ಕಾರ್ಯನಿರ್ವಹಣೆಯ ಒತ್ತಡ : ಕಳೆದ 9 ತಿಂಗಳಲ್ಲಿ 77 ರೈಲ್ವೆ ಅಧಿಕಾರಿಗಳಿಂದ VRS

Published : Apr 14, 2022, 11:45 PM IST
ಕಾರ್ಯನಿರ್ವಹಣೆಯ ಒತ್ತಡ : ಕಳೆದ 9 ತಿಂಗಳಲ್ಲಿ 77 ರೈಲ್ವೆ ಅಧಿಕಾರಿಗಳಿಂದ VRS

ಸಾರಾಂಶ

ರೈಲ್ವೆ ಇಲಾಖೆಯಲ್ಲಿ ಕಾರ್ಯನಿರ್ವಹಣೆಯ ಒತ್ತಡ ಸ್ವಯಂ ನಿವೃತ್ತಿ ಪಡೆದ ರೈಲ್ವೆಯ 77 ಅಧಿಕಾರಿಗಳು

ನವದೆಹಲಿ(ಏ.14) ಹೆಚ್ಚುತ್ತಿರುವ ಕಾರ್ಯ ನಿರ್ವಹಣೆಯ ಒತ್ತಡದ ಹಿನ್ನೆಲೆ ಕಳೆದ 9 ತಿಂಗಳುಗಳಲ್ಲಿ, ರೈಲ್ವೇಯಲ್ಲಿನ 77 ಹಿರಿಯ ಅಧಿಕಾರಿಗಳು, ಇಬ್ಬರು ಕಾರ್ಯದರ್ಶಿ ಪದವಿ ಅಧಿಕಾರಿಗಳು ಸ್ವಯಂ ನಿವೃತ್ತಿ ಪಡೆದಿದ್ದಾರೆ. ಇದುವರೆಗಿನ ಹಣಕಾಸು ವರ್ಷದಲ್ಲಿ ಇದೇ ಮೊದಲ ಬಾರಿಗೆ ಇಷ್ಟೊಂದು ಜನ ರೈಲ್ವೆಯ ಹಿರಿಯ ಅಧಿಕಾರಿಗಳು ವಿಆರ್‌ಎಸ್ ಪಡೆದಿರುವುದಾಗಿದೆ.

ಜುಲೈನಲ್ಲಿ ರೈಲ್ವೆ ಸಚಿವರಾಗಿ ಅಶ್ವಿನಿ ವೈಷ್ಣವ್ (Ashwini Vaishnaw) ಅಧಿಕಾರ ಸ್ವೀಕರಿಸಿದ ನಂತರ ಅವರು ಅಧಿಕಾರಿಗಳಿಗೆ ಉತ್ತಮವಾಗಿ ಕಾರ್ಯನಿರ್ವಹಿಸಿ ಅಥವಾ ಕೆಲಸ ಬಿಡಿ ಎಂದು ತಿಳಿಸಿದ್ದರು. ಕಾರ್ಯನಿರ್ವಹಣೆ ಮಾಡದ ಮತ್ತು ಭ್ರಷ್ಟಾಚಾರಕ್ಕೆ ಕೈ ಹಾಕುವವರಿಗೆ ಇಲಾಖೆಯಲ್ಲಿ ಸ್ಥಾನವಿಲ್ಲ  ಕಾರ್ಯ ನಿರ್ವಹಿಸದೇ ಭ್ರಷ್ಟಾಚಾರ ಮಾಡಿದಲ್ಲಿ ಅವರು ವಿಆರ್‌ಎಸ್(VRS)  ತೆಗೆದುಕೊಳ್ಳುತ್ತಾರೆ ಅಥವಾ ಅವರಿಗೆ ಹೊರ ಹೋಗುವ ಬಾಗಿಲು ತೋರಿಸಲಾಗುವುದು ಎಂದು ಸಚಿವರು ಹೇಳಿದ್ದಾಗಿ ಇಲಾಖೆಯ ಅಧಿಕಾರಿಯೊಬ್ಬರು ಹೇಳಿದ್ದಾರೆ. ಅಲ್ಲದೇ ಇಲಾಖೆಯಲ್ಲಿ ಸಕಾರಾತ್ಮಕ ಧೋರಣೆ ಹೊಂದಿರುವವರು ಮತ್ತು ಸಾಧನೆ ಮಾಡಲು ಸಿದ್ಧರಾಗಿರುವವರು ಸಹ ಗುರುತಿಸಲ್ಪಡುತ್ತಿದ್ದಾರೆ ಎಂದು ಹಿರಿಯ ರೈಲ್ವೇ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Sakala Service: ರೈಲ್ವೆ ಟಿಕೆಟ್‌ ರೀತಿ ಸರ್ಕಾರಿ ಸೇವೆಗೂ ‘ತತ್ಕಾಲ್‌’ ಯೋಜನೆ?

