ಭಾರತದ ಆರ್ಥಿಕ ಭವಿಷ್ಯದ ಬಗ್ಗೆ IMF ಅಚ್ಚರಿಯ ವರದಿ! ಅಮೆರಿಕಾ, ಚೀನಾಗೆ ಎಷ್ಟನೇ ಸ್ಥಾನ?

Published : Oct 14, 2026, 08:02 AM IST
india economy

ಸಾರಾಂಶ

ಜಾಗತಿಕ ಬಿಕ್ಕಟ್ಟಿನ ನಡುವೆಯೂ 2026-27 ಮತ್ತು 2027-28ರಲ್ಲಿ ಭಾರತ ಶೇ.7ರಷ್ಟು ಆರ್ಥಿಕ ಪ್ರಗತಿ ಸಾಧಿಸಲಿದೆ ಎಂದು ಐಎಂಎಫ್‌ ವರದಿ ಹೇಳಿದೆ. ಪ್ರಬಲ ದೇಶೀ ಬೇಡಿಕೆ ಮತ್ತು ಯುವಜನತೆಯಿಂದಾಗಿ ಭಾರತ ವಿಶ್ವದಲ್ಲೇ ಅತಿ ವೇಗದ ಆರ್ಥಿಕತೆಯಾಗಲಿದೆ.

ನವದೆಹಲಿ: ಜಾಗತಿಕ ಅನಿಶ್ಚಿತತೆ, ಬಿಕ್ಕಟ್ಟಿನ ಹೊರತಾಗಿಯೂ 2026-27 ಮತ್ತು 2027-28ರ ಹಣಕಾಸು ವರ್ಷದಲ್ಲಿ ಭಾರತ ಶೇ.7ರ ದರದಲ್ಲಿ ಆರ್ಥಿಕ ಪ್ರಗತಿ ಸಾಧಿಸಲಿದೆ. ಈ ಮೂಲಕ ವಿಶ್ವದಲ್ಲೇ ಅತ್ಯಂತ ವೇಗದ ಆರ್ಥಿಕತೆಯನ್ನು ಹಿರಿಮೆ ದಾಖಲಿಸಲಿದೆ ಎಂದು ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆ (ಐಎಂಎಫ್‌) ತನ್ನ ಹೊಸ ವರದಿಯಲ್ಲಿ ಹೇಳಿದೆ.

ದೇಶದ ಆರ್ಥಿಕ ಬೆಳವಣಿಗೆಗೆ ಉತ್ತೇಜನ

ಪ್ರಬಲವಾದ ದೇಶೀ ಬೇಡಿಕೆ, ಬಲಿಷ್ಠವಾದ ಸೇವಾವಲಯದ ಚಟುವಟಿಕೆ ಮತ್ತು ಹೆಚ್ಚಿನ ಯುವಜನತೆಯು ದೇಶದ ಆರ್ಥಿಕ ಬೆಳವಣಿಗೆಗೆ ಉತ್ತೇಜನ ನೀಡಲಿದೆ ಎಂದು ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆ ವರದಿ ಹೇಳಿದೆ.

ಭಾರತದ ಆರ್ಥಿಕತೆಯ ಬೆಳವಣಿಗೆ ವೇಗ ಮೇಲ್ದರ್ಜೆಗೆ ಏರಿಕೆ

2026-27ರ ವೇಳೆಗೆ ಭಾರತದ ಆರ್ಥಿಕ ಬೆಳವಣಿಗೆಯು ಶೇ.6.4, ಅದೇ ರೀತಿ 2026-27ನೇ ಸಾಲಿನಲ್ಲಿ ಶೇ.6.7ರಷ್ಟಿರಲಿದೆ ಎಂದು ಈ ಹಿಂದೆ ಬಿಡುಗಡೆ ಮಾಡಿದ ವರದಿಯಲ್ಲಿ ಐಎಂಎಫ್‌ ಅಂದಾಜಿಸಿತ್ತು. ಆದರೆ ಇದೀಗ ಬಿಡುಗಡೆ ಮಾಡಿರುವ ಹೊಸ ವರದಿಯು ಆರ್ಥಿಕತೆಯ ಬೆಳವಣಿಗೆ ವೇಗವನ್ನು ಮೇಲ್ದರ್ಜೆಗೇರಿಸಿದೆ. ಇಷ್ಟಾದರೂ ತೈಲದರ ಏರಿಕೆಯು ಭಾರತದ ಆರ್ಥಿಕತೆಯ ಬೆಳವಣಿಗೆ ಪಾಲಿಗೆ ತಲೆನೋವಾಗಿ ಪರಿಣಮಿಸಲಿದೆ ಎಂದು ಹೇಳಲಾಗಿದೆ.

