Avalanche in Arunachal Pradesh : ಎಲ್ಲಾ ಏಳೂ ಸೈನಿಕರ ಸಾವು ಖಚಿತಪಡಿಸಿದ ಸೇನೆ!

By Suvarna NewsFirst Published Feb 8, 2022, 6:05 PM IST
Highlights

ಹಿಮಪಾತಕ್ಕೆ ಸಿಲುಕಿದ್ದ ಭಾರತೀಯ ಸೈನಿಕರು
ಅರುಣಾಚಲ ಪ್ರದೇಶ ಕೆಮೆಂಗ್ ಸೆಕ್ಟರ್ ನಲ್ಲಿ ಭಾನುವಾರ ನಡೆದಿದ್ದ ಘಟನೆ
ಎಲ್ಲಾ ಏಳೂ ಸೈನಿಕರು ಸಾವನ್ನಪ್ಪಿದ್ದಾರೆ ಎಂದ ಭಾರತೀಯ ಸೇನೆ

ಇಟಾನಗರ (ಫೆ. 8): ದುರಾದೃಷ್ಟದ ಘಟನೆಯಲ್ಲಿ ಅರುಣಾಚಲ ಪ್ರದೇಶದ  ಕೆಮೆಂಗ್ ಸೆಕ್ಟರ್ ನಲ್ಲಿ(Kameng sector) ಭಾನುವಾರ ಸಂಭವಿಸಿದ ಹಿಮಪಾತದಲ್ಲಿ ನಾಪತ್ತೆಯಾಗಿದ್ದ ಏಳು ಸೈನಿಕರು (Seven Indian Army personnel)ಸಾವಿಗೀಡಾಗಿದ್ದಾರೆ ಎಂದು ಭಾರತೀಯ ಸೇನೆ (Indian Army) ಖಚಿತಪಡಿಸಿದೆ. ಗಸ್ತು ತಂಡದ ಭಾಗವಾಗಿದ್ದ ಈ ಸೈನಿಕರ ಶವವನ್ನು ಹಿಮಪಾತದ ಪ್ರದೇಶದಿಂದ (avalanche site) ಹೊರತೆಗೆಯಲಾಗಿದೆ ಎಂದು ರಕ್ಷಣಾ ಸಚಿವಾಲಯದ (ತೇಜ್‌ಪುರ) ಸಾರ್ವಜನಿಕ ಸಂಪರ್ಕ ಅಧಿಕಾರಿ ಲೆಫ್ಟಿನೆಂಟ್ ಕರ್ನಲ್ ಹರ್ಷವರ್ಧನ್ ಪಾಂಡೆ (Lieutenant Colonel Harsh Wardhan Pande)ತಿಳಿಸಿದ್ದಾರೆ.

ಚೀನಾ ಗಡಿಯ ಅರುಣಾಚಲ ಪ್ರದೇಶದ (Arunachal Pradesh)  ಕಮೆಂಗ್‌ ವಲಯದಲ್ಲಿ ಪಹರೆ ನಡೆಸುತ್ತಿದ್ದ 7 ಸೇನಾ ಯೋಧರ ಮೇಲೆ ಭಾರೀ ಹಿಮ ಕುಸಿತ ಸಂಭವಿಸಿ ಅವರು ನಾಪತ್ತೆಯಾಗಿರುವ ಘಟನೆ ಭಾನುವಾರ ನಡೆದಿತ್ತು. ಸೇನಾ ಸಿಬ್ಬಂದಿ ಗಸ್ತು ಪಹರೆ ನಡೆಸುತ್ತಿದ್ದ ವೇಳೆ ಹಿಮಪಾತ ಸಂಭವಿಸಿತ್ತು ಎಂದು ಹೇಳಲಾಗಿದೆ. ರಕ್ಷಣಾ ಕಾರ್ಯಾಚರಣೆಯಲ್ಲಿ ಸಹಾಯ ಮಾಡಲು ವಿಶೇಷ ತಂಡಗಳನ್ನು ಹಿಮಪಾತದ ಪ್ರದೇಶಕ್ಕೆ ಏರ್ ಲಿಫ್ಟ್ (Air List) ಮಾಡಲಾಗಿತ್ತು ಎಂದು ಹರ್ಷವರ್ಧನ್ ಪಾಂಡೆ ತಿಳಿಸಿದ್ದಾರೆ. ಈ ಪ್ರದೇಶವು ಕಳೆದ ಕೆಲವು ದಿನಗಳಿಂದ ಭಾರೀ ಹಿಮಪಾತದೊಂದಿಗೆ ಪ್ರತಿಕೂಲ ಹವಾಮಾನವನ್ನು ಕಂಡಿದೆ. ಯೋಧರು ನಾಪತ್ತೆಯಾದ ನಂತರ ಸೇನೆಯು ವಿಶೇಷ ತಂಡಗಳನ್ನು ಬಳಸಿಕೊಂಡು ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ಭಾನುವಾರ ಆರಂಭಿಸಿತ್ತು. ವಿಷಯದ ಗಂಭೀರತೆಯನ್ನು ಪರಿಗಣಿಸಿ ಸೇನೆಯು SAR ತಂಡಗಳನ್ನು ಹಿಮಕುಸಿತ ಸ್ಥಳಕ್ಕೆ ರವಾನಿಸಿತ್ತು.

