ಹಣ ಇಟ್ಟು ಆಡುವ ಎಲ್ಲಾ ಆನ್‌ಲೈನ್‌ ಗೇಮ್‌ಗಳು ಕಡ್ಡಾಯ ನಿಷೇಧ

Kannadaprabha News   | Kannada Prabha
Published : Aug 21, 2025, 04:20 AM IST
online game

ಸಾರಾಂಶ

ನೈಜ ಹಣಬಳಸಿ ಆಡುವ ಎಲ್ಲಾ ರೀತಿಯ ಆನ್‌ಲೈನ್‌ ಗೇಮ್‌ಗಳನ್ನು ನಿಷೇಧಿಸುವ ಆನ್‌ಲೈನ್‌ ಗೇಮಿಂಗ್‌ ಉತ್ತೇಜನ ಮತ್ತು ನಿಯಂತ್ರಣ-2025 ವಿಧೇಯಕವು ಬುಧವಾರ ಲೋಕಸಭೆಯಲ್ಲಿ ಅಂಗೀಕಾರಗೊಂಡಿದೆ.

ನವದೆಹಲಿ : ನೈಜ ಹಣಬಳಸಿ ಆಡುವ ಎಲ್ಲಾ ರೀತಿಯ ಆನ್‌ಲೈನ್‌ ಗೇಮ್‌ಗಳನ್ನು ನಿಷೇಧಿಸುವ ಆನ್‌ಲೈನ್‌ ಗೇಮಿಂಗ್‌ ಉತ್ತೇಜನ ಮತ್ತು ನಿಯಂತ್ರಣ-2025 ವಿಧೇಯಕವು ಬುಧವಾರ ಲೋಕಸಭೆಯಲ್ಲಿ ಅಂಗೀಕಾರಗೊಂಡಿದೆ.

ಹೆಚ್ಚುತ್ತಿರುವ ಆನ್‌ಲೈನ್‌ ಗೇಮ್‌ ಚಟ, ಅಕ್ರಮ ಹಣ ವರ್ಗಾವಣೆ ಮತ್ತು ಆ್ಯಪ್‌ಗಳ ಮೂಲಕ ನಡೆಯುತ್ತಿರುವ ಹಣಕಾಸು ವಂಚನೆಗೆ ಕಡಿವಾಣ ಹಾಕುವ ಉದ್ದೇಶದಿಂದ ಕೇಂದ್ರ ಸರ್ಕಾರ ವಿಧೇಯಕ ಮಂಡಿಸಿ ಅಂಗೀಕಾರ ಪಡೆದುಕೊಂಡಿದೆ.

ಈ ವಿಧೇಯಕವು ಆನ್‌ಲೈನ್‌ ಗೇಮ್‌ಗಳ ನಿರ್ವಹಣೆ, ವೇದಿಕೆ ಕಲ್ಪಿಸುವುದು, ಜಾಹೀರಾತು, ಇವುಗಳ ಯಾವುದೇ ಹಣಕಾಸು ಸಂಸ್ಥೆಗಳ ಮೂಲಕ ಇಂಥ ಗೇಮ್‌ಗಳಿಗೆ ಹಣದ ವರ್ಗಾವಣೆ ನಿಷೇಧಿಸುತ್ತದೆ.

ವಿಧೇಯಕದಲ್ಲೇನಿದೆ?:

ಆನ್‌ಲೈನ್‌ ಬೆಟ್ಟಿಂಗ್‌, ಜೂಜಾಟಗಳಿಗೆ ಸಂಪೂರ್ಣ ನಿಷೇಧ. ಅಂದರೆ ಫ್ಯಾಂಟಸಿ ಸ್ಪೋರ್ಟ್ಸ್‌, ಪೋಕರ್‌, ರಮ್ಮಿ ಮತ್ತು ಇತರೆ ಕಾರ್ಡ್‌ ಗೇಮ್ಸ್‌ ಸೇರಿ ಹಣ ಹಾಕಿ ಆಡುವ ಎಲ್ಲಾ ರೀತಿಯ ಗೇಮ್ಸ್‌ಗಳನ್ನು ನಿರ್ಬಂಧಿಸುತ್ತದೆ. ಆರೋಪಿಗಳಿಗೆ 3 ವರ್ಷದ ವರೆಗೆ ಜೈಲು, 1 ಕೋಟಿ ವರೆಗೆ ದಂಡ ವಿಧಿಸಲು ಅವಕಾಶ ಮಾಡಿಕೊಡುತ್ತದೆ.

