ಮ್ಯಾಚ್ ಸೋತ ಮೇಲೆ ಅಂಪೈರ್ ದೂರುವುದಲ್ಲ, ರಾಹುಲ್ ಗಾಂಧಿಗೆ ಗೂಗ್ಲಿ ಎಸೆದ ಅಮಿತ್ ಶಾ

Published : Oct 30, 2026, 06:38 PM IST
amit shah

ಸಾರಾಂಶ

ಕ್ರಿಕೆಟ್ ಮ್ಯಾಚ್ ಸೋತ ಮೇಲೆ ಅಂಪೈರ್ ದೂರುವುದಲ್ಲ ಎಂದು ರಾಹುಲ್ ಗಾಂಧಿಗೆ ಅಮಿತ್ ಶಾ ಗೂಗ್ಲಿ ಎಸೆದಿದ್ದಾರೆ. ವೋಟ್ ಚೋರಿ ಕುರಿತು ಮಾತನಾಡಿದ ಅಮಿತ್ ಶಾ, ರಾಹುಲ್ ಹಾಗೂ ಪ್ರತಿಪಕ್ಷಗಳಿಗೆ ಸವಾಲು ಹಾಕಿದ್ದಾರೆ.

ಲಖನೌ (ಅ.30) ರಾಹುಲ್ ಗಾಂಧಿ ಹಾಗೂ ಪ್ರತಿಪಕ್ಷಗಳು ವೋಟ್ ಚೋರಿ ವಿರುದ್ಧ ನವೆಂಬರ್ 1 ರಂದು ದೆಹಲಿಯಲ್ಲಿ ಭಾರಿ ಪ್ರತಿಭಟನೆಗೆ ಮುಂದಾಗಿದೆ. ಈಗಾಗಲೇ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ರಾಜೀನಾಮೆ, ಪ್ರಧಾನಿ ಮೋದಿ, ಅಮಿತ್ ಶಾ ರಾಜೀನಾಮೆ ಆಗ್ರಹಿಸಿ ಹೋರಾಟ ನಡೆಸಿದ್ದಾರೆ. ರಾಹುಲ್ ಗಾಂಧಿ ಹಾಗೂ ಪ್ರತಿಪಕ್ಷಗಳ ಹೋರಾಟದ ನಡುವೆ ಅಮಿತ್ ಶಾ ತಿರುಗೇಟು ನೀಡಿದ್ದಾರೆ. ರಾಹುಲ್ ಗಾಂಧಿ ವೋಟ್ ಚೋರಿ ಕುರಿತು ಆರೋಪ ಮಾಡುತ್ತಾ ಗ್ಯಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿದ್ದಾರೆ. ಕ್ರಿಕೆಟ್ ಮ್ಯಾಚ್ ಸೋತ ಮೇಲೆ ಅಂಪೈರ್ ದೂರುತ್ತಿದ್ದಾರೆ ಎಂದು ಅಮಿತ್ ಶಾ ಹೇಳಿದ್ದಾರೆ.