ಸಂಪೂರ್ಣವಾಗಿ ವಿಭಿನ್ನ ವಲಯಗಳಲ್ಲಿ ಕೆಲಸ ಮಾಡುವ ರೈಲ್ವೇಯ ಹಿರಿಯ ಇಂಜಿನಿಯರ್‌ಗಳು ಇಲಾಖೆಯಲ್ಲಿ ಒತ್ತಡ ಹೆಚ್ಚಿರುವುದನ್ನು ಹಾಗೂ ಸಚಿವಾಲಯವು ಕಠಿಣ ಗುರಿಗಳನ್ನು ಹೊಂದಿರುವುದನ್ನು ಒಪ್ಪಿಕೊಂಡಿದ್ದಾರೆ. ರೈಲ್ವೆಯಲ್ಲಿ ಉನ್ನತ ಮಟ್ಟದ ತೀವ್ರ ನಿಗಾದಿಂದಾಗಿ ಕಳೆದ ಕೆಲವು ತಿಂಗಳುಗಳಲ್ಲಿ ಬಹಳಷ್ಟು ಬದಲಾವಣೆಯಾಗಿದೆ. ಕೆಲವರು ಬಡ್ತಿ ಸಿಗಲಿಲ್ಲ ಎಂದು ಭಾವಿಸಿ ವಿಆರ್‌ಎಸ್ ಕೂಡ ತೆಗೆದುಕೊಂಡಿದ್ದಾರೆ. ಒಂದು ಪ್ರಕರಣದಲ್ಲಿ, ಸಚಿವರು ಅಧಿಕಾರಿಯೊಬ್ಬರಿಗೆ ರಾಜೀನಾಮೆ ನೀಡುವಂತೆ ಹೇಳಿದ್ದರು ಮತ್ತು ಅವರು ದೀರ್ಘ ರಜೆಯ ಮೇಲೆ ಹೋಗಿದ್ದರು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕೆಲಸ ಮಾಡದ ಅಧಿಕಾರಿಗಳು ಇತ್ತೀಚಿನ ವರ್ಷಗಳಲ್ಲಿ ಟೀಕೆಗೆ ಗುರಿಯಾಗುತ್ತಿದ್ದಾರೆ. ವಿವಿಧ ವಲಯಗಳಲ್ಲಿ ಕೆಲಸ ಮಾಡುತ್ತಿರುವ ರೈಲ್ವೇಯಲ್ಲಿನ ಹಿರಿಯ ಇಂಜಿನಿಯರ್‌ಗಳು ಕಾರ್ಯನಿರ್ವಹಿಸಲು ಒತ್ತಡ ಹೆಚ್ಚಿದೆ ಮತ್ತು ಸಚಿವಾಲಯವು ಕಠಿಣ ಗುರಿಗಳನ್ನು ನಿಗದಿಪಡಿಸಿದೆ ಎಂದು ಒಪ್ಪಿಕೊಂಡಿದ್ದಾರೆ. ಈ ವರ್ಷದ ಜನವರಿಯಲ್ಲಿ ಗರಿಷ್ಠ 11 ಅಧಿಕಾರಿಗಳು ರೈಲ್ವೆಗೆ ರಾಜೀನಾಮೆ ನೀಡಿರುವ ಸಂಗತಿ 'ಟೈಮ್ಸ್‌ ಆಫ್‌ ಇಂಡಿಯಾ'ಗೆ ತಿಳಿದು ಬಂದಿದೆ.