ಪಿಟಿಐ ವರದಿಯ ಪ್ರಕಾರ, ಅರುಣಾಚಲ ಪ್ರದೇಶದ ಹಲವಾರು ಎತ್ತರದ ಪ್ರದೇಶಗಳು ಈ ವರ್ಷ ಭಾರೀ ಹಿಮಪಾತವನ್ನು ಪಡೆದಿವೆ, ಇಟಾನಗರ ಬಳಿಯ ದರಿಯಾ ಹಿಲ್ (Daria Hill ) ಮತ್ತು ಗಡಿನಾಡಿನ ಪಶ್ಚಿಮ ಕಮೆಂಗ್ ಜಿಲ್ಲೆಯ ರೂಪಾ ಪಟ್ಟಣವೂ (Rupa town) ಸೇರಿದಂತೆ ಹಲವೆಡೆ ಹಿಮಪಾತದ ಪ್ರಕರಣಗಳು ನಡೆದಿವೆ. ಗಡಿನಾಡಿನ ಹಲವಾರು ಎತ್ತರದ ಪ್ರದೇಶಗಳು ಈ ತಿಂಗಳು ಭಾರೀ ಹಿಮಪಾತಕ್ಕೆ ಸಾಕ್ಷಿಯಾಗುತ್ತಿವೆ. ಇಟಾನಗರ ಬಳಿಯ ಡೇರಿಯಾ ಬೆಟ್ಟವು 34 ವರ್ಷಗಳ ನಂತರ ಹಿಮಪಾತವನ್ನು ಕಂಡಿದೆ ಮತ್ತು ಅರುಣಾಚಲ ಪ್ರದೇಶದ ಪಶ್ಚಿಮ ಕಮೆಂಗ್ ಜಿಲ್ಲೆಯ ರೂಪಾ ಪಟ್ಟಣವು ಎರಡು ದಶಕಗಳ ನಂತರ ಹಿಮಪಾತಕ್ಕೆ ಸಾಕ್ಷಿಯಾಗಿದೆ.
 

Seven Army personnel who were struck by avalanche in high altitude area of Kameng Sector in Arunachal Pradesh on 6 Feb have been confirmed dead, their bodies retrieved from the avalanche site: Indian Army pic.twitter.com/2SZMML8GzC

— ANI (@ANI)


"14,500 ಅಡಿ ಎತ್ತರದಲ್ಲಿರುವ ಈ ಪ್ರದೇಶವು ಕಳೆದ ಕೆಲವು ದಿನಗಳಿಂದ ಭಾರೀ ಹಿಮಪಾತದೊಂದಿಗೆ ಪ್ರತಿಕೂಲ ಹವಾಮಾನಕ್ಕೆ ಸಾಕ್ಷಿಯಾಗಿದೆ. ಪ್ರಸ್ತುತ ಸೈನಿಕರ ಮೃತದೇಹಗಳನ್ನು ಮುಂದಿನ ಕೆಲಸಗಳಿಗಾಗಿ ಹಿಮಪಾತದ ಸ್ಥಳದಿಂದ ಹತ್ತಿರದ ಸೇನಾ ವೈದ್ಯಕೀಯ ಸೌಲಭ್ಯಕ್ಕೆ ವರ್ಗಾಯಿಸಲಾಗುತ್ತಿದೆ." ಸೇನೆ (Indian Army) ಹೇಳಿದೆ. ಅರುಣಾಚಲ ಪ್ರದೇಶದ ಎತ್ತರದ ಪ್ರದೇಶಗಳಲ್ಲಿ ಸೈನಿಕರು ಎಂದಿನಂತೆ ಗಸ್ತು ತಿರುಗುತ್ತಾರೆ ಆದರೆ, ಪ್ರತಿಕೂಲ ಹವಾಮಾನ ಪರಿಸ್ಥಿತಿಗಳಲ್ಲಿ ಹಿಮಪಾತವೇ ಇವರ ಪ್ರಾಣಕ್ಕೆ ಹೆಚ್ಚಿನ ಬೆದರಿಕೆ ಒಡ್ಡುತ್ತದೆ.

Avalanche In Arunachal Pradesh: ಹಿಮಕುಸಿತದಲ್ಲಿ ಸಿಲುಕಿ 7 ಯೋಧರು ನಾಪತ್ತೆ
ಅರುಣಾಚಲ ಪ್ರದೇಶವನ್ನು ಸಾಮಾನ್ಯವಾಗಿ ಪಶ್ಚಿಮದಲ್ಲಿ ಕಮೆಂಗ್ ಪ್ರದೇಶ ಮತ್ತು ಅರುಣಾಚಲ ಪ್ರದೇಶದ ಉಳಿದ ಭಾಗಗಳಾಗಿ ಭಾರತೀಯ ಸೇನೆ ವಿಭಜನೆ ಮಾಡುತ್ತದೆ. ಸೇನೆಯ ಪೂರ್ವ ಕಮಾಂಡ್ ಸಿಕ್ಕಿಂ ಮತ್ತು ಅರುಣಾಚಲ ಪ್ರದೇಶ ಸೇರಿದಂತೆ 1,346-ಕಿಮೀ ಉದ್ದದ ನೈಜ ನಿಯಂತ್ರಣ ರೇಖೆಯನ್ನು (LAC) ನಿಭಾಯಿಸುತ್ತದೆ. ಈ ಕಮಾಂಡ್ ಮೂರು ಕಾರ್ಪ್ಸ್ ಅನ್ನು ಹೊಂದಿದ್ದು 33 ಕಾರ್ಪ್ಸ್ ಸಿಕ್ಕಿಂ, 4 ಕಾರ್ಪ್ಸ್ ಕೆಮಾಂಗ್ ಸೆಕ್ಟರ್ ಹಾಗೂ 3 ಕಾರ್ಪ್ಸ್ ಅರುಣಾಚಲ ಪ್ರದೇಶದಲ್ಲಿರುವ ಎಲ್ ಎಸಿಯ ರಕ್ಷಣೆಯನ್ನು ಮಾಡುತ್ತದೆ.

click me!