Guru Raghavendra Bank: ಗುರು ರಾಘವೇಂದ್ರ ಬ್ಯಾಂಕ್‌ ಗ್ರಾಹಕರಿಗೆ ಇಂದಿನಿಂದ ಹಣ ಮರುಪಾವತಿ ಆರಂಭ!

Published : Nov 29, 2021, 07:44 PM IST
Guru Raghavendra Bank: ಗುರು ರಾಘವೇಂದ್ರ ಬ್ಯಾಂಕ್‌ ಗ್ರಾಹಕರಿಗೆ  ಇಂದಿನಿಂದ ಹಣ ಮರುಪಾವತಿ ಆರಂಭ!

ಸಾರಾಂಶ

* ಕ್ಲೇಮ್‌ ಸಲ್ಲಿಸಿದವರಿಗೆ ಗರಿಷ್ಠ .5 ಲಕ್ಷದವರೆಗೆ ಹಣ ಮರುಪಾವತಿ * ಗುರು ರಾಘವೇಂದ್ರ ಬ್ಯಾಂಕ್‌ ಗ್ರಾಹಕರಿಗೆ ಇಂದಿನಿಂದ ಹಣ ಮರುಪಾವತಿ ಆರಂಭ

ನವದೆಹಲಿ(ನ.29): ನವದೆಹಲಿ: ಆರ್ಥಿಕ ನಷ್ಟಕ್ಕೊಳಗಾಗಿ ಆರ್‌ಬಿಐನಿಂದ ನಿರ್ಬಂಧ ಎದುರಿಸುತ್ತಿರುವ ಬೆಂಗಳೂರಿನ ಶ್ರೀಗುರುರಾಘವೇಂದ್ರ ಸಹಕಾರ ಬ್ಯಾಂಕ್‌ (Sri Guru Raghavendra Cooperative Bank) ಸೇರಿದಂತೆ ಕರ್ನಾಟಕ ನಾಲ್ಕು ಸಹಕಾರಿ ಬ್ಯಾಂಕ್‌ಗಳ ಗ್ರಾಹಕರಿಗೆ ಸೋಮವಾರದಿಂದ ಸೀಮಿತ ಪ್ರಮಾಣದ ಹಣ ಮರುಪಾವತಿ ಆರಂಭವಾಗಲಿದೆ. ಶ್ರೀ ಗುರು ರಾಘವೇಂದ್ರ ಸಹಕಾರ ಬ್ಯಾಂಕ್‌, ದಾವಣಗೆರೆಯ ಮಿಲ್ಲತ್‌ ಸಹಕಾರ ಬ್ಯಾಂಕ್‌, ಬಾಗಲಕೋಟೆಯ ದಿ ಮುಧೋಳ್‌ ಸಹಕಾರ ಬ್ಯಾಂಕ್‌, ವಿಜಯನಗರದ ಡೆಕ್ಕನ್‌ ಅರ್ಬನ್‌ ಸಹಕಾರ ಬ್ಯಾಂಕ್‌ಗಳ ಗ್ರಾಹಕರು ಲಕ್ಷಾಂತರ ಗ್ರಾಹಕರು ಈ ಸೌಲಭ್ಯ ಪಡೆಯಲಿದ್ದಾರೆ.

"

ಸಂಕಷ್ಟಕ್ಕೆ ಸಿಕ್ಕಿಹಾಕಿಕೊಂಡು ಆರ್‌ಬಿಐನಿಂದ(Reserve Bank Of India) ಮಾರಟೋರಿಯಂಗೆ (Moratorium) ಒಳಪಟ್ಟಗ್ರಾಹಕರಿಗೆ ಶೀಘ್ರ ತಮ್ಮ ಹಿಂದಕ್ಕೆ ಪಡೆಯಲು ಅನುವು ಮಾಡಿಕೊಡಲು ಕೇಂದ್ರ ಸರ್ಕಾರ, ಠೇವಣಿ ಖಾತರಿ ಮತ್ತು ಸಾಲ ಖಾತರಿ ಕಾರ್ಪೊರೇಷನ್‌ (ತಿದ್ದುಪಡಿ) ಮಸೂದೆ, 2021 ಅಂಗೀಕರಿಸಿತ್ತು. ಅದರ ಅನ್ವಯ ಮಾರಟೋರಿಯಂಗೆ ಒಳಪಟ್ಟ90 ದಿನಗಳ ಬಳಿಕ ಗ್ರಾಹಕರಿಗೆ ಗರಿಷ್ಠ 5 ಲಕ್ಷ ರು.ನಂತೆ ಹಣ ಮರುಪಾವತಿ ಆರಂಭವಾಗುತ್ತದೆ. ಅದರಂತೆ ಜ.29ಕ್ಕೆ ಪಿಎಂಸಿ ಸೇರಿದಂತೆ ದೇಶವ್ಯಾಪಿ ಇರುವ 6 ಬ್ಯಾಂಕ್‌ಗಳ ಮಾರಟೋರಿಯಂ ಅಂತಿಮವಾಗುವ ಕಾರಣ ನ.30ರಿಂದ ಈ ಬ್ಯಾಂಕ್‌ಗಳ ಲಕ್ಷಾಂತರ ಗ್ರಾಹಕರಿಗೆ ಹಣ ಸಿಗಲಿದೆ.

