ಶ್ರೀನಗರ ಸೇರಿ ಕಾಶ್ಮೀರ ಕಣಿವೆಯ ಎಲ್ಲಾ 15 ರೈಲು ನಿಲ್ದಾಣದಲ್ಲಿ Wi-Fi ಸೇವೆ!

By Suvarna News  |  First Published Jun 20, 2021, 9:12 PM IST
  • ಕಣಿವೆ ರಾಜ್ಯದ ಎಲ್ಲಾ ರೈಲು ನಿಲ್ದಾಣದಲ್ಲಿ Wi-Fi
  • ಭಾರತದ 6,021 ರೈಲು ನಿಲ್ದಾಣಗಲ್ಲಿ Wi-Fi ಸೇವೆ
  • ಡಿಜಿಟಲ್ ಇಂಡಿಯಾ ಆಂದೋಲನಕ್ಕೆ ಇದೊಂದು ನಿರ್ಣಾಯಕ ಹೆಜ್ಜೆ 

ಜಮ್ಮು ಮತ್ತು ಕಾಶ್ಮೀರ(ಜೂ.20): ಕೇಂದ್ರ ಸರ್ಕಾರದ ಡಿಜಿಟಲ್ ಅಭಿಯಾನಕ್ಕೆ ಮತ್ತಷ್ಟು ವೇಗ ಸಿಕ್ಕಿದೆ. ರೈಲು ನಿಲ್ದಾಣಗಳಲ್ಲಿ ವೈಫೈ ಸೇವೆಯನ್ನು ಮುಂದುವರಿಸಲಾಗಿದೆ. ಇದೀಗ ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದ 15 ರೈಲು ನಿಲ್ದಾಣಗಳಲ್ಲಿ ವೈಫೈ ಸೇವೆ ನೀಡಲಾಗಿದೆ. ಈ ಮೂಲಕ ಇದೀಗ ರೈಲು ನಿಲ್ದಾಣದಲ್ಲಿನ ವೈಫೈ ಸಂಖ್ಯೆ 6,021ಕ್ಕೆ ಏರಿಕೆಯಾಗಿದೆ.

ಕೋಲಾರದಿಂದ 250 ಟನ್ ಮಾವು ಹೊತ್ತು ದೆಹಲಿಗೆ ತೆರಳಿದ ಕರ್ನಾಟಕದ ಮೊದಲ ಕಿಸಾನ್ ರೈಲು!.

Tap to resize

Latest Videos

ರೈಲ್ ವೈರ್ ಬ್ರಾಂಡ್ ಹೆಸರಿನಲ್ಲಿ ಒದಗಿಸಲಾಗಿರುವ ಸಾರ್ವಜನಿಕ ವೈ-ಫೈ ಈಗ ಕೇಂದ್ರಾಡಳಿತ ಪ್ರದೇಶವಾದ ಕಾಶ್ಮೀರದ ನಾಲ್ಕು ಜಿಲ್ಲಾ ಕೇಂದ್ರಗಳಾದ ಶ್ರೀನಗರ, ಬುಡ್ಗಾಂ, ಬನಿಹಾಲ್ ಮತ್ತು ಕ್ವಾಝಿಗುಂಡ್ ಗಳಲ್ಲಿರುವ 15 ನಿಲ್ದಾಣಗಳಾದ ಬಾರಾಮುಲ್ಲಾ, ಹಮ್ರೇ, ಪಠಾಣ್, ಮಾಝೋಮ್, ಬುಡ್ಗಾಂ, ಶ್ರೀನಗರ, ಪ್ಯಾಂಪೋರ್, ಕಾಕಪೋರಾ,ಅವಂತಿಪುರ, ಪಂಝಗಾಂ, ಬಿಜ್ ಬೆಹ್ರಾ, ಅನಂತನಾಗ್, ಸಾದುರಾ, ಕ್ವಾಝಿಗುಂಡ್, ಬನಿಹಾಲ್ ಲಭ್ಯವಿದೆ.

ಜಮ್ಮು ಕೇಂದ್ರಾಡಳಿತ ಪ್ರದೇಶದ 15 ನಿಲ್ದಾಣಗಳಲ್ಲಿ ವೈ-ಫೈ ಈಗಾಗಲೇ ಲಭ್ಯವಿದೆ.  ಕಥುವಾ, ಬುಧಿ, ಚಾನ್ ಅರೋರಿನ್, ಹಿರಾ ನಗರ್, ಘಾಗ್ವಾಲ್, ಸಂಬಾ, ವಿಜಯಪುರ, ಬಾರಿ ಬ್ರಹ್ಮನ್, ಜಮ್ಮು ತಾವಿ, ಬಜಾಲ್ತ, ಸಂಗಾರ್, ಮನ್ವಾಲ್, ರಾಂ ನಗರ್ ಈಗಾಗಲೇ ವೈಫೈ ಸೇವೆ ನೀಡಲಾಗಿದೆ. 

ತನ್ನ ಪ್ರಾಣ ಲೆಕ್ಕಿಸದೆ ಮಗುವನ್ನು ಕಾಪಾಡಿದ್ದ ಮಯೂರ್ ಶೇಲ್ಕೆಗೆ 50 ಸಾವಿರ ಬಹುಮಾನ..!.

