'ಮನ್‌ ಕೀ ಬಾತ್‌' ಮೋದಿ ಮತ್ತು ದೇಶದ ನಾಗರಿಕರ ನಡುವೆ ಸಂಪರ್ಕ ಬೆಸೆಯುವ ಮುಖ್ಯ ಸಾಧನ: ಆಮೀರ್‌ ಖಾನ್‌ ಪ್ರಶಂಸೆಯ ಮಳೆ

By Kannadaprabha News  |  First Published Apr 27, 2023, 8:51 AM IST

ಪ್ರಧಾನಿ ನರೇಂದ್ರ ಮೋದಿ ಅವರ ‘ಮನ್‌ ಕೀ ಬಾತ್‌’ ಕಾರ್ಯಕ್ರಮವು ಆಕಾಶವಾಣಿಗೆ ಹೊಸ ಜೀವನವನ್ನು ನೀಡಿತು. ಅಲ್ಲದೇ ಮನರಂಜನಾ ವಿಧಾನಗಳಿಗೆ ಮಾರು ಹೋಗಿರುವ ಯುವ ಪೀಳಿಗೆಗೆ ಸ್ಪೂರ್ತಿಯಾಯಿತು ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹೇಳಿದ್ದಾರೆ.


ನವದೆಹಲಿ (ಏಪ್ರಿಲ್ 27, 2023): ‘ಪ್ರಧಾನಿ ನರೇಂದ್ರ ಮೋದಿ ಅವರ ‘ಮನ್‌ ಕೀ ಬಾತ್‌’ ಕಾರ‍್ಯಕ್ರಮವು ಮೋದಿ ಮತ್ತು ದೇಶದ ನಾಗರೀಕರ ನಡುವೆ ಸಂಪರ್ಕ ಬೆಸೆಯುವ ಬಹುಮುಖ್ಯ ಸಾಧನ’ ಎಂದು ಬಾಲಿವುಡ್‌ ನಟ ಆಮೀರ್‌ ಖಾನ್‌ ಪ್ರಶಂಸಿಸಿದ್ದಾರೆ.  ಸಮಾವೇಶವನ್ನು ಉಪರಾಷ್ಟ್ರಪತಿ ಜಗದೀಪ್‌ ಧನ್ಕರ್‌ ಅವರು ಉದ್ಘಾಟಿಸಿದರು. ಕೇಂದ್ರ ವಾರ್ತಾ ಸಚಿವ ಅನುರಾಗ್‌ ಠಾಕೂರ್‌ ಉಪಸ್ಥಿತರಿದ್ದರು.

‘ಮನ್‌ ಕಿ ಬಾತ್‌’ ರೇಡಿಯೋ ಕಾರ‍್ಯಕ್ರಮದ 100ನೇ ಸಂಚಿಕೆ ಏಪ್ರಿಲ್ 30ಕ್ಕೆ ಬಿತ್ತರ ಆಗುತ್ತಿರುವ ಅಂಗವಾಗಿ ನಡೆದ ಸಮಾವೇಶದಲ್ಲಿ ಮಾತನಾಡಿದ ಅವರು, ‘ದೇಶದ ನಾಯಕನೊಬ್ಬ ತನ್ನ ಪ್ರಜೆಗಳೊಂದಿಗೆ ಪ್ರಮುಖ ವಿಷಯಗಳ ಬಗ್ಗೆ ಚರ್ಚಿಸುವುದು, ತನ್ನ ಆಲೋಚನೆಗಳನ್ನು ವ್ಯಕ್ತಪಡಿಸುವುದು, ಸಲಹೆಗಳನ್ನು ನೀಡುವುದು ಬಹಳ ಅಗತ್ಯವಾಗಿದೆ’ ಎಂದು ಅಭಿಪ್ರಾಯಪಟ್ಟರು. ಜಾಮಿಯಾ ವಿವಿ ಕೂಡ ಮನ್‌ ಕೀ ಬಾತ್‌ ಪ್ರಶಂಸಿಸಿದೆ. 

