ಅಂಫಾನ್ ಚಂಡಮಾರುತಕ್ಕೆ ಸಿಲುಕಿದ ಪ.ಬಂಗಾಳ ನೆರವಿನ ಹಸ್ತ ನೀಡಿದ ಒಡಿಶಾ ಸಿಎಂ!

By Suvarna NewsFirst Published May 22, 2020, 8:46 PM IST
Highlights

ಅಂಫಾನ್ ಚಂಡಮಾರುತಕ್ಕೆ ಒಡಿಶಾ ಹಾಗೂ ಪಶ್ಚಮ ಬಂಗಾಳ ರಾಜ್ಯಗಳು ನಲುಗಿ ಹೋಗಿದೆ. ಅದರಲ್ಲೂ ಪ.ಬಂಗಾಳ ನಷ್ಟದ ಪ್ರಮಾಣ ಹೆಚ್ಚಿದೆ. ಇದೀಗ ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್, ಚಂಡಮಾರುತದಿಂದ ಜರ್ಝರಿತವಾಗ ಮಮತಾ ಬ್ಯಾನರ್ಜಿ ರಾಜ್ಯಕ್ಕೆ ನೆರವಿನ ಹಸ್ತ ಚಾಚಿದ್ದಾರೆ.

ಭುವನೇಶ್ವರ್(ಮೇ.22): ಅಂಫಾನ್ ಚಂಡಮಾರುತ್ತೆ ತುತ್ತಾದ ಭಾರತದ 2 ರಾಜ್ಯಗಳಾದ ಒಡಿಶಾ ಹಾಗೂ ಪಶ್ಚಿಮ ಬಂಗಾಳ ಜನ ಜೀವನ ಅಸ್ಥವ್ಯಸ್ಥವಾಗಿದೆ.  ಕೊರೋನಾ ವೈರಸ್ ಜೊತೆಗೆ ಬದುಕು ಚಂಡಮಾರುತದ ಜೊತೆ ಕೊಚ್ಚಿ ಹೋಗಿದೆ. ಎರಡು ರಾಜ್ಯಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ವೈಮಾನಿಕ ಸಮೀಕ್ಷೆ ನಡೆಸಿದ್ದಾರೆ.  ಪಶ್ಚಿಮ ಬಂಗಾಳದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹಾನಿ ಸಂಭವಿಸಿದೆ. ಇದೀಗ ಪ.ಬಂಗಾಳಕ್ಕೆ ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ನೆರವು ನೀಡುವ ಭರವಸೆ ನೀಡಿದ್ದಾರೆ.

ದೇಶಕ್ಕೆ 'ಸೂಪರ್‌ ಸೈಕ್ಲೋನ್' ಭೀತಿ: 195 ಕಿ.ಮೀ. ವೇಗದಲ್ಲಿ ಭೀಕರ ‘ಅಂಫನ್‌’!

Latest Videos

ಪ.ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಜೊತೆ ದೂರವಾಣಿ ಮಾತುಕತೆ ನಡೆಸಿದ ನವೀನ್ ಪಟ್ನಾಯಕ್, ಎಲ್ಲಾ ರೀತಿಯ ನೆರವು ನೀಡುವುದಾಗಿ ಹೇಳಿದ್ದಾರೆ. ಗಂಟೆಗೆ 190 ಕಿ.ಮೀ ವೇಗದಲ್ಲಿ ಚಲಿಸುವ ಅಂಫಾನ್ ಚಂಡಮಾರುತ ಬಂಗಾಳದಲ್ಲಿ 77 ಮಂದಿಯನ್ನು ಬಲಿಪಡೆದಿದೆ. ಜನರು ಮನೆಗಳನ್ನು ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ. ಹೀಗಾಗಿ ನವೀನ್ ಪಟ್ನಾಯಿಕ್ ನೆರವಿನ ಹಸ್ತ ಚಾಚಿದ್ದಾರೆ.

ಅಂಫನ್‌ ಎಫೆಕ್ಟ್: ರಾಜ್ಯದ ಹಲವೆಡೆ ಭಾರೀ ಮಳೆ!

ಪ್ರಧಾನಿ ನರೇಂದ್ರ ಮೋದಿ ಪಶ್ಚಿಮ ಬಂಗಾಳದಲ್ಲಿ ವೈಮಾನಿ ಸಮೀಕ್ಷೆ ನಡೆಸಿ 1000 ರೂಪಾಯಿ ನೆರವು ಘೋಷಿಸಿದ್ದಾರೆ. ಮೃತರ ಕುಟುಂಬಕ್ಕೆ 2 ಲಕ್ಷ ರೂಪಾಯಿ ಹಾಗೂ ಗಾಯಾಳುಗಳಿಗೆ 50,000 ರೂಪಾಯಿ ಪರಿಹಾರ ನೀಡಲಾಗುವುದು ಎಂದು ಮೋದಿ ಭರವಸೆ ನೀಡಿದ್ದಾರೆ. ಸಂಕಷ್ಟ ಪರಿಸ್ಥಿತಿಯಲ್ಲಿ ಕೇಂದ್ರ ಸರ್ಕಾರ ಪಶ್ಚಿಮ ಬಂಗಾಳದ ಜೊತೆ ನಿಲ್ಲಲಿದೆ. ಕೇಂದ್ರದ ತಂಡ ಪಶ್ಚಿಮ ಬಂಗಾಳಕ್ಕೆ ಬೇಟಿ ನೀಡಿ ನಷ್ಟದ ಮೊತ್ತ ಲೆಕ್ಕಹಾಕಲಿದೆ ಎಂದು ಮೋದಿ ಹೇಳಿದ್ದಾರೆ.
 

click me!