ಆನ್‌ಲೈನ್‌ ಗೇಮ್ಸ್‌ ಜಾಹೀರಾತು ನೀಡುವವರಿಗೆ 2 ವರ್ಷ ಜೈಲು, 50 ಲಕ್ಷ ರು ವರೆಗೆ ದಂಡ, ಹಣಕಾಸು ವ್ಯವಸ್ಥೆ ಕಲ್ಪಿಸಿದರೆ 3 ವರ್ಷ ಜೈಲು ಮತ್ತು 1 ಕೋಟಿ ವರೆಗೆ ದಂಡ, ಪದೇ ಪದೆ ಅಪರಾಧ ಎಸಗುವವರಿಗೆ 2 ಕೋಟಿ ವರೆಗೆ ದಂಡ, 5 ವರ್ಷದ ವರೆಗೆ ಜೈಲು ಶಿಕ್ಷೆ ವಿಧಿಸಲೂ ಅವಕಾಶವಿದೆ. ಇಲ್ಲಿ ಕೆಲ ವಿಚಾರಗಳಲ್ಲಿನ ಅಪರಾಧಗಳಿಗೆ ಜಾಮೀನು ರಹಿತ ಪ್ರಕರಣ ದಾಖಲಿಸಲು ಅವಕಾಶಲಿದೆ.

ಸಮಾಜದ ಉಳಿವಿಗೆ ನಿಷೇಧಆನ್‌ಲೈನ್‌ ಮನಿ ಗೇಮಿಂಗ್‌, ಗಂಭೀರ ಸಾಮಾಜಿಕ ಮತ್ತು ಆರೋಗ್ಯ ಸಮಸ್ಯೆಯನ್ನು ಸೃಷ್ಟಿಸಿದೆ. ಇದು ಸಮಾಜದ ಮೇಲೆ ನಕಾರಾತ್ಮಕ ಪರಿಣಾಮಗಳಿಗೆ ಕಾರಣವಾಗುತ್ತಿದೆ. ಇದನ್ನು ತಡೆಯಲು ಕಠಿಣ ನಿಯಂತ್ರಣ ಕ್ರಮದ ಅಗತ್ಯವಿದ್ದ ಕಾರಣ ಸರ್ಕಾರ ಕಾಯ್ದೆ ರೂಪಿಸಿದೆ. ಆದರೆ ಇ ಸ್ಪೋರ್ಟ್ಸ್‌ ಮತ್ತು ಸೋಷಿಯಲ್‌ ಗೇಮಿಂಗ್‌ ಅನ್ನು ಸರ್ಕಾರ ಉತ್ತೇಜಿಸಲಿದೆ ಮತ್ತು ಭಾರತ ಇಂಥ ಗೇಮಿಂಗ್‌ನಲ್ಲಿ ಜಾಗತಿಕ ಹಬ್‌ ಆಗಿ ಬೆಳೆಯಲು ನೆರವು ನೀಡಲಿದೆ.

- ಅಶ್ವಿನ್‌ ವೈಷ್ಣವ್‌, ಕೇಂದ್ರ ಐಟಿ ಖಾತೆ ಸಚಿವ

ಆನ್‌ಲೈನ್ ಗೇಮ್ ನಿಷೇಧದಿಂದ 2 ಲಕ್ಷ ಉದ್ಯೋಗ ನಷ್ಟ!

