250 ಜನರಿಗೆ ಕಚ್ಚಿದ ಮಂಗಕ್ಕೆ ಜೀವಾವಧಿ ಶಿಕ್ಷೆ!

By Suvarna NewsFirst Published Jun 17, 2020, 3:05 PM IST
Highlights

250 ಜನರಿಗೆ ಕಚ್ಚಿದ ಮಂಗಕ್ಕೆ ಜೀವಾವಧಿ ಶಿಕ್ಷೆ!|  ಉತ್ತರ ಪ್ರದೇಶದ ಕಾನ್ಪುರದ ಪ್ರಾಣಿ ಸಂಗ್ರಹಾಲಯದಲ್ಲಿ ಘಟನೆ| 

ಲಕ್ನೋ(ಜೂ.17): ಮಂಗಕ್ಕೆ ಜೀವಾವಧಿ ಶಿಕ್ಷೆ ವಿಧಿಸಿದ್ದನ್ನು ಎಲ್ಲಿಯಾದರೂ ಕೇಳಿದ್ದೀರಾ? ಉತ್ತರ ಪ್ರದೇಶದ ಕಾನ್ಪುರದ ಪ್ರಾಣಿ ಸಂಗ್ರಹಾಲಯದಲ್ಲಿ ಇಂಥದ್ದೊಂದು ಘಟನೆ ನಡೆದಿದೆ.

ಅಷ್ಟಕ್ಕೂ ಆ ಮಂಗ ಮಾಡಿದ ತಪ್ಪೇನು ಗೊತ್ತಾ? ಮಿರ್ಜಾಪುರ ಜಿಲ್ಲೆಯ ಮೂಲದ ಕಲುವಾ ಹೆಸರಿನ ಈ ಮಂಗ 250ಕ್ಕೂ ಹೆಚ್ಚು ಜನರಿಗೆ ಕಚ್ಚಿ ಗಾಯಗೊಳಿಸಿದೆ. ಈ ಮಂಗನ ಕಡಿತದಿಂದ ಒಬ್ಬ ವ್ಯಕ್ತಿ ಸಾವಿಗೀಡಾಗಿದ್ದಾನೆ.

ವೈರಸ್‌ ಟೆಸ್ಟ್‌ ಸ್ಯಾಂಪಲ್ಸ್‌ ಹೊತ್ತೊಯ್ದ ಮಂಗಗಳು!

ಸ್ಥಳೀಯ ಮಾಟಗಾರನೊಬ್ಬ ಮಂಗಕ್ಕೆ ಮದ್ಯವನ್ನು ಕುಡಿಸುತ್ತಿದ್ದ. ಕೆಲವು ದಿನ ಬಳಿಕ ಆತ ಮದ್ಯ ನೀಡುವುದನ್ನು ನಿಲ್ಲಿಸಿದ್ದರಿಂದ ಮಂಗ ಆಕ್ರಮಣಕಾರಿಯಾಗಿ ವರ್ತಿಸುತ್ತಿತ್ತು. ಕೊನೆಗೆ ಅದನ್ನು ಹಿಡಿದು ಒಂದು ತಿಂಗಳು ಬೋನಿನಲ್ಲಿ ಇಟ್ಟರೂ ವರ್ತನೆಯಲ್ಲಿ ಬದಲಾವಣೆ ಆಗಿರಲಿಲ್ಲ.

ಹೀಗಾಗಿ ಜೀವನ ಪರ್ಯಂತ ಮಂಗವನ್ನು ಬೋನಿನಲ್ಲಿ ಇಡಲು ತೀರ್ಮಾನಿಸಲಾಗಿದೆ ಎಂದು ಝೂನ ಅಧಿಕಾರಿಗಳು ತಿಳಿಸಿದ್ದಾರೆ.

click me!