
ಕೇರಳ(ಮೇ.22): ಕೊರೋನಾ ವೈರಸ್ ವಕ್ಕರಿಸಿದ ಬಳಿಕ ಬಹುತೇಕರು ಸಾಮಾಜಿಕ ಅಂತರ ಪಾಲಿಸುತ್ತಿದ್ದಾರೆ. ಇತ್ತ ಧಾರ್ಮಿಕ ಕೇಂದ್ರಗಳನ್ನು ಬಂದ್ ಮಾಡಲಾಗಿದೆ. ಈ ಮೂಲಕ ಜನರು ಒಟ್ಟಾಗಿ ಸೇರದಂತೆ ನೋಡಿಕೊಳ್ಳಲಾಗಿದೆ. ಇದೇ ಸಮಯವನ್ನು ಬಳಸಿಕೊಂಡ ಕೇರಳದ ಇಡುಕ್ಕಿ ಜಿಲ್ಲೆಯ ಚರ್ಚ್‌ನ ಫಾದರ್ ಕಾಮದಾಟಕ್ಕೆ ಬಳಸಿಕೊಂಡು ಇದೀಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.
ಕೇರಳ ಕ್ರೈಸ್ತರೂ ಲವ್ ಜಿಹಾದ್ ಬಲೆಗೆ!: ಯೋಜಿತವಾಗಿ ಮತಾಂತರ!
ವೆಲ್ಯಂಕುದಿಯ ಕ್ಯಾಥೋಲಿಕ್ ಚರ್ಚ್‌ನ ಫಾದರ್ ಜೇಮ್ಸ್ ಮಂಗಲಾಶೆರಿ ಚರ್ಚನ್ನೇ ಕಾಮದಾಟಕ್ಕೆ ಬಳಸಿಕೊಂಡಿದ್ದಾರೆ. ಲಾಕ್‌ಡೌನ್ ಕಾರಣ ಎಲ್ಲಾ ಧಾರ್ಮಿಕ ಕೇಂದ್ರಗಳನ್ನು ಬಂದ್ ಮಾಡಲಾಗಿತ್ತು. ಹೀಗಾಗಿ ಜನರು ಚರ್ಚ್‌ನತ್ತ ಮುಖ ಮಾಡಿರಲಿಲ್ಲ. ಹೀಗಾಗಿ ಇದೇ ಸರಿಯಾದ ಸಮಯ ಎಂದುಕೊಂಡ ಫಾದರ್ ಜೇಮ್ಸ್ ಮಹಿಳೆಯೊಬ್ಬರ ಜೊತೆ ಕಾಮದಾಟದಲ್ಲಿ ತೊಡಗಿದ್ದಾರೆ.
ಪ್ರತಿ ದಿನ ಮಹಿಳೆ ಚರ್ಚ್‌ಗೆ ಆಗಮಿಸುತ್ತಿರುವುದನ್ನು ಗ್ರಾಮಸ್ಥರು ಗಮನಿಸಿದ್ದಾರೆ. ಒಂದು ದಿನ ಮಹಿಳೆಗೆ ತಿಳಿಯದಂತೆ ಹಿಂಬಾಲಿಸಿದ್ದಾರೆ. ಮಹಿಳೆಯನ್ನು ಬರಮಾಡಿಕೊಂಡ ಫಾದರ್ ಜೇಮ್ಸ್, ನೇರವಾಗಿ ಸೆಕ್ಸ್‌ನಲ್ಲಿ ತೊಡಗಿದ್ದಾರೆ. ಈ ವೇಳೆ ಗ್ರಾಮಸ್ಥರ ಮುಂದೆ ಫಾದರ್ ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.
ಫಾದರ್ ಜೊತೆ ಸೆಕ್ಸ್‌ನಲ್ಲಿ ತೊಡಗಿದ್ದ ಮಹಿಳೆ 2 ಮಕ್ಕಳ ತಾಯಿ. ಕೆಲ ತಿಂಗಳಿನಿಂದಲೇ ಫಾದರ್ ಹಾಗೂ ಮಹಿಳೆಯ ಗಪ್ ಚುಪ್ ಸೆಕ್ಸ್ ನಡೆಯುತ್ತಿತ್ತು. ಇನ್ನು ಲಾಕ್‌ಡೌನ್ ಜಾರಿಯಾದ ಮೇಲೆ ಯಾವುದೇ ಅಡ್ಡಿ ಆತಂಕವಿಲ್ಲದೆ ಸಾಗಿತ್ತು. ಇನ್ನು ಫಾದರ್ ಜೇಮ್ಸ್ ಮೇಲೆ ಈ ರೀತಿ ಆರೋಪಗಳು ಬರುತ್ತಿರುವುದು ಇದೇ ಮೊದಲಲ್ಲ. ಹಲವು ಬಾರಿ ಚರ್ಚನ್ನು ಕಾಮಾದಾಟಕ್ಕೆ ಬಳಸಿಕೊಂಡ ಆರೋಪಗಳಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