ಉತ್ತರ ಪ್ರದೇಶದಲ್ಲಿ ಅಗ್ನಿಪರೀಕ್ಷೆಗೆ ಮುಂದಾದ ಓವೈಸಿ ; 2022ರ ಚುನಾವಣೆಗೆ 100 ಅಭ್ಯರ್ಥಿಗಳು ಕಣಕ್ಕೆ!

By Suvarna NewsFirst Published Jun 12, 2021, 10:01 PM IST
Highlights
  • ಮತ್ತೊಂದು ರಾಜ್ಯಕ್ತೆ ಅಸಾದುದ್ದೀನ್ ಓವೈಸಿ ಮುಂದಾಳತ್ವದ AIMIM ಪಕ್ಷ
  • ಉತ್ತರ ಪ್ರದೇಶ ಚುನಾವಣಗೆ ಸ್ಪರ್ಧಿಸಲು ಓವೈಸಿ ಪ್ಲಾನ್
  • 100 ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಮುಂದಾದ ಓವೈಸಿ
     

ಹೈದರಾಬಾದ್(ಜೂ.12):  ಅಸಾದುದ್ದೀನ್ ಓವೈಸಿ ಅಧ್ಯಕ್ಷತೆಯ AIMIM ಪಕ್ಷ ಇದೀಗ ದೇಶದ ಮತ್ತೊಂದು ರಾಜ್ಯದಲ್ಲಿ ಬೇರೂರಲು ಸಜ್ಜಾಗಿದೆ. 2022ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ AIMIM ಪಕ್ಷ ಸ್ಪರ್ಧಿಸಲು ಸಜ್ಜಾಗಿದೆ. ಪಕ್ಷದ ಅಧ್ಯಕ್ಷ ಅಸಾದುದ್ದೀನ್ ಓವೈಸಿ 100 ಅಭ್ಯರ್ಥಿಗಳನ್ನು ಉತ್ತರ ಪ್ರದೇಶದಲ್ಲಿ ಕಣಕ್ಕಿಳಿಸಲು ಮುಂದಾಗಿದ್ದಾರೆ.

ಕಾಂಗ್ರೆಸ್‌ನ ಅತೃಪ್ತರೆಲ್ಲರೂ ಓವೈಸಿ ಪಕ್ಷಕ್ಕೆ ಜಿಗಿತ: 'ಕೈ'ನಲ್ಲಿ ತಳಮಳ..!

ಉತ್ತರ ಪ್ರದೇಶದಲ್ಲಿ AIMIM ಪಕ್ಷ ಸ್ಪರ್ಧಿಸಲು ಈಗಾಗಲೇ ಉತ್ತರ ಪ್ರದೇಶದ ಕೆಲ ಪಕ್ಷಗಳ ಜೊತೆ ಒಪ್ಪಂದ ನಡೆಸಿದೆ. ಬಾಗಿದಾರ್ ಸಂಕಲ್ಪ ಮೋರ್ಚ ಸೇರಿದಂತೆ 9 ಸ್ಥಳೀಯ ಪಕ್ಷಗಳ ಜೊತೆ ಓವೈಸಿ ಮಾತುಕತೆ ನಡೆಸಿದ್ದಾರೆ.  ಈ ಮೂಲಕ AIMIM ಪಕ್ಷ 100 ಅಭ್ಯರ್ಥಿಗಳನ್ನು ಮುಸ್ಲಿಂ ಪ್ರಾಬಲ್ಯವಿರುವ ಕ್ಷೇತ್ರಗಳಲ್ಲಿ ಕಣಕ್ಕಿಳಿಸಲು ಓವೈಸಿ ಪ್ಲಾನ್ ಮಾಡಿದ್ದಾರೆ.

ಆಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸುವ ಮುಸ್ಲಿಂ ಸಮುದಾಯ ಸೇರಿದಂತೆ ಇನ್ನಿತರ ಮಂದಿಯನ್ನು ಮತಗಳಾಗಿ ಪರಿವರ್ತಿಸಲು AIMIM ಪಕ್ಷ ಮುಂದಾಗಿದೆ. ಇದಕ್ಕಾಗಿ ಸ್ಥಳೀಯ ಪಕ್ಷಗಳ ಜೊತೆ ಮಾತುಕತೆ ನಡೆಸಿದೆ. ಇತ್ತ ಸ್ಥಳೀಯ ಪಂಚಾಯತ್ ಚುನಾವಣೆಯಲ್ಲಿ ಬಿಜೆಪಿಗೆ ತೀವ್ರ ಹೊಡೆತ ನೀಡಿದ ಸ್ಥಳೀಯ ಪಕ್ಷಗಳು AIMIM ಜೊತೆ ಸೇರಿಕೊಳ್ಳಲು ಸಜ್ಜಾಗಿದೆ.

ಓವೈಸಿ ಭದ್ರಕೋಟೆಯಲ್ಲಿ AIMIM ಪಕ್ಷದ ಮುಖಂಡನ ಹತ್ಯೆ; CCTV ದೃಶ್ಯ ಆಧರಿಸಿ ತನಿಖೆ!.

ಉತ್ತರ ಪ್ರದೇಶದ 75 ಜಿಲ್ಲೆಗಳಲ್ಲಿ AIMIM ಪಾರ್ಟಿ ಅಧ್ಯಕ್ಷ್ಯರನ್ನು ನೇಮಿಸಿದೆ. ಈ ಮೂಲಕ ಮುಂಬರುವ ಚುನಾವಣೆಗೆ AIMIM ಪಕ್ಷ ಭರ್ಜರಿಯಾಗಿ ಸಜ್ಜಾಗುತ್ತಿದೆ. ಇತ್ತSBSP ಪಕ್ಷದ ಜೊತೆ  ಬಿಜೆಪಿ  ಮಾತುಕತೆ ನಡೆಸಿದೆ. ಮುಂಬರುವ ಚುನಾವಣೆಯಲ್ಲಿ  ಎಸ್‌ಬಿಎಸ್‌ಪಿ ಪಕ್ಷದ ಬೆಂಬಲ ಗಿಟ್ಟಿಸಿಕೊಳ್ಳುವ ಯತ್ನದಲ್ಲಿದೆ. 

click me!