ನವದೆಹಲಿಕೌಶ್ಯಲ್ಯಾಧರಿತವೂ ಸೇರಿ ಹಣ ಬಳಸಿ ಆಡುವ ಎಲ್ಲಾ ರೀತಿಯ ಆನ್‌ಲೈನ್‌ ಗೇಮ್‌ಗಳನ್ನು ನಿಷೇಧಿಸುವ ಕೇಂದ್ರ ಸರ್ಕಾರದ ವಿಧೇಯಕ ಕುರಿತು ಮರು ಪರಿಶೀಲನೆಗೆ ಆಗ್ರಹಿಸಿ ಆನ್‌ಲೈನ್‌ ಸ್ಕಿಲ್‌ ಗೇಮಿಂಗ್‌ ಕ್ಷೇತ್ರದ ಸಂಘಟನೆಗಳು ಬುಧವಾರ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರಿಗೆ ಪತ್ರ ಬರೆದಿದ್ದಾರೆ.

ಎಲ್ಲಾ ರೀತಿಯ ಆನ್‌ಲೈನ್ ಗೇಮಿಂಗ್‌ಗೆ ನಿಷೇಧ ಹೇರುವುದರಿಂದ ದೇಶದಲ್ಲಿ 2 ಲಕ್ಷಕ್ಕೂ ಹೆಚ್ಚು ಮಂದಿ ಉದ್ಯೋಗ ಕಳೆದುಕೊಳ್ಳಲಿದ್ದಾರೆ, 400ಕ್ಕೂ ಹೆಚ್ಚು ಸಂಸ್ಥೆಗಳು ಬಾಗಿಲು ಹಾಕಲಿವೆ. ದೇಶದಲ್ಲಿ 50 ಕೋಟಿಗೂ ಹೆಚ್ಚು ಗೇಮರ್‌ಗಳಿದ್ದಾರೆ. ಉದ್ಯಮವು ಸರ್ಕಾರಕ್ಕೆ ವಾರ್ಷಿಕ 20000 ಕೋಟಿ ತೆರಿಗೆ ಪಾವತಿಸುತ್ತಿದೆ. ಎಂದು ಆತಂಕ ವ್ಯಕ್ತಪಡಿಸಿದೆ.

ಬೆಟ್ಟಿಂಗ್‌ನಿಂದ ಜನರಿಗೇ 20 ಸಾವಿರ ಕೋಟಿ ರು. ನಷ್ಟ

ನವದೆಹಲಿ : ಹಣ ಆಧರಿತ ಆನ್‌ಲೈನ್‌ ಗೇಮ್‌ಗಳ ನಿಷೇಧಕ್ಕೆ ವಿರೋಧ ವ್ಯಕ್ತ ಆಗುತ್ತಿರುವುದಕ್ಕೆ ಕೇಂದ್ರ ಸರ್ಕಾರ ಆಕ್ಷೇಪಿಸಿದ್ದು, ಇದಕ್ಕೆ ಕಾರಣಗಳನ್ನು ಕೆಲವು ಅಂಕಿ-ಅಂಶ ಸಮೇತ ವಿವರಿಸಿದೆ.ಹಣ ಬಳಸಿ ಆಡುವ ಆನ್‌ಲೈನ್‌ ಬೆಟ್ಟಿಂಗ್‌ ವೇದಿಕೆಗಳಿಂದಾಗಿ ವಾರ್ಷಿಕವಾಗಿ 45 ಕೋಟಿ ಜನರು 20,000 ಕೋಟಿ ರು.ಗೂ ಅಧಿಕ ನಷ್ಟ ಮಾಡಿಕೊಳ್ಳುತ್ತಿದ್ದಾರೆ. ಈ ಕಾರಣಕ್ಕಾಗಿಯೇ ಆನ್‌ಲೈನ್‌ ಗೇಮ್‌ ಮೇಲೆ ಕಡಿವಾಣ ಮತ್ತು ಬೆಟ್ಟಿಂಗ್‌ ಆ್ಯಪ್‌ಗಳ ನಿಷೇಧಕ್ಕೆ ಸರ್ಕಾರ ಮಸೂದೆ ರೂಪಿಸಿ ಅದನ್ನು ಅಂಗೀಕರಿಸಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.

