ಶಾ ಮನೆಯ ಎಲ್ಲ ಸಿಬ್ಬಂದಿಗೆ ಕೊರೋನಾ

By Kannadaprabha NewsFirst Published Apr 16, 2021, 7:53 AM IST
Highlights

ಕೊರೋನಾ ಮಹಾಮಾರಿ ಪ್ರಕರಣ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಲಕ್ಷ ಲಕ್ಷ ಕೇಸ್‌ಗಳು ಬೆಳಕಿಗೆ ಬರುತ್ತಿವೆ. ಇದೀಗ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಾಧೀಶ ನ್ಯಾ. ಎಂ.ಆರ್‌. ಶಾ ಅವರ ಮನೆಯ ಎಲ್ಲ ಕೆಲಸಗಾರರಿಗೆ ಕೊರೋನಾ ಸೋಂಕು ದೃಢಪಟ್ಟಿದೆ. 

ನವದೆಹಲಿ (ಏ.16): ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಾಧೀಶ ನ್ಯಾ. ಎಂ.ಆರ್‌. ಶಾ ಅವರ ಮನೆಯ ಎಲ್ಲ ಕೆಲಸಗಾರರಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಖುದ್ದು ನ್ಯಾ. ಶಾ ಅವರು ಈ ವಿಷಯವನ್ನು ಗುರುವಾರ ಬಹಿರಂಗಪಡಿಸಿದ್ದಾರೆ. 

ನ್ಯಾ.ಡಿ.ವೈ. ಚಂದ್ರಚೂಡ ಅವರ ಜತೆ ವಿಚಾರಣೆಯೊಂದರ ವೇಳೆ ಈ ಬಗ್ಗೆ ಮಾಹಿತಿ ನೀಡಿದ ನ್ಯಾ. ಶಾ, ‘ನನ್ನ ಮನೆಯ ಎಲ್ಲ ಕೆಲಸಗಾರರಿಗೆ ಕೊರೋನಾ ಸೋಂಕು ತಗುಲಿದೆ. ದೇವರ ದಯೆಯಿಂದ ನಾನು ಆರೋಗ್ಯದಿಂದ ಇದ್ದೇನೆ. ಆದಾಗ್ಯೂ ಪರಿಸ್ಥಿತಿ ತುಂಬಾ ಭಯಾನಕವಾಗಿದೆ’ ಎಂದರು.

ಅಮೆರಿಕಾ ಮೀರಿಸಿದ ಭಾರತ : ಒಂದೇ ದಿನ ದಾಖಲೆಯಷ್ಟು ಕೇಸ್ ...

 ಬಳಿಕ ಪ್ರತಿಕ್ರಿಯಿಸಿದ ನ್ಯಾ.ಚಂದ್ರಚೂಡ,  ನ್ಯಾ.ಶಾ ಅವರ ಮನೆಯ ಸ್ಥಿತಿ ಕಳವಳಕರ. ಅವರು ಆ ಚಿಂತೆಯಲ್ಲಿ ಮಗ್ನರಾಗಿದ್ದಾರೆ. ಹೀಗಾಗಿ ಪ್ರಸ್ತುತ ಕಲಾಪ ಬಿಟ್ಟು ಸದ್ಯಕ್ಕೆ ಅನ್ಯ ಕಲಾಪ ನಡೆಸುವುದಿಲ್ಲ’ ಎಂದರು.

click me!