ತೆಲುಗರ ಅವಹೇಳನ; ನಟಿ ಕಸ್ತೂರಿ ಶಂಕರ್ ಬಂಧನ | ಏನಿದು ಪ್ರಕರಣ?

By Suvarna News  |  First Published Nov 17, 2024, 8:59 AM IST

ತಮಿಳುನಾಡಿಗೆ ತೆಲುಗರು 300 ವರ್ಷಗಳ ಹಿಂದೆ ಬಂದಿದ್ದು ತಮಿಳುನಾಡಿನ ರಾಣಿಯರ ಸೇವೆ ಮಾಡಲು ಎಂದು ಹೇಳಿ ತೆಲುಗರ ಆಕ್ರೋಶಕ್ಕೆ ತುತ್ತಾಗಿದ್ದ ತಮಿಳು ನಟಿ ಕಸ್ತೂರಿ ಶಂಕರ್ ಅವರನ್ನು ಶನಿವಾರ ಬಂಧಿಸಲಾಗಿದೆ.


ಚೆನ್ನೈ/ಹೈದರಾಬಾದ್‌: ತಮಿಳುನಾಡಿಗೆ ತೆಲುಗರು 300 ವರ್ಷಗಳ ಹಿಂದೆ ಬಂದಿದ್ದು ತಮಿಳುನಾಡಿನ ರಾಣಿಯರ ಸೇವೆ ಮಾಡಲು ಎಂದು ಹೇಳಿ ತೆಲುಗರ ಆಕ್ರೋಶಕ್ಕೆ ತುತ್ತಾಗಿದ್ದ ತಮಿಳು ನಟಿ ಕಸ್ತೂರಿ ಶಂಕರ್ ಅವರನ್ನು ಶನಿವಾರ ಬಂಧಿಸಲಾಗಿದೆ.

ಕಸ್ತೂರಿ ಹೇಳಿಕೆ ಖಂಡಿಸಿ ತೆಲುಗರು ಪ್ರತಿಭಟನೆ ನಡೆಸಿದ್ದರು ಹಾಗೂ ಅವರ ವಿರುದ್ಧ ದ್ವೇಷ ಭಾಷಣದ ಪ್ರಕರಣಗಳು ದಾಖಲಾಗಿದ್ದವು. ಆ ಬಳಿಕ ಅವರು ಒಮ್ಮೆ ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಿದ್ದರೂ ಸಮರ್ಥಿಸಿಕೊಂಡಿದ್ದರು. ಆದರೆ ಆಕ್ರೋಶ ತೀವ್ರಗೊಂಡ ಬಳಿಕ ಕ್ಷಮೆಯಾಚಿಸಿದ್ದರು. ‘ನನ್ನ ಮಾತು ಈಗ ಇರುವ ತಮಿಳುನಾಡಿನಲ್ಲಿನ ತೆಲುಗರನ್ನು ಉದ್ದೇಶಿಸಿ ಅಲ್ಲ. ಈ ಹಿಂದಿನ ಇತಿಹಾಸದ ಬಗ್ಗೆ ಮಾತನಾಡಿದ್ದೆ ಅಷ್ಟೆ. ಇದಕ್ಕಾಗಿ ಕ್ಷಮೆ ಕೋರುವೆ’ ಎಂದಿದ್ದರು. ಆದರೂ ಅವರ ವಿರುದ್ಧದ ಆಕ್ರೋಶ ತಣಿದಿರಲಿಲ್ಲ.

Tap to resize

Latest Videos

ಭೂಗತ ಪಾತಕಿ ದಾವೂದ್ ಇಬ್ರಾಹಿಂ ಈ ನಟಿಯ ಪ್ರೇಮ ಪಾಶಕ್ಕೆ ಬಿದ್ದು ಹುಚ್ಚನಾಗಿದ್ದ!

ನವೆಂಬರ್ 3 ರಂದು ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಶಂಕರ್ ಅವರು"ತಮಿಳುನಾಡಿಗೆ ತೆಲುಗರು 300 ವರ್ಷಗಳ ಹಿಂದೆ ಬಂದಿದ್ದು ತಮಿಳುನಾಡಿನ ರಾಣಿಯರ ಸೇವೆ ಮಾಡಲು' ಎಂದಿದ್ದರು. ಈ ಹೇಳಿಕೆ ವಿರುದ್ಡ ತೆಲುಗು ಸಮುದಾಯ ಆಕ್ರೋಶ ವ್ಯಕ್ತಪಡಿಸಿದ್ದಲ್ಲದೆ, ತೆಲುಗು ಅಸೋಸಿಯೇಷನ್ ​​​​ನಟಿ ವಿರುದ್ಡ ಪ್ರಕರಣ ದಾಖಲಿಸಿತ್ತು.ಕೇಸು ದಾಖಲಾದ ಕಾರಣ ಕೆಲ ದಿನ ನಾಪತ್ತೆ ಆಗಿದ್ದರು.  ಆಕೆಯ ಕ್ಷಮೆಯ ಹೊರತಾಗಿಯೂ, ತಮಿಳುನಾಡು ಪೊಲೀಸರು ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ (ಬಿಎನ್‌ಎಸ್‌ಎಸ್) ಯ ನಾಲ್ಕು ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. 

 

SHOCKING NEWS: 'ಅಮರನ್' ಚಿತ್ರ ಪ್ರದರ್ಶನದ ವೇಳೆ ಚಿತ್ರಮಂದಿರದ ಮೇಲೆ ಪೆಟ್ರೋಲ್ ಬಾಂಬ್ ದಾಳಿ!

ಕಸ್ತೂರಿ ಶಂಕರ್, ತಮಿಳು, ತೆಲುಗು, ಮಲಯಾಳಂ ಮತ್ತು ಕನ್ನಡ ಚಲನಚಿತ್ರಗಳಲ್ಲಿ ನಟಿಸಿದ್ದಾರೆ. 1991 ರ ಚಲನಚಿತ್ರ ಆತಾ ಉನ್ ಕೊಯಿಲಿಲೆಯಲ್ಲಿ ಪಾದಾರ್ಪಣೆ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ಕಮಲ್ ಹಾಸನ್ ಅವರ ಇಂಡಿಯನ್ (1996) ಮತ್ತು ಅನ್ನಮಯ್ಯ (1997) ಸಿನಿಮಾ ಬಳಿಕ ಖ್ಯಾತಿಯನ್ನು ಗಳಿಸಿದರು . 

click me!