ಜೊತೆಗೆ ಬೆಟ್ಟಿಂಗ್‌ ಪರಿಣಾಮಗಳ ಬಗ್ಗೆ ಪಕ್ಷಾತೀತವಾಗಿ ಸಂಸದರೂ ವ್ಯಕ್ತಪಡಿಸಿದ ಕಳವಳ ಕೂಡಾ ಕಾಯ್ದೆ ಜಾರಿಗೆ ಕಾರಣವಾಗಿದೆ ಎನ್ನಲಾಗಿದೆ.----

ಇತ್ತೀಚಿನ ವರ್ಷಗಳಲ್ಲಿ ಮನಿ ಗೇಮಿಂಗ್‌ ಮಕ್ಕಳು, ಯುವಸಮೂಹದಲ್ಲಿ ದೊಡ್ಡಮಟದಲ್ಲಿ ಚಟಕ್ಕೆ ಕಾರಣವಾಗಿ ಆತಂಕ ಮೂಡಿಸಿತ್ತುಪ್ರತಿ ವರ್ಷ ದೇಶದಲ್ಲಿ ಅಂದಾಜು 45 ಕೋಟಿ ಜನ ಗೇಮಿಂಗ್‌ ಮೂಲಕ 20000 ಕೋಟಿ ರು. ನಷ್ಟ ಅನುಭವಿಸುತ್ತಿದ್ದರು ಎಂಬ ಲೆಕ್ಕವಿತ್ತು

ಜೊತೆಗೆ ಇಂಥ ಆ್ಯಪ್‌ಗಳು ಅಕ್ರಮ ಹಣ ವರ್ಗಾವಣೆಯ ದೊಡ್ಡ ಜಾಲವಾಗಿ ಹೊರಹೊಮ್ಮಿದೆ. ದೇಶದ ಭದ್ರತೆ ಅಪಾಯ ತಂದ ಶಂಕೆ ಇತ್ತುಈ ಹಿನ್ನೆಲೆಯಲ್ಲಿ ಮನಿಗೇಮಿಂಗ್‌ ಆಟಗಳನ್ನು ನಿಷೇಧಿಸುವ, ಆನ್‌ಲೈನ್‌ ಗೇಮ್‌ಗಳ ಮೇಲೆ ನಿಯಂತ್ರಣದ ಕಠಿಣ ಕಾಯ್ದೆ ರೂಪಿಸಲಾಗಿದೆ

ಈ ಕಾಯ್ದೆ ಅನ್ವಯ ಆನ್‌ಲೈನ್‌ ಗೇಮ್‌ಗಳ ನಿರ್ವಹಣೆ, ವೇದಿಕೆ ಕಲ್ಪಿಸುವುದು, ಜಾಹೀರಾತು ಪ್ರಸಾರ ಶಿಕ್ಷಾರ್ಹ ಅಪರಾಧವಾಗಿರುತ್ತದೆಬ್ಯಾಂಕ್‌ ಮತ್ತು ಯಾವುದೇ ಹಣಕಾಸು ಸಂಸ್ಥೆಗಳು ಇಂಥ ಗೇಮಿಂಗ್‌ ಆ್ಯಪ್‌ಗಳ ಹಣದ ವರ್ಗಾವಣೆವನ್ನು ಕಾಯ್ದೆ ಪೂರ್ಣ ನಿಷೇಧಿಸುತ್ತದೆ

ನಿಯಮ ಉಲ್ಲಂಘನೆ ಮಾಡಿದರೆ 3 ವರ್ಷದ ವರೆಗೆ ಜೈಲು, 1 ಕೋಟಿ ವರೆಗೆ ದಂಡ ವಿಧಿಸಲು ಹೊಸ ಕಾಯ್ದೆಯು ಅವಕಾಶ ಮಾಡಿಕೊಡುತ್ತದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕೆಲಸ ಇಲ್ಲದ ಗಂಡನಿಗೆ ಪತ್ನಿ ಶೀಲದ ಮೇಲೆ ಶಂಕೆ: ನಿದ್ರೆಯಲ್ಲಿದ್ದ ಮಗಳ ಕತ್ತು ಸೀಳಿದ ಪತಿ
ಪುಟಿನ್‌ಗೆ ರಷ್ಯನ್ ಭಾಷೆ ಭಗವದ್ಗೀತೆ ಉಡುಗೊರೆ ನೀಡಿದ ಪ್ರಧಾನಿ ಮೋದಿ, ಭಾರಿ ಮೆಚ್ಚುಗೆ