ಐಟಿ, ಬ್ಯಾಂಕ್‌, ರುಪಾಯಿ, ನಿರ್ಮಲಾ ಸಿಹಿಗೆ ಸೆನ್ಸೆಕ್ಸ್‌ 1109 ಅಂಕಗಳ ಏರಿಕೆ

ಮುಂಬೈ: ಬಾಂಬೆ ಷೇರುಪೇಟೆಯ ಸಂವೇದಿ ಸೂಚ್ಯಂಕವಾದ ಸೆನ್ಸೆಕ್ಸ್‌ ಮಂಗಳವಾರ 1109 ಅಂಕಗಳ ಭರ್ಜರಿ ಏರಿಕೆ ಕಂಡು 73033 ಅಂಕಗಳಲ್ಲಿ ಮುಕ್ತಾಯವಾಗಿದೆ. ಕಚ್ಚಾತೈಲದ ಬೆಲೆ ಇಳಿಕೆ, ರುಪಾಯಿ ಮೌಲ್ಯ ಏರಿಕೆ, ಐಟಿ, ಬ್ಯಾಂಕಿಂಗ್‌ ವಲಯದ ಷೇರುಗಳ ಬೆಲೆ ಏರಿಕೆ ಹಾಗೂ ಲಾಂಗ್‌ ಟರ್ಮ್‌ ಕ್ಯಾಪಿಟಲ್‌ ಗೇನ್ಸ್‌ ಟ್ಯಾಕ್ಸ್‌ ಹಾಗೂ ಎಸ್‌ಟಿಟಿ ಕುರಿತು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಆಡಿದ ಭರವಸೆದಾಯಕ ಮಾತುಗಳು ಸೆನ್ಸೆಕ್ಸ್ ಏರಿಕೆಗೆ ಕಾರಣವಾಗಿದೆ. ಈ ಏರಿಕೆ ಪರಿಣಾಮ ಹೂಡಿಕೆದಾರರ ಸಂಪತ್ತು ಒಂದೇ ದಿನ 4.14 ಲಕ್ಷ ಕೋಟಿ ರು.ನಷ್ಟು ಏರಿದೆ.

ದೇಶ2026-272027-28
ಭಾರತಶೇ.7ಶೇ.7
ಅಮೆರಿಕಾಶೇ.4.5ಶೇ.4
ಚೀನಾಶೇ.2.3ಶೇ.2.3
ಯುರೋಪಶೇ.1.1ಶೇ.1.2
ಬ್ರಿಟನ್ಶೇ.1.3ಶೇ1.2.
ಜಪಾನ್ಶೇ.0.7ಶೇ.0.7

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಎಲೆಕ್ಟ್ರಾನಿಕ್‌ ಯುದ್ಧ ನಡೆಸಬಲ್ಲ ಸಮರ್ಥಕ್‌ 16ಕ್ಕೆ ಕಾರವಾರದಲ್ಲಿ ನೌಕಾಪಡೆಗೆ ಸೇರ್ಪಡೆ
India Latest News Live: ಭಾರತದ ಆರ್ಥಿಕ ಭವಿಷ್ಯದ ಬಗ್ಗೆ IMF ಅಚ್ಚರಿಯ ವರದಿ! ಅಮೆರಿಕಾ, ಚೀನಾಗೆ ಎಷ್ಟನೇ ಸ್ಥಾನ?