
ನವದೆಹಲಿ(ಡಿ.02): ಭಾರತ ಹಾಗೂ ಅಮೆರಿಕ ಶಸಸ್ತ್ರಪಡೆ ಸಮರಾಭ್ಯಾಸ ಹೊಸದೇನಲ್ಲ. ವಾಯುಸೇನೆ, ನೌಕಾಪಡೆ, ಭೂಸೇನೆ ಪ್ರತಿ ವರ್ಷ ಸಮಾರಭ್ಯಾಸ ನಡೆಸುತ್ತದೆ. ಆದರೆ ಈ ಬಾರಿಯ ಸೇನಾ ಪಡೆಯ ಸಮರಾಭ್ಯಾಸ ಭಾರತ ಹಾಗೂ ಚೀನಾ ಗಡಿ ಭಾಗದಲ್ಲಿ ನಡೆಯುತ್ತಿದೆ. ಉತ್ತರಖಂಡದಲ್ಲಿ ನಡೆಯುತ್ತಿರುವ ಈ ಸಮರಾಭ್ಯಾಸ ಚೀನಾ ಕಣ್ಣು ಕೆಂಪಾಗಿಸಿತ್ತು. ಇದರಿಂದ ಭಾರತ ಜೊತೆಗಿನ ಸಂಬಂಧಕ್ಕೆ ಧಕ್ಕೆಯಾಗಲಿದೆ ಎಂದು ಅಮೆರಿಕ ಎಚ್ಚರಿಸಿತ್ತು. ಇದೀಗ ಚೀನಾ ಎಚ್ಚರಿಕಿಗೆ ಅಮೆರಿಕ ತಿರುಗೇಟು ನೀಡುತ್ತಿದೆ. ಭಾರತ ಹಾಗೂ ಅಮೆರಿಕದ ಜಂಟಿ ಸಮರಭ್ಯಾಸ ಪ್ರಶ್ನಿಸಲು ಚೀನಾ ಯಾರು? ಇದು ಚೀನಾದ ಕೆಲಸವಲ್ಲ ಎಂದಿದೆ.
ನಾವು ಭಾರತಕ್ಕೆ ಬೆಂಬಲ ನೀಡುತ್ತೇವೆ. ಭಾರತವನ್ನು ಮತ್ತಷ್ಟು ಸಶಕ್ತಗೊಳಿಸಲು ಎಲ್ಲಾ ಸಹಾಕಾರ ನೀಡುತ್ತೇವೆ. ಈ ಕುರಿತು ಭಾರತ ಹಾಗೂ ಅಮೆರಿಕ ನಡುವಿನ ಜಂಟಿ ಒಪ್ಪಂವಿದೆ. ಭಾರತ ಹಾಗೂ ಅಮೆರಿಕ ಅತ್ಯುತ್ತಮ ಬಾಂಧವ್ಯ ಹೊಂದಿದೆ. ಭಾರತ ಎದುರಿಸುತ್ತಿರುವ ಸವಾಲುಗಳಿಗೆ ಸುಲಭ ಉತ್ತರ ಕಂಡುಕೊಳ್ಳಲು ಅಮೆರಿಕ ನೆರವಾಗಲಿದೆ. ಇದನ್ನು ಚೀನಾ ಪ್ರಶ್ನಿಸುವುದು ಸರಿಯಲ್ಲ. ಈ ಅವಕಾಶವೂ ಚೀನಾಗಿಲ್ಲ ಎಂದು ಅಮೆರಿಕ ಹೇಳಿದೆ.
G20 Summit -2022: ಜಿ20 ಶೃಂಗದ ಯಶಸ್ಸಿಗೆ ಮೋದಿ ಕಾರಣ : ಅಮೆರಿಕ
ತನ್ನ ಹಾಗೂ ಭಾರತದ ಸಂಬಂಧದಲ್ಲಿ ಮೂಗು ತೂರಿಸಿಕೂಡದು ಎಂದು ಅಮೆರಿಕಕ್ಕೆ ತಾಕೀತು ಮಾಡಿದ ಬೆನ್ನಲ್ಲೇ, ಭಾರತ-ಅಮೆರಿಕ ಜಂಟಿ ಸಮಾರಾಭ್ಯಾಸಕ್ಕೂ ಚೀನಾ ಆಕ್ಷೇಪ ಎತ್ತಿತ್ತು. ಭಾರತ-ಚೀನಾ ನಡುವಿನ ವಾಸ್ತವ ಗಡಿ ನಿಯತ್ರಣ ರೇಖೆ (ಎಲ್‌ಎಸಿ) ಸನಿಹ ನಡೆಯುತ್ತಿರುವ ಈ ಸಮಾರಾಭ್ಯಾಸದಿಂದ ಉಭಯ ದೇಶಗಳ ನಡುವಿನ ಒಪ್ಪಂದಕ್ಕೆ ಧಕ್ಕೆ ಬರುತ್ತದೆ ಎಂದು ಕ್ಸಿ ಜಿನ್‌ಪಿಂಗ್ ಸರ್ಕಾರ ಕಿಡಿಕಾರಿತ್ತು. ಭಾರತ-ಅಮೆರಿಕ ನಡುವೆ 18ನೇ ಆವೃತ್ತಿಯ ‘ಯುದ್ಧ ಅಭ್ಯಾಸ’ ಉತ್ತರಾಖಂಡದಲ್ಲಿ ನಡೆಯುತ್ತಿದೆ. ಇದು ಭಾರತ-ಚೀನಾ ಗಡಿಯಿಂದ 100 ಕಿ.ಮೀ. ದೂರದಲ್ಲಿದೆ.
