90ನೇ Interpol General Assemblyಯಲ್ಲಿ ಕೋನಾರ್ಕ್ ದೇಗುಲದ ರಥ ಪ್ರೇರಿತ ಲೋಗೋ

ಅಕ್ಟೋಬರ್‌ನಲ್ಲಿ ಪ್ರಾರಂಭವಾಗುವ 195 ದೇಶಗಳ ಕಾನೂನು ಜಾರಿ ಅಧಿಕಾರಿಗಳು ಈ ಇಂಟರ್‌ಪೋಲ್‌ ಸಾಮಾನ್ಯ ಸಭೆಯಲ್ಲಿ ಭಾಗಿಯಾಗುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ. 

90th interpol general assembly to have konark temples chariot inspired logo ash

13 ನೇ ಶತಮಾನದ ವಾಸ್ತುಶಿಲ್ಪದ (Architecture) ಅದ್ಭುತವಾದ ಒಡಿಶಾದ ಕೋನಾರ್ಕ್ ಸೂರ್ಯ ದೇವಾಲಯದ (Konark Sun Temple) ರಥದ (Chariot) ಚಕ್ರಗಳಿಂದ ಪ್ರೇರಿತವಾದ ವಿನ್ಯಾಸಗಳು 90 ನೇ ಇಂಟರ್‌ಪೋಲ್ ಜನರಲ್ ಅಸೆಂಬ್ಲಿಯ ಲೋಗೋ (Logo) ಆಗಿರುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮುಂದಿನ ತಿಂಗಳು ಅಂದರೆ ಅಕ್ಟೋಬರ್‌ನಲ್ಲಿ ಪ್ರಾರಂಭವಾಗುವ 195 ದೇಶಗಳ ಕಾನೂನು ಜಾರಿ ಅಧಿಕಾರಿಗಳು ಈ ಇಂಟರ್‌ಪೋಲ್‌ ಸಾಮಾನ್ಯ ಸಭೆಯಲ್ಲಿ (Interpol General Assembly) ಭಾಗಿಯಾಗುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ. ಈ ಬಾರಿಯ ಜನರಲ್‌ ಅಸೆಂಬ್ಲಿಯನ್ನು ಕೇಂದ್ರೀಯ ತನಿಖಾ ಸಂಸ್ಥೆ (Central Bureau of Investigation) (ಸಿಬಿಐ) ಆಯೋಜಿಸುತ್ತಿದ್ದು, ಇದು ಇತ್ತೀಚೆಗೆ ಅನಾವರಣಗೊಳಿಸಿದ ಲೋಗೋ, ಮಧ್ಯದಲ್ಲಿ ಕೋನಾರ್ಕ್ ಚಕ್ರದೊಂದಿಗೆ ವೃತ್ತಾಕಾರದಲ್ಲಿ ಜೋಡಿಸಲಾದ ತ್ರಿವರ್ಣ (Tricolour) ಎಲೆಗಳ ವಿನ್ಯಾಸವನ್ನು ತೋರಿಸುತ್ತದೆ ಎಂದು ಸಿಬಿಐ ಹೇಳಿದೆ. 

