ರೈತ ಪ್ರತಿಭಟನೆಗೆ 6 ತಿಂಗಳು: ಕರಾಳ ದಿನ ಆಚರಣೆಗೆ ಸಿಂಘು ಬಾರ್ಡರ್‌ನತ್ತ ಸಾವಿರಾರು ರೈತರು!

By Suvarna NewsFirst Published May 23, 2021, 4:21 PM IST
Highlights

* ಏರುತ್ತಿರುವ ಕೊರೋನಾ ಸೋಂಕಿನ ಮಧ್ಯೆ ರೈತರ ಪ್ರತಿಭಟನೆ

* ಕೃಷಿ ಕಾನೂನು ವಿರೋಧಿ ಪ್ರತಿಭಟನೆಗೆ ಆರು ತಿಂಗಳು

* ಕರಾಳ ದಿನದಾಚರಣೆಗೆ ಸಾವಿವಾರು ಸಂಖ್ಯೆಯಲ್ಲಿ ದೆಹಲಿಯತ್ತ ಬರುತ್ತಿದ್ದಾರೆ ರೈತರು

ನವದೆಹಲಿ(ಮೇ.23): ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಗಳ ವಿರುದ್ಧ ರೈತರು ಮತ್ತೊಂದು ಬೃಹತ್ ಪ್ರತಿಭಟನೆಗೆ ಸಜ್ಜಾಗಿದ್ದಾರೆ. ಹೌದು ಕೃಷಿ ಕಾನೂನು ವಿರೋಧಿ ಹೋರಾಟ ಆರು ತಿಂಗಳು ಪೂರೈಸುತ್ತಿರುವ ಹಿನ್ನೆಲೆ ರೈತರು ಮೇ 26ರನ್ನು ಕರಾಳ ದಿನವನ್ನಾಗಿ ಆಚರಿಸಲಿದ್ದಾರೆ. ಹೀಗಾಗಿ ಭಾನುವಾರ ಹರ್ಯಾಣದ ಕರ್ನಾಲ್‌ನಿಂದ ಸಾವಿರಾರು ರೈತರು ದೆಹಲಿ ಬಳಿಯ ಸಿಂಘು ಬಾರ್ಡರ್‌ನತ್ತ ಹೊರಟಿದ್ದಾರೆ.

ಇದು ಬೆಂಕಿ ಹಚ್ಚುವ ಸಮಯ: ಕಾಂಗ್ರೆಸ್‌ ಟೂಲ್‌ಕಿಟ್‌ ಬೆನ್ನಲ್ಲೇ ಮತ್ತೊಂದು ಶಾಕಿಂಗ್ ವಿಡಿಯೋ!

ಭಾರತೀಯ ರೈತ ಸಂಘದ ನಾಯಕ ಗುರ್ನಾಮ್‌ ಸಿಂಗ್ ಚಠೂನಿ ನೇತೃತ್ವದಲ್ಲಿ ರೈತರು ಸಾವಿರಾರು ವಾಹನಗಳಲ್ಲಿ ಕರ್ನಾಲ್‌ನಿಂದ ಹೊರಟಿದ್ದಾರೆ. ತಾವು ದೆಹಲಿ ಗಡಿಗೆ ತಲುಪಿದ ಬಳಿಕ ಅಲ್ಲಿ ಒಂದು ವಾರ ಲಂಗರ್‌ ಸೇವೆ(ಉಚಿತ ಊಟ) ನೀಡಲಿದ್ದೇವೆ ಎಂದು ಚಠೂನಿ ತಿಳಿಸಿದ್ದಾರೆ. ದೆಹಲಿಯ ವಿವಿಧ ಜಿಲ್ಲೆಗಳಲ್ಲಿ ಪ್ರತಿಭಟನೆಗೆ ಸೂಕ್ತವಾದ ನೇತೃತ್ವ ಸಿಗಲಿ ಎಂಬ ನಿಟ್ಟಿನಲ್ಲಿ ರೈತರು ಈಗಾಗಲೇ ದೆಹಲಿಯತ್ತ ಹೊರಟಿದ್ದಾರೆ ಎಂದೂ ತಿಳಿಸಿದ್ದಾರೆ.

ಕೊರೋನಾ ವೈರಸ್ ಪ್ರಕರಣಗಳು ಏರುತ್ತಿರುವ ಹಿನ್ನೆಲೆ ಹರ್ಯಾಣದಲ್ಲಿ ಸದ್ಯ ಲಾಕ್‌ಡೌನ್ ಹೇರಲಾಗಿದೆ. ಇನ್ನು ಇಲ್ಲಿನ ಸರ್ಕಾರ, ರಾಜ್ಯದ ಗ್ರಾಮೀಣ ಪ್ರದೇಶದಲ್ಲಿ ಏರುತ್ತಿರುವ ಕೊರೋನಾ ಪ್ರಕರಣಗಳಿಗೆ ಹರ್ಯಾಣ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರೇ ಕಾರಣ ಎಂದು ಆರೋಪಿಸಿದೆ. 

ಕೇಂದ್ರ ಸರ್ಕಾರದ ಐತಿಹಾಸಿಕ ನಿರ್ಧಾರ; ರೈತರ ರಸಗೊಬ್ಬರ ಸಬ್ಸಿಡಿಯಲ್ಲಿ ಗಣನೀಯ ಏರಿಕೆ!

ಕೆಂದ್ರ ಸರ್ಕಾರ ಜಾರಿಗೊಳಿಸಿರುವ ಮೂರು ಕೃಷಿ ಕಾನೂನು ವಿರೋಧಿಸಿ ರೈತರು ಕಳೆದ ಹಲವಾರು ತಿಂಗಳಿನಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಸರ್ಕಾರ ಈ ಮೂರೂ ಕಾನೂನುಗಳನ್ನು ಹಿಂಪಡೆಯಬೇಕು ಎಂಬುವುದು ರೈತರ ಬೇಡಿಕೆಯಾಗಿದೆ. ಜೊತೆಗೆ MSP ಗ್ಯಾರೆಂಟಿ ಬಗ್ಗೆಯೂ ಹೊಸ ಕಾನೂನು ರೂಪಿಸುವಂತೆ ಬೇಡಿಕೆ ಇಟ್ಟಿದ್ದಾರೆ. ಈ ವಿಚಾರವಾಗಿ ರೈತರು ಹಾಗೂ ಕೇಂದ್ರ ಸರ್ಕಾರದ ನಡುವೆ ಹಲವಾರು ಸುತ್ತಿನ ಮಾತುಕತೆ ನಡೆದಿದೆ. ಹೀಗಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. 
 

click me!