ಈ ಬಗ್ಗೆ ಪಾಕಿಸ್ತಾನಿ ಪತ್ರಕರ್ತನೊಬ್ಬ ಕೇಳಿದ ಪ್ರಶ್ನೆಗ ಪ್ರತಿಕ್ರಿಯೆ ನೀಡಿದ ಚೀನಾ ವಿದೇಶಾಂಗ ವಕ್ತಾರ ಝಾವೋ ಲಿಜಿಯಾನ್, ‘ಈ ಯುದ್ಧಾಭ್ಯಾಸವು 1993 ಹಾಗೂ 1996ರ ನಡುವೆ ಭಾರತ-ಚೀನಾ ಮಾಡಿಕೊಂಡ ಒಪ್ಪಂದಕ್ಕೆ ಚ್ಯುತಿ ತರುತ್ತದೆ. ಭಾರತ-ಚೀನಾ ದೇಶಗಳ ನಡುವಿನ ನಂಬಿಕೆಗೆ ಧಕ್ಕೆ ತರುತ್ತದೆ’ ಎಂದರು.
2035ಕ್ಕೆ ಚೀನಾ ಬಳಿ 1500 ಸಿಡಿತಲೆಗಳು: ಅಮೆರಿಕ ವರದಿ
ಚೀನಾ ತನ್ನ ಪರಮಾಣು ಬಲವನ್ನು ವಿಸ್ತರಿಸುತ್ತಿದೆ ಮತ್ತು 2035ರ ವೇಳೆಗೆ ಸುಮಾರು 1,500 ಸಿಡಿತಲೆಗಳ ಸಂಗ್ರಹವನ್ನು ಹೊಂದುವ ಸಾಧ್ಯತೆಯಿದೆ. ಇದು ಪ್ರಸ್ತುತ ಅಂದಾಜು ಸಂಖ್ಯೆ 400ರಿಂದ ಹೆಚ್ಚಾಗಲಿದೆ ಎಂದು ಅಮೆರಿಕ ಹೇಳಿದೆ. ಅಮೆರಿಕ ರಕ್ಷಣಾ ಸಚಿವಾಲಯವು ಸಂಸತ್ತಿಗೆ ಚೀನಾ ಸೇನಾ ಬಲದ ಬಗ್ಗೆ ವರದಿಯೊಂದನ್ನು ಸಲ್ಲಿಸಿದೆ. ಅದರಲ್ಲಿ, ‘ಮುಂದಿನ ದಶಕದಲ್ಲಿ, ಬೀಜಿಂಗ್ ತನ್ನ ಪರಮಾಣು ಶಕ್ತಿಗಳನ್ನು ಆಧುನೀಕರಿಸುವ, ವೈವಿಧ್ಯಗೊಳಿಸುವ ಮತ್ತು ವಿಸ್ತರಿಸುವ ಗುರಿಯನ್ನು ಹೊಂದಿದೆ. ಈ ಹಿಂದಿಗಿಂತ ಹೆಚ್ಚಾಗಿ ಚೀನಾ ಸೇನಾ ಆಧುನೀಕರಣಕ್ಕೆ ಹೆಚ್ಚಿನ ಆದ್ಯತೆ ನೀಡಿದೆ. ಭೂಮಿ, ವಾಯು ಹಾಗೂ ಸಮುದ್ರದಲ್ಲಿ ತನ್ನ ಅಣ್ವಸ್ತ್ರ ನೆಲೆಗಳನ್ನು ವಿಸ್ತರಿಸುತ್ತಿದೆ. ಅಣ್ವಸ್ತ್ರ ಪಡೆಯನ್ನು ವಿಸ್ತರಿಸಲು ಅನುಕೂಲವಾಗುವಂತೆ ಅದು ತನ್ನ ಮೂಲಸೌಕರ್ಯಗಳನ್ನು ವಿಸ್ತರಿಸಿಕೊಳ್ಳುತ್ತಿದೆ’ ಎಂದು ಹೇಳಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