ಕಲ್ಲಿನಿಂದ ಕೆತ್ತಿದ ಒಡಿಶಾ ದೇವಾಲಯದಿಂದ 24 ಚಕ್ರಗಳು ಮತ್ತು 16 ಕಡ್ಡಿಗಳೊಂದಿಗೆ ಸೂರ್ಯ ದೇವರ ರಥದ ರೂಪದಲ್ಲಿ ಲೋಗೋದ ಕಲ್ಪನೆಯನ್ನು ಸಿಬಿಐ ರೂಪಿಸಿದೆ ಎಂದೂ ಅವರು ಹೇಳಿದರು. ಹಾಗೂ, "ಇಂಟರ್‌ಪೋಲ್‌ನ ಬದ್ಧತೆ ಮತ್ತು ಎಂಗೇಜ್‌ಮೆಂಟ್‌ ಪರಿಭಾಷೆಯಲ್ಲಿ ಅರ್ಥೈಸಿಕೊಂಡಾಗ, ಈ ಲೋಗೋದಲ್ಲಿರುವ 'ಕೊನಾರ್ಕ್ ಚಕ್ರ' ಜಾಗತಿಕ ಸಂಸ್ಥೆ 24x7 ಕಾರ್ಯನಿರ್ವಹಣೆಯನ್ನು ಪ್ರೇರೇಪಿಸುತ್ತದೆ ಮತ್ತು ಭಾರತೀಯ ಧ್ವಜದ ಬಣ್ಣಗಳಲ್ಲಿ ಮೂರು 'ಎಲೆಗಳುಳ್ಳ' ಗೋಳಾಕಾರದ (Spherical) ಅಂಶಗಳಿಂದ ಸುತ್ತುವರಿಯಲ್ಪಟ್ಟಿದೆ" ಎಂದು ಸಿಬಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸುತ್ತುವರಿದಿರುವ 3 ಗೋಳಾಕಾರದ ಅಂಶಗಳು ಇಂಟರ್‌ಪೋಲ್ ಮೂಲಕ ಅಂತಾರಾಷ್ಟ್ರೀಯ ಬಾಂಡ್‌ಗಳ ರಚನೆಯನ್ನು ಸೂಚಿಸುತ್ತವೆ, ಹಾಗೂ ಜಾಗತಿಕವಾಗಿ ಭದ್ರತೆಯ ಸಂರಕ್ಷಣೆ ಮತ್ತು ಕಾನೂನು ಜಾರಿ ಗುರಿಗಳ ಸಾಧನೆಯ ಕಡೆಗೆ ದೃಢವಾದ ಬದ್ಧತೆಯನ್ನು ಸೂಚಿಸುತ್ತವೆ ಎಂದೂ ಅವರು ಹೇಳಿದರು.

ಇದನ್ನು ಓದಿ: ಉದ್ಯೋಗಕ್ಕೆ ಭೂಮಿ ಲಂಚ ಪ್ರಕರಣ: Tejashwi Yadav ಜಾಮೀನು ವಜಾಗೆ ಸಿಬಿಐ ಮನವಿ

ಭಾರತವು 1997 ರಲ್ಲಿ ಈ ಮೊದಲು ಈ ಇಂಟರ್‌ಪೋಲ್‌ ಸಾಮಾನ್ಯ ಸಭೆಯನ್ನು ಆಯೋಜಿಸಿತ್ತು. ಈಗ ಭಾರತದ 75 ನೇ ಸ್ವಾತಂತ್ರ್ಯದ ವಾರ್ಷಿಕೋತ್ಸವದಲ್ಲಿ ಅದನ್ನು ದೇಶದಲ್ಲಿ ನಡೆಸಬೇಕೆಂದು ಬಯಸಿದ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಪ್ರಯತ್ನದಿಂದಾಗಿ ಮತ್ತೊಮ್ಮೆ ಸಾಮಾನ್ಯ ಸಭೆಯನ್ನು ಆಯೋಜಿಸುವ ಅವಕಾಶ ಸಿಕ್ಕಿತು ಎಂದೂ ಸಿಬಿಐ ಅಧಿಕಾರಿ ಹೇಳಿದರು. ಪ್ರತಿ ವರ್ಷ ಒಂದೊಂದು ದೇಶದಲ್ಲಿ ಈ ಸಾಮಾನ್ಯ ಸಭೆಯನ್ನು ಆಯೋಜಿಸಲಾಗುತ್ತದೆ, ರೊಟೇಷನ್‌ ಆಧಾರದ ಮೇಲೆ ನಡೆಯುತ್ತದೆ. ಆಗಸ್ಟ್ 30, 2019 ರಂದು ಅಂದಿನ ಇಂಟರ್‌ಪೋಲ್ ಪ್ರಧಾನ ಕಾರ್ಯದರ್ಶಿ ಜುರ್ಗೆನ್ ಸ್ಟಾಕ್ ಅವರನ್ನು ಭೇಟಿ ಮಾಡಿದ್ದ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಈ ವರ್ಷ ಭಾರತದಲ್ಲಿ ಜಾಗತಿಕ ಭದ್ರತಾ ಕ್ಯಾಲೆಂಡರ್‌ನಲ್ಲಿ ಮೆಗಾ ಈವೆಂಟ್ ಅನ್ನು ಆಯೋಜಿಸುವ ಕಲ್ಪನೆಯನ್ನು ಪ್ರಸ್ತಾಪಿಸಿದ್ದರು.

