
ಅಮರಾವತಿ: ಮಹಾರಾಷ್ಟ್ರದ ಅಮರಾವತಿಯಲ್ಲಿ 180 ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಆರೋಪಿ ಆಯಾಜ್ ಖಾನ್ ತನ್ವೀರ್‌ನನ್ನು ಪೊಲೀಸರು ಬಂಧಿಸಿ ನಗರದ ಬೀದಿಯಲ್ಲಿ ಮೆರವಣಿಗೆ ಮಾಡಿದ್ದು, ಈ ವಿಚಾರ ಈಗ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಏಪ್ರಿಲ್ 15ರಂದು ಆಯಾಜ್ ಖಾನ್‌ನನ್ನು ಪೊಲೀಸರು ಬಂಧಿಸಿದ್ದರು. ಆರೋಪಿ 180 ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯವೆಸಗಿ ಅವುಗಳನ್ನು ಚಿತ್ರೀಕರಿಸಿಕೊಂಡಿದ್ದು, ನಂತರ ಮಕ್ಕಳನ್ನು ಬ್ಲಾಕ್‌ಮೇಲ್ ಮಾಡುವುದಕ್ಕೆ ಈ ವೀಡಿಯೋಗಳನ್ನು ಬಳಸುತ್ತಿದ್ದನು. ಈತನ ಮೊಬೈಲ್ ಪೋನ್‌ಗಳಲ್ಲಿ 350ಕ್ಕೂ ಹೆಚ್ಚು ಬೇರೆ ಬೇರೆ ಅಪ್ರಾಪ್ತರ 350ಕ್ಕೂ ಹೆಚ್ಚು ಅಶ್ಲೀಲ ವೀಡಿಯೋಗಳು ಪತ್ತೆಯಾಗಿದ್ದವು. ಅಮರಾವತಿಯ ಪರತ್ವಾಡ ನಿವಾಸಿಯಾಗಿದ್ದ ಈತನನ್ನು ಮಹಾರಾಷ್ಟ್ರದ ರಾಜ್ಯಸಭಾ ಬಿಜೆಪಿ ಸಂಸದ ಅನಿಲ್ ಬೊಂಡೆ ಅವರು ನೀಡಿದ ದೂರಿನ ಮೇರೆಗೆ ಬಂಧಿಸಲಾಗಿತ್ತು.
ಆರೋಪಿ ತನ್ನ ಮೊಬೈಲ್ ಫೋನ್‌ನಲ್ಲಿದ್ದ ಅಶ್ಲೀಲ ವೀಡಿಯೋಗಳನ್ನು ಮಕ್ಕಳನ್ನು ಬ್ಲಾಕ್‌ಮೇಲ್ ಮಾಡುವುದಕ್ಕೆ ಹಾಗೂ ಅವರನ್ನು ಬಲವಂತವಾಗಿ ವೇಶ್ಯಾವಾಟಿಕೆಗೆ ಎಳೆಯುವುದಕ್ಕೆ ಬಳಸುತ್ತಿದ್ದ ಎಂದು ವರದಿಯಾಗಿದೆ. ಇವುಗಳಲ್ಲಿ ಕೆಲ ವೀಡಿಯೋಗಳನ್ನು ಇಂಟರ್‌ನೆಟ್‌ನಲ್ಲಿ ವ್ಯಾಪಕವಾಗಿ ಹರಿಬಿಡಲಾಗಿತ್ತು. ವಾಟ್ಸಾಪ್ ಹಾಗೂ ಸ್ನ್ಯಾಪ್‌ಚಾಟ್ ಮೂಲಕ ಅಪ್ರಾಪ್ತರನ್ನು ವ್ಯವಸ್ಥಿತವಾಗಿ ಟಾರ್ಗೆಟ್ ಮಾಡಲಾಗುತ್ತಿತ್ತು. ಈ ಸಂಬಂಧ ರಾಜ್ಯಸಭಾ ಸಂಸದ ಅನಿಲ್ ಬೊಂಡೆ ಅವರು ಅಮರಾವತಿಯ ಗ್ರಾಮೀಣ ಎಸ್‌ಪಿ ವಿಶಾಲ್ ಬೊಂಡೆ ಅವರಿಗೆ ಲಿಖಿತ ದೂರು ದಾಖಲಿಸಿದ್ದರು.
ಆರೋಪಿ ಮೊಹಮ್ಮದ್ ಅಯಾಜ್ ಈ ಹಿಂದೆ AIMIM ಸಂಘಟನೆಯ ಪದಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದ ಎಂಬ ಆರೋಪ ಈತನ ಬಂಧನದ ವೇಳೆ ಕೇಳಿ ಬಂದಿದೆ. ಆತ ತನ್ನ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿರುವ ವೀಡಿಯೊಗಳು ಮತ್ತು ಫೋಟೋಗಳಲ್ಲಿ ಕಂಡು ಬರುವಂತೆ ಆತ ಅವರು AIMIMನ ಅಮರಾವತಿ ವಿಭಾಗದ ಅಧ್ಯಕ್ಷ ಹಾಜಿ ಇರ್ಫಾನ್ ಖಾನ್ ಅವರಿಂದ ಪತ್ರವನ್ನು ಸ್ವೀಕರಿಸುತ್ತಿರುವುದು ಹಾಗೂ ಪಕ್ಷದ ಸಮಾವೇಶಗಳಲ್ಲಿ ಭಾಗವಹಿಸುತ್ತಿದ್ದಂತ ಫೋಟೋ ವೀಡಿಯೋಗಳಿವೆ. ಆದರೆ, ಪ್ರಕರಣ ಬೆಳಕಿಗೆ ಬಂದ ನಂತರ ಅಂತಹ ಹಲವಾರು ವೀಡಿಯೊಗಳನ್ನು ಆತನ ಇನ್‌ಸ್ಟಾಗ್ರಾಮ್ ಖಾತೆಯಿಂದ ಅಳಿಸಿ ಹಾಕಲಾಗಿದೆ ಎಂದು ವರದಿಯಾಗಿದೆ.
ಆದರೆ ಈಗ ಈತನನ್ನು ಮಹಾರಾಷ್ಟ್ರದ ಪೊಲೀಸರು ಬೀದಿಯಲ್ಲಿ ಮೆರವಣಿಗೆ ಮಾಡಿದ್ದು, ಇದರ ವೀಡಿಯೋ ವೈರಲ್ ಆಗಿದೆ. ಅನೇಕರು ಈ ವೀಡಿಯೋಗೆ ಕಾಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ: ಬಸವ ವಸತಿ ಯೋಜನೆಯ ಹಣ ಮಂಜೂರು ಮಾಡಲು ಲಂಚಕ್ಕೆ ಬೇಡಿಕೆ: ಗ್ರಾ.ಪಂ. ಕಂಪ್ಯೂಟರ್ ಆಪರೇಟರ್ ಲೋಕಾಬಲೆಗೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