Tap to resize

Latest Videos

ಇದನ್ನು ಓದಿ: ಆಫ್ರಿಕಾದಿಂದ ಬಂದ ಚೀತಾಗಳಿಗೆ ಮರುನಾಮಕರಣ: ಮೋದಿ ಸಲಹೆಯಂತೆ ಹೆಸರು ಸೂಚಿಸಿದ್ದ ಜನತೆ

‘ಮನ್‌ ಕೀ ಬಾತ್‌’ ಯುವಪೀಳಿಗೆಗೆ ಸ್ಪೂರ್ತಿ: ಸಚಿವ ಅಮಿತ್‌ ಶಾ
ಆಕಾಶವಾಣಿಯಲ್ಲಿ ಪ್ರಸಾರವಾಗುವ ಪ್ರಧಾನಿ ನರೇಂದ್ರ ಮೋದಿ ಅವರ ‘ಮನ್‌ ಕೀ ಬಾತ್‌’ ಕಾರ್ಯಕ್ರಮವು ಆಕಾಶವಾಣಿಗೆ ಹೊಸ ಜೀವನವನ್ನು ನೀಡಿತು. ಅಲ್ಲದೇ ಮನರಂಜನಾ ವಿಧಾನಗಳಿಗೆ ಮಾರು ಹೋಗಿರುವ ಯುವ ಪೀಳಿಗೆಗೆ ಸ್ಪೂರ್ತಿಯಾಯಿತು’ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹೇಳಿದ್ದಾರೆ.

ಏಪ್ರಿಲ್ 30 ರಂದು ‘ಮನ್‌ ಕೀ ಬಾತ್‌’ 100 ನೇ ಸಂಚಿಕೆ ಪೂರೈಸಲಿದೆ. ಈ ನಿಮಿತ್ತ ನಡೆದ ಸಮ್ಮೇಳನದಲ್ಲಿ ಮಾತನಾಡಿದ ಅವರು, ‘ಅರ್ಧ ಗಂಟೆಯ ‘ಮನ್‌ ಕೀ ಬಾತ್‌’ ಕಾರ್ಯಕ್ರಮವು ದೇಶಕ್ಕೆ ಕೊಡುಗೆ ನೀಡುವಂತೆ ಕೋಟ್ಯಂತರ ಜನರನ್ನು ಪ್ರೇರೇಪಿಸಿತು. ಈವರೆಗಿನ 99 ಸಂಚಿಕೆಗಳಲ್ಲಿ ನರೇಂದ್ರ ಮೋದಿಯಂತಹ ರಾಜಕೀಯ ವ್ಯಕ್ತಿ ಒಂದೇ ಒಂದು ರಾಜಕೀಯ ವಿಷಯವನ್ನು ಮಾತನಾಡದಿರುವುದು ಈ ಕಾರ್ಯಕ್ರಮದ ಸೌಂದರ್ಯವಾಗಿದೆ. ಇದು ಪ್ರಜಾಪ್ರಭುತ್ವದ ತಳಹದಿಯಾಗಿದೆ. ನಾಯಕ ಮತ್ತು ಜನರ ನಡುವಿನ ಸಂವಾದ ಪ್ರಜಾಪ್ರಭುತ್ವವನ್ನು ಬಲಪಡಿಸುತ್ತದೆ’ ಎಂದರು.

ಇದನ್ನೂ ಓದಿ: ಅಂಗಾಂಗ ದಾನ ಮಾಡಿ: 99ನೇ ಮನ್‌ ಕೀ ಬಾತ್‌ ಭಾಷಣದಲ್ಲಿ ಜನತೆಗೆ ಮೋದಿ ಕರೆ

ಏಪ್ರಿಲ್ 30ರ ಭಾನುವಾರ ಬೆಳಗ್ಗೆ 11 ಗಂಟೆಗೆ ಮನ್‌ ಕೀ ಬಾತ್‌ನ 100ನೇ ಸಂಚಿಕೆ ಪ್ರಸಾರವಾಗಲಿದೆ.
ಇದನ್ನೂ ಓದಿ: Mann Ki Baat: ಉದಯಿಸುತ್ತಿರುವ ಭಾರತೀಯ ಶಕ್ತಿಯಲ್ಲಿ 'ನಾರಿ ಶಕ್ತಿ' ಮಹತ್ವದ ಪಾತ್ರ ವಹಿಸುತ್ತಿದೆ: ಮೋದಿ ಶ್ಲಾಘನೆ

click me!