ಅಭ್ಯಾಸ ಮಾಡಲ್ಲ, ಪಂದ್ಯ ಸೋತ ಮೇಲೆ ಅಂಪೈರ್ ದೂರುತ್ತಾರೆ

ಲಖನೌದಲ್ಲಿ ಬಿಜೆಪಿ ಕಾರ್ಯಾಕಾರಿ ಸಮಿತಿ ಸಭೆಯಲ್ಲಿ ಮಾತನಾಡಿದ ಅಮಿತ್ ಶಾ, ರಾಹುಲ್ ಗಾಂಧಿ ಹಾಗೂ ಅಖಿಲೇಶ್ ಯಾದವ್ ಪಂದ್ಯಕ್ಕೂ ಮೊದಲು ಅಭ್ಯಾಸ ಮಾಡುವುದಿಲ್ಲ. ನೇರವಾಗಿ ಪಂದ್ಯ ಆಡಿ ಸೋತ ಬಳಿಕ ಅಂಪೈರ್ ಸರಿಯಿಲ್ಲ ಎಂದು ದೂರುತ್ತಾರೆ. ವೋಟ್ ಚೋರಿ ಬಗ್ಗೆ ದಾಖಲೆ ಸಹಿತಿ ಬನ್ನಿ ಸದನದಲ್ಲಿ ಚರ್ಚೆ ಮಾಡೋಣ. ಇದಕ್ಕಾಗಿ ವಿಶೇಷ ಸೆಶನ್ ಆಯೋಜಿಸುತ್ತೇವೆ. ಸುದೀರ್ಘ ಚರ್ಚೆಯಾಗಲಿ, ಎಲ್ಲಾ ವಿಚಾರಗಳನ್ನು ಚರ್ಚಿಸೋಣ ಬನ್ನಿ ಎಂದು ಅಮಿತ್ ಶಾ ಸವಾಲು ಹಾಕಿದ್ದಾರೆ.

ನವೆಂಬರ್ 1ಕ್ಕೆ ಭಾರಿ ಪ್ರತಿಭಟನೆ

ದೆಹಲಿಯ ರಾಮಲೀಲಾ ಮೈದಾನದಲ್ಲಿ ಕಾಂಗ್ರೆಸ್ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದೆ. ಪ್ರತಿಪಕ್ಷಗಳ ಸದಸ್ಯರು, ನಾಯಕರು, ಕಾಂಗ್ರೆಸ್ ಎಲ್ಲಾ ಸಂಸದರು, ಶಾಸಕರು ಸೇರಿದಂತೆ ಸಚಿವರು ಈ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. 10 ಲಕ್ಷ ಮಂದಿ ಸೇರುತ್ತಿದ್ದಾರೆ ಎಂದು ಕಾಂಗ್ರೆಸ್ ಹೇಳಿದೆ. ಇತ್ತ ದೆಹಲಿ ವರ್ತಕರ ಸಂಘ ಈಗಾಗಲೇ ಕಾಂಗ್ರೆಸ್‌ಗೆ ಪ್ರತಿಭಟನೆ ಮುಂದೂಡುವಂತೆ ಮನವಿ ಮಾಡಿದೆ. ದೀಪಾವಳಿ ಸಂದರ್ಭವಾಗಿರುವ ಕಾರಣ 10 ಸಾವಿರ ಕೋಟಿ ರೂಪಾಯಿ ನಷ್ಟ ಸಂಭವಿಸುತ್ತದೆ. ಹೀಗಾಗಿ ದೀಪಾವಳಿ ಬಳಿಕ ಪ್ರತಿಭಟನೆ ಹಮ್ಮಿಕೊಳ್ಳುವಂತೆ ಮನವಿ ಮಾಡಿದೆ.

ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ನವೆಂಬರ್ 1ರಂದು ಪ್ರತಿಭಟನೆ ನಡೆಸಲು ನಿರ್ಧರಿಸಿದೆ. ಇತ್ತ ಕೇಂದ್ರ ಸರ್ಕಾರ ಎಸ್ಐಎರ್ ಕುರಿತು ಯಾವುದೇ ರೀತಿ ಚರ್ಚೆಗೆ ಸಿದ್ದವಿದೆ. ಇತ್ತ ಪ್ರಕರಣ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ಹಂತದಲ್ಲಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬ್ರೇಕಪ್ ಆದ ತಕ್ಷಣ ರೇ*ಪ್ ಕೇಸ್ ಹಾಕೋ ಹಾಗಿಲ್ಲ: ಸುಪ್ರೀಂ ಕೋರ್ಟ್‌ನಿಂದ ಬಂತು ಮಹತ್ವದ ತೀರ್ಪು
Fact Check: ಪ್ರಧಾನಿಗಾಗಿ ಕರ್ವಾಚೌತ್​ ಆಚರಿಸಿದ್ರಾ ಕಂಗನಾ? ವೈರಲ್​ ಆಗ್ತಿರೋ ವಿಡಿಯೋದ ಅಸಲಿಯತ್ತೇನು