ಸಾರ್ವಜನಿಕ ವೈ-ಫೈ ಯನ್ನು ಎಲ್ಲಾ ರೈಲು ನಿಲ್ದಾಣಗಳಲ್ಲಿ ಒದಗಿಸುವ ಜವಾಬ್ದಾರಿಯನ್ನು ರೈಲ್ವೇ ಸಚಿವಾಲಯವು ರೈಲ್ ಟೆಲ್ ಗೆ ನೀಡಿತ್ತು. ರೈಲ್ವೇ ಪ್ಲಾಟ್ ಫಾರಂಗಳನ್ನು ಡಿಜಿಟಲ್ ಸೇರ್ಪಡೆಯ ಪ್ಲಾಟ್ ಫಾರಂಗಳಾಗಿ ರೂಪಿಸುವುದು ಇದರ ಹಿಂದಿನ ಉದ್ದೇಶ. ಇಂದು ವೈ-ಫೈ ಜಾಲವು ದೇಶಾದ್ಯಂತ 6000 ಕ್ಕೂ ಅಧಿಕ ರೈಲು ನಿಲ್ದಾಣಗಳಲ್ಲಿ ಹರಡಿಕೊಂಡಿದೆ ಮತ್ತು ಇದು ಜಗತ್ತಿನಲ್ಲಿಯೇ ಅತ್ಯಂತ ದೊಡ್ಡ  ವೈ-ಫೈ ಜಾಲವಾಗಿದೆ.

ಬಳಕೆದಾರರಿಗೆ ಉತ್ತಮ ಅಂತರ್ಜಾಲ ಅನುಭವ ನೀಡುವಂತೆ ವಿನ್ಯಾಸಗೊಳಿಸಲಾಗಿರುವ ಈ ವೈ-ಫೈ ಸ್ಮಾರ್ಟ್ ಫೋನ್ ಹೊಂದಿರುವ ಮತ್ತು ಕೆ.ವೈ.ಸಿ. ಶರತ್ತುಗಳನ್ನು ಪೂರೈಸಿರುವ ಕಾರ್ಯನಿರತವಾಗಿರುವಂತಹ ಮೊಬೈಲ್ ಸಂಪರ್ಕವನ್ನು ಹೊಂದಿರುವ ಯಾವುದೇ ಬಳಕೆದಾರರಿಗೆ ರೈಲ್ವೇ ನಿಲ್ದಾಣಗಳಲ್ಲಿ ಲಭ್ಯವಾಗುತ್ತದೆ.

ವೈ-ಫೈ ಲಭ್ಯತೆ ಸಮುದಾಯಗಳನ್ನು ಬೆಸೆಯುವುದು ಮಾತ್ರವಲ್ಲ ಅದು ಅನ್ವೇಷಣೆ ಮತ್ತು ಬೆಳವಣಿಗೆಗೆ ಅವಕಾಶಗಳ ಜಗತ್ತನ್ನು ತೆರೆಯುತ್ತದೆ. ಈ ವರ್ಷದ ವೈ-ಫೈ ದಿನ ಆಚರಣೆಯು ಡಿಜಿಟಲ್ ಕಂದಕವನ್ನು ಬೆಸೆಯಲು ಕೈಗೆಟಕುವ ದರದಲ್ಲಿ ವೈ-ಫೈ ಲಭ್ಯತೆಯನ್ನು ತ್ವರಿತಗೊಳಿಸುವ ಅಗತ್ಯವನ್ನು ಒತ್ತಿ ಹೇಳುತ್ತದೆ. ಭಾರತವು ನಗರ ಮತ್ತು ಗ್ರಾಮೀಣ ಪ್ರದೇಶಗಳ ನಡುವೆ ಗಮನಾರ್ಹ ಡಿಜಿಟಲ್ ಕಂದಕವನ್ನು ಹೊಂದಿದೆ. ನಿಲ್ದಾಣಗಳಲ್ಲಿ ರೈಲ್ ವೈರ್ ವೈ-ಫೈ ಸೌಲಭ್ಯವು ಗ್ರಾಮಭಾರತದಲ್ಲಿರುವ ದುರ್ಬಲ ಸಂಪರ್ಕ ಜಾಲ ಹೊಂದಿರುವ ಸಂಪರ್ಕರಹಿತ ಸಾರ್ವಜನಿಕರಿಗೆ 5000 ಕ್ಕೂ ಅಧಿಕ ನಿಲ್ದಾಣಗಳ ಮೂಲಕ ಸಂಪರ್ಕ ಒದಗಿಸಲು ಸಹಾಯ ಮಾಡುತ್ತದೆ.

ಭಾರತೀಯ ರೈಲ್ವೇಯು ದೇಶಾದ್ಯಂತ ರೈಲು ನಿಲ್ದಾಣಗಳಲ್ಲಿ ಸಾರ್ವಜನಿಕ ವೈ-ಫೈ ಒದಗಿಸುವ ಮೂಲಕ ರೈಲ್ವೇ ನಿಲ್ದಾಣಗಳನ್ನು ಡಿಜಿಟಲ್ ತಾಣವಾಗಿ ಪರಿವರ್ತಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದೆ. ಮತ್ತು 6021 ನಿಲ್ದಾಣಗಳು ರೈಲ್ ಟೆಲ್ ವೈ ಫೈ ಜಾಲದಲ್ಲಿವೆ.

click me!