ವಿಮಾನ ದುರಂತ: ಸಹ ಪೈಲಟ್‌ ಪತ್ನಿ ಗರ್ಭಿಣಿ, ಆಕೆಗಿನ್ನೂ ಪತಿ ಸಾವು ಗೊತ್ತಿಲ್ಲ!

By Suvarna News  |  First Published Aug 9, 2020, 1:00 PM IST

ಕೇರಳ ವಿಮಾನ ದುರಂತದಲ್ಲಿ ಸಹ ಪೈಲಟ್ ಕೂಡಾ ಸಾವು| ಸಹ ಪೈಲಟ್‌ ಪತ್ನಿ ಗರ್ಭಿಣಿ, ಆಕೆಗಿನ್ನೂ ಪತಿ ಸಾವು ಗೊತ್ತಿಲ್ಲ| ಮೊದಲ ವಂದೇಭಾರತ್‌ ವಿಮಾನ ಇಳಿಸಿದವರೂ ಇವರೇ


ಕಲ್ಲಿಕೋಟೆ(ಆ.09): ವಿಮಾನ ಅಪಘಾತದಲ್ಲಿ ಮಡಿದ ಸಹಾಯಕ ಪೈಲಟ್‌ ಅಖಿಲೇಶ್‌ ಕುಮಾರ್‌ ಅವರ ಪತ್ನಿ ಗರ್ಭಿಣಿ. ಇನ್ನು 10-15 ದಿನಗಳಲ್ಲಿ ಅವರಿಗೆ ಹೆರಿಗೆ ದಿನ ನಿಗದಿಯಾಗಿದೆ ಎಂಬ ಕರುಣಾಜನಕ ವಿಷಯ ಹೊರಬಿದ್ದಿದೆ. ಈ ಹಿನ್ನೆಲೆಯಲ್ಲಿ ಆಘಾತವಾಗದೇ ಇರಲಿ ಎನ್ನುವ ಕಾರಣಕ್ಕೆ ಅವರಿಗೆ ಇನ್ನೂ ಪತಿಯ ಸಾವಿನ ವಿಷಯ ತಿಳಿಸಿಲ್ಲ. ಉತ್ತರ ಪ್ರದೇಶದ ಮಥುರಾ ಮೂಲದ ಅಖಿಲೇಶ್‌ ಅವರು 2017ರಲ್ಲಿ ಮೇಘಾ ಅವರ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು.

ದೋಷಪೂರಿತ ರನ್‌ವೇ ಬಗ್ಗೆ 10 ವರ್ಷ ಹಿಂದೆಯೇ ಎಚ್ಚರಿಕೆ!

Tap to resize

Latest Videos

ಮೊದಲ ವಂದೇಭಾರತ್‌ ವಿಮಾನ ಇಳಿಸಿದವರು ಅಖಿಲೇಶ್‌

ಕೊರೋನಾ ಲಾಕ್‌ಡೌನ್‌ ವೇಳೆ ದುಬೈನಲ್ಲಿ ಸಿಲುಕಿದ್ದ ಹಲವು ಭಾರತೀಯರನ್ನು ವಂದೇ ಭಾರತ್‌ ಯೋಜನೆಯಡಿ ಮೇ 8ರಂದು ಕೇರಳದ ಇದೇ ಕಲ್ಲಿಕೋಟಿ ವಿಮಾನ ನಿಲ್ದಾಣಕ್ಕೆ ತಲುಪಿಸಿದ್ದ ಪೈಲಟ್‌ಗಳ ತಂಡದಲ್ಲಿ ಅಖಿಲೇಶ್‌ ಕುಮಾರ್‌ ಸಹ ಒಬ್ಬರಾಗಿದ್ದರು. 

ವಿಮಾನ ತುಂಡಾದ ಕೂಡಲೇ ಎಲ್ಲರ ಆಕ್ರಂದನ!

ಆ ವೇಳೆ, ವಿಮಾನ ನಿಲ್ದಾಣದಲ್ಲಿ ಸಿಬ್ಬಂದಿ ಹಾಗೂ ಪ್ರಯಾಣಿಕರು ಇವರನ್ನು ಸುತ್ತುವರಿದು ಚಪ್ಪಾಳೆ ತಟ್ಟುವ ಮೂಲಕ ಗೌರವದ ಸ್ವಾಗತ ನೀಡಿದ್ದರು. ಆದರೆ, ಇದೀಗ ವಿಮಾನ ದುರಂತದಲ್ಲಿ ಮಡಿದ ಅಖಿಲೇಶ್‌ ಸೇರಿ 18 ಮಂದಿಗಾಗಿ ಇಡೀ ದೇಶವೇ ದುಃಖತಪ್ತವಾಗಿದೆ.

click me!