
ಹೈದರಾಬಾದ್( ಡಿ. 09) ವಿಶ್ವದ ಎಲ್ಲ ಕಡೆ ಕೊರೋನಾಕ್ಕೆ ಲಸಿಕೆ ಯಾವಾಗ ಸಿಗುತ್ತದೆ ಎಂಬ ಚರ್ಚೆ ಪ್ರತಿದಿನ ನಡೆಯುತ್ತಲೆ ಇದೆ. ಹಲವು ಕಂಪನಿಗಳು ಮೂರನೇ ಹಂತದ ಟ್ರಯಲ್ ನಲ್ಲಿವೆ.
COVID-19 ವಿರುದ್ಧ ಸುರಕ್ಷಿತ ಮತ್ತು ಪರಿಣಾಮಕಾರಿ ಲಸಿಕೆ ವಿಚಾರದ ಬಗ್ಗೆ ಮುಂದಿನ ಸಂಶೋಧನೆಗೆಳ ಹಾದಿ ತಿಳಿದುಕೊಳ್ಳಲು ಹಲವಾರು ರಾಷ್ಟ್ರಗಳ 70 ರಾಯಭಾರಿಗಳು ಮತ್ತು ಹೈ ಕಮಿಷನರ್‌ಗಳ ತಂಡ ಹೈದರಾಬಾದ್‌ನ ಜೀನೋಮ್ ವ್ಯಾಲಿಯಲ್ಲಿರುವ ಭಾರತ್ ಬಯೋಟೆಕ್ ಗೆ ಭೇಟಿ ನೀಡಿತ್ತು.
ವಿದೇಶಾಂಗ ಸಚಿವಾಲಯದ ನೇತೃತ್ವದ ನಿಯೋಗದಲ್ಲಿ ಏಷ್ಯಾ, ಆಫ್ರಿಕಾ, ಯುರೋಪ್, ಉತ್ತರ ಅಮೆರಿಕಾ, ದಕ್ಷಿಣ ಅಮೆರಿಕಾ ಮತ್ತು ಓಷಿಯಾನಿಯಾದ ವಿಶ್ವದಾದ್ಯಂತ 70 ದೇಶಗಳ ಹೈ ಕಮಿಷನರ್‌ಗಳು ಮತ್ತು ಸರ್ಕಾರಿ ಪ್ರತಿನಿಧಿಗಳು ಇದ್ದರು.
ಮೊಟ್ಟ ಮೊದಲ ಲಸಿಕೆ ಪಡೆದ 90ರ ವೃದ್ಧೆ
ಭಾರತ್ ಬಯೋಟೆಕ್ ನ ಸಂಶೋಧನೆ, ಅಭಿವೃದ್ಧಿ, ಕ್ಲಿನಿಕಲ್ ಪ್ರಯೋಗಗಳು ಮತ್ತು ಉತ್ಪಾದನಾ ತಂಡಗಳ ನೇತೃತ್ವ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಡಾ. ಕೃಷ್ಣ ಎಲಾ ಅವರು ಭಾರತ್ ಬಯೋಟೆಕ್‌ನ ಲಸಿಕೆ ಅಭಿವೃದ್ಧಿ ಕಾರ್ಯಕ್ರಮದ ಬಗ್ಗೆ ನಿಯೋಗಕ್ಕೆ ವಿವರಣೆ ನೀಡಿದರು.
ಪ್ರತಿನಿಧಿಗಳಿಗೆ ಭಾರತ್ ಬಯೋಟೆಕ್‌ನ ಸಂಶೋಧನಾ ಪ್ರಕ್ರಿಯೆ, ಉತ್ಪಾದನಾ ಸಾಮರ್ಥ್ಯಗಳು, ಪರಿಣತಿ, ಬಳಕೆ ವಿಧಾನ ಎಲ್ಲವನ್ನು ವಿವರಿಸಲಾಯಿತು.
ರಾಯಭಾರಿಗಳು ಸಂಸ್ಥೆಯ ಕೆಲಸ ಮೆಚ್ಚಿಕೊಂಡರು. ಭಾರತ್ ಬಯೋಟೆಕ್‌ನ ಕೊವಾಕ್ಸಿನ್ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) - ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿ (ಎನ್‌ಐವಿ) ಸಹಯೋಗದೊಂದಿಗೆ ಅಭಿವೃದ್ಧಿಪಡಿಸಲಾಗಿದೆ. ಬಿಎಸ್‌ಎಲ್ -3 (ಜೈವಿಕ ಸುರಕ್ಷತೆ ಮಟ್ಟ 3) ಆಧಾರದಲ್ಲಿ ಅಭಿವೃದ್ಧಿಪಡಿಸಿದ್ದು ಕೆಲವೇ ದಿನದಲ್ಲಿ ನಾಗರಿಕರಿಗೆ ದೊರೆಯಲಿದೆ.
ವಿಲಿಯಂ ಶೆಕ್ಸ್ ಪೀಯರ್‌ಗೆ ಎರಡನೇ ಡೋಸ್
300 ಮಿಲಿಯನ್ COVAXIN ಡೋಸ್ ತಯಾರಿಕೆ ಗುರಿಯನ್ನು ಪ್ರಾಥಮಿಕವಾಗಿ ಹೊಂದಲಾಗಿದೆ. COVAXIN ಟ್ರಯಲ್ ಮೂರನೇ ಹಂತ ನವೆಂಬರ್ ನಲ್ಲಿ ಆರಂಭವಾಗಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಭಾರತ್ ಬಯೋಟೆಕ್‌ನ ಜಂಟಿ ವ್ಯವಸ್ಥಾಪಕ ನಿರ್ದೇಶಕಿ ಸುಸಿತ್ರಾ ಎಲಾ, ಕೋವಾಕ್ಸಿನ್ ಅಭಿವೃದ್ಧಿ ಮತ್ತು ಕ್ಲಿನಿಕಲ್ ಮೌಲ್ಯಮಾಪನ ಮಾಡಲಾಗುತ್ತಿದೆ. ಮಾರಕ ಕಾಯಿಲೆಯ ವಿರುದ್ಧದ ಹೋರಾಟದಲ್ಲಿ ಲಸಿಕೆ ಮೈಲಿಗಲ್ಲಾಗಲಿದೆ ಎಂದು ಹೇಳಿದರು. ಭಾರತ್ ಬಯೋಟೆಕ್ 140 ಕ್ಕೂ ಹೆಚ್ಚು ಜಾಗತಿಕ ಪೇಟೆಂಟ್‌ಗಳನ್ನು ಹೊಂದಿದೆ. ಇದರಲ್ಲಿ 16 ಕ್ಕೂ ಹೆಚ್ಚು ಲಸಿಕೆಗಳು ಸೇರಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