ರೈಲ್ವೆ ಬ್ಯಾರಿಕೇಡ್‌ ಬದಲು ರೋಪ್‌ವೈರ್‌ ಬೇಲಿ ಹಾಕಲು ಚಿಂತನೆ: ಸಚಿವ ಉಮೇಶ್‌ ಕತ್ತಿ
ಪ್ರಸ್ತುತ ವರ್ಷಗಳಲ್ಲಿ ಕಾರ್ಯನಿರ್ವಹಿಸದ ಅಧಿಕಾರಿಗಳು ಒತ್ತಡಕ್ಕೆ ಸಿಲುಕಿದ್ದಾರೆ. ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಕೂಡ ಹಲವಾರು ಕಾರ್ಯಕ್ರಮಗಳಲ್ಲಿ ಕೆಲ ಸೋಮಾರಿ ಅಧಿಕಾರಿಗಳನ್ನು ಕೆಲಸವನ್ನು ನಿಲ್ಲಿಸುವ ಬದಲು ರಾಜೀನಾಮೆ ನೀಡಿ ಮನೆಗೆ ಹೋಗಿ ಎಂದು ಒತ್ತಾಯಿಸಿದ್ದರು. ಸಂಸತ್ತಿನಲ್ಲಿ ಬಜೆಟ್ ಮಂಡಿಸಿದ ಕೂಡಲೇ ವೈಷ್ಣವ್ ಅವರು ಎಲ್ಲಾ ಜನರಲ್ ಮ್ಯಾನೇಜರ್‌ಗಳು (ಜಿಎಂಗಳು) ಮತ್ತು ನಿರ್ಮಾಣ ಯೋಜನೆಗಳ ಜವಾಬ್ದಾರಿ ಹೊತ್ತಿರುವ ಮುಖ್ಯ ಆಡಳಿತ ಅಧಿಕಾರಿಗಳಿಗೆ ಏ. 1 ರಿಂದ ಬಿಡ್‌ಗಳನ್ನು ಆಹ್ವಾನಿಸಲು ಎಲ್ಲಾ ಸಿದ್ಧತೆಗಳನ್ನು ಪೂರ್ಣಗೊಳಿಸುವಂತೆ ಸೂಚಿಸಿದ್ದರು. ಈ ಮೂಲಕ ನಿಧಾನಗತಿಯ ರೈಲ್ವೆಯಲ್ಲಿ ವೇಗಕ್ಕೆ ಮಣೆ ಹಾಕಿದ್ದರು. ಆದರೆ ಇದಕ್ಕೆ ಹೊಂದಿಕೊಳ್ಳಲಾಗದೆ ಹಲವರು ಕೆಲಸವನ್ನೇ ತೊರೆಯುತ್ತಿದ್ದಾರೆ.

ಪ್ರಯಾಣಿಕರಿಗೆ ಗುಣಮಟ್ಟದ ರೈಲು ಸೇವೆ ಜೊತೆಗೆ ಸರಕು ಸಾಗಾಣಿಕೆಯಲ್ಲಿ ನೈಋತ್ಯ ರೈಲ್ವೆ(South western Railway) 2021-22 ರ ಆರ್ಥಿಕ  ವರ್ಷದಲ್ಲಿ ಭರ್ಜರಿ ಪ್ರಗತಿ ಸಾಧಿಸಿದೆ.  2021-22 ರ ಹಣಕಾಸು ವರ್ಷದಲ್ಲಿ, ನೈಋತ್ಯ(SWR) ರೈಲ್ವೆ 44.12 ಮಿಲಿಯನ್ ಟನ್( million Tons) ಸರಕು ಸಾಗಣೆ ಮಾಡುವ ಮೂಲಕ 4160 ಕೋಟಿ ಆದಾಯ ಗಳಿಸಿದೆ.ಇದು ಕಳೆದ ಹಣಕಾಸು ವರ್ಷಕ್ಕಿಂತ( Last financial year) 15.5% ಹೆಚ್ಚು ಅಭಿವೃದ್ಧಿಯನ್ನು ದಾಖಲಿಸಿದೆ. ಸರಕು ಸಾಗಾಣಿಕೆಯಲ್ಲಿ ಕಬ್ಬಿಣ, ಸಿಮೆಂಟ್, ಆಹಾರ ಧಾನ್ಯಗಳನ್ನು ಸಾಗಾಟ ಹೆಚ್ಚಿನ ಪ್ರಮಾಣದ ಮಾಡಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಮೋದಿ ಅವರೇ ನನ್ನ ಗಂಡ ವಿಕ್ರಂನನ್ನು ಪಾಕಿಸ್ತಾನಕ್ಕೆ ಕಳುಹಿಸಿ: ಪಾಕ್ ಮಹಿಳೆಯ ಮನವಿ
ಕಾರವಾರ ಜೈಲಲ್ಲಿ ಡ್ರಗ್ಸ್‌ಗಾಗಿ ಜೈಲ‌ರ್ ಮೇಲೆ ಕೈದಿಗಳಿಂದ ಹಲ್ಲೆ: ಬೆಂಗಳೂರು ಜೈಲೊಳಗೆ ಸಿಗರೇಟ್ ಸಾಗಿಸಲೆತ್ನಿಸಿ ಸಿಕ್ಕಿಬಿದ್ದ ವಾರ್ಡನ್