Bank Holiday:ಡಿಸೆಂಬರ್ ನಲ್ಲಿ12 ದಿನ ಬ್ಯಾಂಕ್ ಕ್ಲೋಸ್!

ಈಗಾಗಲೇ ಕ್ಲೇಮು ಸಲ್ಲಿಸಿದವರಿಗೆ ಅವರು ಬ್ಯಾಂಕ್‌ನಲ್ಲಿ ಇಟ್ಟಹಣ ಸಿಗಲಿದೆ. ಹೀಗೆ ಮರಳಿ ಪಡೆಯುವ ಹಣಕ್ಕೆ ಸದ್ಯಕ್ಕೆ 5 ಲಕ್ಷ ರು.ಗಳ ಗರಿಷ್ಠ ಮಿತಿ ಇದೆ. ಒಂದು ವೇಳೆ ಗ್ರಾಹಕರು ತಮ್ಮ ಹಣ ಮರುಪಾವತಿಗೆ ಕ್ಲೇಮ್‌ ಸಲ್ಲಿಸದೇ ಇದ್ದಲ್ಲಿ ತಕ್ಷಣ ಸಲ್ಲಿಸುವಂತೆ ಸೂಚಿಸಲಾಗಿದೆ. ಮೊದಲ ಹಂತದಲ್ಲಿ ಕ್ಲೇಮು ಸಲ್ಲಿಸಿದವರಿಗೆ ಈಗ ಹಣ ಪಾವತಿ ಮಾಡಲಾಗುವುದು. ಎರಡನೇ ಹಂತದಲ್ಲಿ ಕ್ಲೇಮು ಸಲ್ಲಿಸಲು 2021ರ ಡಿ.10 ಕಡೆಯ ದಿನ. ಅವರಿಗೆ ಡಿ.31ರಂದು ಹಣ ಪಾವತಿ ಮಾಡಲಾಗುವುದು.

ಹಣ ಪಡೆಯುವುದು ಹೇಗೆ?

ಗ್ರಾಹಕರು ನಿಗದಿತ ಬ್ಯಾಂಕ್‌ ಶಾಖೆಗಳಿಗೆ ತೆರಳಿ ಹಣ ಮರಳಿ ಪಡೆಯಲು ಅರ್ಜಿ ಸಲ್ಲಿಸಬೇಕು. ಇದಕ್ಕಾಗಿ ತಮ್ಮ ಗುರುತಿನ ಅಧಿಕೃತ ದಾಖಲೆಗಳನ್ನು ನೀಡಬೇಕು. ತಮ್ಮ ಬ್ಯಾಂಕ್‌ ಖಾತೆಯಲ್ಲಿನ ಹಣವನ್ನು ಮರಳಿ ಪಡೆಯಲು ಸಮ್ಮತಿ ಸೂಚಿಸಿ, ಹಣವನ್ನು ಪಡೆಯುವ ಸಲುವಾಗಿ ಬೇರೊಂದು ಬ್ಯಾಂಕ್‌ನ ಖಾತೆ ಸಂಖ್ಯೆ ನೀಡಬೇಕು. ಹೀಗೆ ಎಲ್ಲಾ ದಾಖಲೆಗಳನ್ನು ಸಲ್ಲಿಸಿದ ಬಳಿಕ ಗ್ರಾಹಕರು ಸೂಚಿಸಿ ಬೇರೆ ಬ್ಯಾಂಕ್‌ನ ಖಾತೆಗೆ ಹಣ ಜಮೆ ಮಾಡಲಾಗುವುದು

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರೈತರಿಗಾಗಿ ಮಸೂದೆ ಮಂಡಿಸಿದ ಸಂಸದ ಡಾ.ಕೆ.ಸುಧಾಕರ್: ಹೈನುಗಾರರು-ಹೂವು ಬೆಳೆಗಾರರಿಗೆ ದೊಡ್ಡ ಆಶಾಕಿರಣ
ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!