ಕೊರೋನಾ ಎಫೆಕ್ಟ್: ಮಾರ್ಚ್ 31ರ ವರೆಗೆ ಶಾಲೆಗಳಿಗೆ ರಜಾ

By Suvarna NewsFirst Published Mar 5, 2020, 5:48 PM IST
Highlights

ಕರೋನಾ ವೈರಸ್ ಭೀತಿ/ ಪ್ರಾಥಮಿಕ ಶಾಲೆಗಳಿಗೆ ರಜೆ/ ರಾಷ್ಟ್ರ ರಾಜಧಾನಿ ದೆಹಲಿಯ ಎಲ್ಲ ಶಾಲೆಗಳಿಗೆ ಮಾರ್ಚ್ 31ರವರೆಗೆ ರಜಾ/ ಕರೋನಾ ಭೀತಿಯಿಂದ ಪಾರಾಗಲು ಉಪಾಯ

ನವದೆಹಲಿ(ಮಾ. 05)  ಕರೋನಾ ಭೀತಿಗೆ ಇಡೀ ದೇಶವೆ ಬೆಚ್ಚಿದೆ. ರಾಷ್ಟ್ರ ರಾಜಧಾನಿಯಲ್ಲಿ ಸೋಂಕಿತರ ಪ್ರಕರಣಗಳು ವರದಿಯಾಗಿದ್ದು ಆತಂಕ ಮತ್ತಷ್ಟು ಹೆಚ್ಚು ಮಾಡಿದೆ. ಎಚ್ಚೆತ್ತುಕೊಂಡಿರುವ ದೆಹಲಿ ಸರ್ಕಾರ ಮಾರ್ಚ್ 6 ರಿಂದ ಮಾರ್ಚ್ 31ರ ವರೆಗೆ ರಜಾ ಘೋಷಣೆ ಮಾಡಿದೆ.

ದೆಹಲಿಯ ಪ್ರಾಥಮಿಕ ಶಾಲೆಗಳಿಗೆ ರಜೆ ಘೋ‍ಷಿಸಲಾಗಿದೆ. ಪರೀಕ್ಷೆಗಳನ್ನು ಮುಂದಕ್ಕೆ ಹಾಕಲಾಗಿದೆ. ಸಿಬಿಎಸ್‌ ಸಿ ಪರೀಕ್ಷೆಗಳನ್ನು ಸಹ ಮುಂದೂಡಲೂ ತೀರ್ಮಾನ ಮಾಡಲಾಗಿದೆ ಎಂದು ಡಿಸಿಎಂ ಮನೀಶ್ ಸಿಸೋಡಿಯಾ ತಿಳಿಸಿದ್ದಾರೆ.

ಸರ್ಕಾರದ ಈ ಆದೇಶ ಸರ್ಕಾರಿ, ಎಂಸ್‌ಡಿ ,ಖಾಸಗಿ ಮತ್ತು ಅನುದಾನಿತ ಶಾಲೆಗಳಿಗೆ ಅನ್ವಯವಾಗುತ್ತದೆ. ದೆಹಲಿಯ 1ನೇ ತರಗತಿಯಿಂದ 5ನೇ ತರಗತಿವರೆಗಿಬ ಮಕ್ಕಳಿಗೆ ಮಾರ್ಚ್ 31ರ ತನಕ ರಜಾ ಇರಲಿದೆ. 

ಕರೋನಾಗೆ ಮೂರು ತಿಂಗಳಲ್ಲಿ ಔಷಧಿ!

ನೋಯ್ಡಾದ ವಿದ್ಯಾರ್ಥಿಯೊಬ್ಬರ ತಂದೆಗೆ ಕೊರೋನಾ ಸೋಂಕು ಕಾಣಿಸಿಕೊಂಡಿದೆ ಎಂಬ ಕಾರಣಕ್ಕೆ ಬುಧವಾರ ಶಾಲೆ ಕ್ಳೋಸ್ ಮಾಡಲಾಗಿತ್ತು. ಒಂದೇ ದಿನದಲ್ಲಿ ದೇಶದಲ್ಲಿ ಸೋಂಕಿತರ ಸಂಖ್ಯೆ 5 ರಿಂದ 31ಕ್ಕೆ ಏರಿತ್ತು. ಗಜಿಯಾಬಾದ್ ನಲ್ಲಿ ಮತ್ತೊಂದು ಪಾಸಿಟಿವ್ ಕೇಸ್ ಕಂಡುಬಂದಿದ್ದು ಆತಂಕ ಹೆಚ್ಚಿಸಿತ್ತು.

ಪೋಷಕರು ಸಹ ಶಾಲೆಗಳಿಗೆ ರಜೆ ನೀಡಬೇಕು ಎಂದು ಆಗ್ರಹಿಸಿದ್ದರು. ನೋಯ್ಡಾ, ಫರೀದಾಬಾದ್, ಗಜಿಯಾಬಾದ್, ಗುರುಗ್ರಾಮ ಸೇರಿದಂತೆ ಪ್ರಮುಖ ಪ್ರದೇಶದ ಶಾಲೆಗಳಿಗೆ ರಜಾ ಘೋಷಣೆ ಮಾಡಲಾಗಿದೆ. ಇದು ಒಂದು ರೀತಿಯಲ್ಲಿ ಮುಂಜಾಗೃತಾ ಕ್ರಮ ಎಂದೇ ಪರಿಭಾವಿಸಬಹುದು.

click me!