ಅಕ್ಟೋಬರ್ 18 ರಂದು ಪ್ರಾರಂಭವಾಗುವ 3 ದಿನಗಳ ಈವೆಂಟ್ ಭ್ರಷ್ಟಾಚಾರ ಮತ್ತು ಸೈಬರ್ ಕ್ರೈಮ್‌ಗಳು, ಅಂತರ್ಜಾಲದಲ್ಲಿ ಪ್ರಸಾರವಾಗುವ ಮಕ್ಕಳ ಲೈಂಗಿಕ ದೌರ್ಜನ್ಯದ ವಿಷಯಗಳು, ಕಾಣೆಯಾದ ವ್ಯಕ್ತಿಗಳು ಮತ್ತು ಭಯೋತ್ಪಾದನೆಯ ಜೊತೆಗೆ ಹೊಸ ತಂತ್ರಜ್ಞಾನಗಳು ಮತ್ತು ಪ್ರಪಂಚದಾದ್ಯಂತ ಪರಾರಿಯಾದ ಅಪರಾಧಿಗಳನ್ನು ಪತ್ತೆಹಚ್ಚಲು ಪೊಲೀಸರ ಸಹಕಾರವನ್ನು ಸುಧಾರಿಸಲು ಕಾರ್ಯವಿಧಾನಗಳನ್ನು ಕೇಂದ್ರೀಕರಿಸುತ್ತದೆ ಎಂದೂ  ಅವರು ಹೇಳಿದರು. 

ಇದನ್ನೂ ಓದಿ: Fodder Scam: ಲಾಲೂ ಪ್ರಸಾದ್‌ ಯಾದವ್‌ಗೆ ಶಿಕ್ಷೆ ವಿಧಿಸಿದ ನ್ಯಾಯಾಧೀಶನಿಗೆ ಮತ್ತೊಂದು ಮದುವೆ

ರೆಡ್ ನೋಟಿಸ್‌ನಂತಹ ಬಣ್ಣದ ಕೋಡ್‌ ನೋಟೀಸ್‌ಗಳನ್ನು ಬಳಸಿಕೊಂಡು ಪರಾರಿಯಾದವರನ್ನು ಪತ್ತೆಹಚ್ಚುವ ಮತ್ತು ಬಂಧಿಸುವ ಜೊತೆಗೆ, ಇಂಟರ್‌ಪೋಲ್ ತನ್ನ ಸದಸ್ಯ ರಾಷ್ಟ್ರಗಳಿಗೆ ಫಿಂಗರ್‌ಪ್ರಿಂಟ್‌ಗಳು, ಡಿಎನ್‌ಎ, ಕದ್ದ ಮೋಟಾರು ವಾಹನಗಳು, ಬಂದೂಕುಗಳು ಮತ್ತು ಕದ್ದ ಹಾಗೂ ಕಳೆದುಹೋದ ಪ್ರಯಾಣದ ದಾಖಲೆಗಳ ಬಗ್ಗೆ ಲಕ್ಷಾಂತರ ದಾಖಲೆಗಳನ್ನು ಹೊಂದಿರುವ ವ್ಯಾಪಕ ಶ್ರೇಣಿಯ ಕ್ರಿಮಿನಲ್ ಡೇಟಾಬೇಸ್‌ಗಳಿಗೆ ನೇರ ಪ್ರವೇಶವನ್ನು ಒದಗಿಸುತ್ತದೆ 

 

Latest Videos
Follow Us:
Download App:
  • android
  • ios