡದ ಅಧಿಕಾರಿಗಳು ನೀರಜ್‌ಗೆ 1 ಕೋಟಿ ರು.ನ ಚೆಕ್‌ ಹಸ್ತಾಂತರಿಸಿದರು. ಜೊತೆಗೆ ಟೋಕಿಯೋದಲ್ಲಿ ನೀರಜ್‌ರ ಜಾವೆಲಿನ್‌ ಎಸೆತದ ದೂರವಾದ 87.58 ಮೀ. ನೆನಪಿಗಾಗಿ ‘8758’ ಸಂಖ್ಯೆಯ ಚೆನ್ನೈ ತಂಡದ ಜೆರ್ಸಿಯನ್ನೂ ನೀರಜ್‌ಗೆ ಕೊಡುಗೆಯಾಗಿ ನೀಡಲಾಯಿತು.

ಇದೇ ವೇಳೆ ಮಹಿಂದ್ರಾ ಸಂಸ್ಥೆಯ ಮುಖ್ಯಸ್ಥ ಆನಂದ್‌ ಮಹಿಂದ್ರಾ ನೀರಜ್‌ ಚೋಪ್ರಾ ಹಾಗೂ ಪ್ಯಾರಾಲಿಂಪಿಕ್‌ ಚಿನ್ನ ವಿಜೇತ ಜಾವೆಲಿನ್‌ ಥ್ರೋಪಟು ಸುಮಿತ್‌ ಅಂತಿಲ್‌ಗೆ ಎಕ್ಸ್‌ಯುವಿ 700 ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ. ಕಾರಿನ ಮೇಲೆ 87.58 ಎಂಬ ಸ್ಟಿಕ್ಕರ್‌ ಅಂಟಿಸಲಾಗಿದೆ.
 

click me!