'ಮಹಾಶಯರು 9 ಗಂಟೆವರೆಗೆ ನಮ್ಮೊಂದಿಗೇ ಇದ್ರು ಬಳಿಕ ನಾಪತ್ತೆ, ಮೊಬೈಲೂ ಸ್ವಿಚ್ ಆಫ್'!

By Web Desk  |  First Published Nov 23, 2019, 11:25 AM IST

ಮಹಾರಾಷ್ಟ್ರ ರಾಜಕೀಯದಲ್ಲಿ ಕ್ಷಿಪ್ರಕ್ರಾಂತಿ| ರಾತ್ರೋ ರಾತ್ರಿ ಬಿಜೆಪಿ ಜೊತೆ ಕೈ ಮಿಲಾಯಿಸಿದ ಅಜಿತ್ ಪವಾರ್| ದಿನ ಬೆಳಗಾಗುತ್ತಿದ್ದಂತೆಯೇ ಫಡ್ನವೀಸ್ ಸಿಎಂ| ರಾಜಕೀಯ ತಿರುವಿನ ಬೆನ್ನಲ್ಲೇ ಸಂಜಯ್ ರಾವತ್ ಪತ್ರಿಕಾ ಗೋಷ್ಠಿ


ಮುಂಬೈ[ನ.23]: ಮಹಾರಾಷ್ಟ್ರದ ರಾಜಕೀಯದಲ್ಲಿ ರಾತ್ರೋ ರಾತ್ರಿ ಮಹತ್ತರ ಬದಲಾವಣೆಯಾಗಿದ್ದು, ಬಿಜೆಪಿ ಹಾಗೂ ಎನ್‌ಸಿಪಿ ಒಂದಾಗಿ ಸರ್ಕಾರ ರಚಿಸಿದೆ. ಇತ್ತ ಸರ್ಕಾರ ರಚಿಸುವ ಭರವಸೆಯಲ್ಲಿದ್ದ ಕಾಂಗ್ರೆಸ್ ಹಾಗೂ ಶಿವಸೇನೆ ಇದೊಂದು ಬಹುದೊಡ್ಡ ವಂಚನೆ ಎಂದು ಬಣ್ಣಿಸಿದೆ. 

.ರಾಜಕೀಯದಲ್ಲಾದ ಈ ರೋಚಕ ಬೆಳವಣಿಗೆ ಬೆನ್ನಲ್ಲೇ ಸುದ್ದಿಗೋಷ್ಠಿ ನಡೆಸಿದ ಶಿವಸೇನೆ ನಾಯಕ ಸಂಜಯ್ ರಾವತ್, NCP ನಾಯಕ ಅಜಿತ್ ಪವಾರ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. 'ಸಜಿತ್ ನಮ್ಮ ಬೆನ್ನ ಹಿಂದೆ ದಾಳಿ ನಡೆಸಿ ಚಾಕು ಚುಚ್ಚಿದ್ದಾರೆ. ಮಹಾಶಯರು ರಾತ್ರಿ 9 ಗಂಟೆಯವರೆಗೆ ನಮ್ಮೊಂದಿಗೇ ಕುಳಿತಿದ್ದರು. ಆಗಲೇ ಅವರ ವರ್ತನೆ ಬದಲಾದಂತೆ ನಮಗೆ ಭಾಸವಾಗಿತ್ತು. ಮುಖ ನೋಡಿ ಮಾತನಾಡುತ್ತಿರಲಿಲ್ಲ. ಹೀಗಿರುವಾಗ ಇದ್ದಕ್ಕಿದ್ದಂತೆ ನಾಪತ್ತೆಯಾಗಿ ಬಿಟ್ಟರು. ಅವರ ಫೋನ್ ಕೂಡಾ ಸ್ವಿಚ್ ಆಫ್ ಆಯ್ತು' ಎಂದಿದ್ದಾರೆ.

Tap to resize

Latest Videos

undefined

"

'ಮಹಾ' ರಾಜಕೀಯದಲ್ಲಿ ರೋಚಕ ತಿರುವು: 'ಸೇನೆ'ಗೆ ಶಾಕ್, ಫಡ್ನವೀಸ್ ಮತ್ತೆ ಸಿಎಂ!

ಅಲ್ಲದೇ ’ಬಿಜೆಪಿ ರಾಜಭವನವನ್ನು ದುರುಪಯೋಗಪಡಿಸಿಕೊಂಡಿದೆ. ರಾತ್ರಿ ಕತ್ತಲಿನಲ್ಲಿ ಸರ್ಕಾರ ರಚಿಸಿರುವುದು ಮಹಾ ಪಾಪ. ಅಜಿತ್ ಪವಾರ್ ಮಹಾರಾಽ್ಟ್ರದ ಜನತೆ ಹಾಗೂ ಛತ್ರಪತಿ ಶಿವಾಜಿಯ ಮೌಲ್ಯಗಳನ್ನು ಕಡೆಗಣಿಸಿದ್ದಾರೆ' ಎಂದು ದೂಷಿಸಿದ್ದಾರೆ.

ಶರತ್ ಪವಾಋ್ ಕುರಿತಾಗಿ ಮಾತನಾಡಿರುವ ಸಂಜಯ್ ರಾವತ್, ಇಡೀ ಪ್ರಕರಣ ಸಂಬಂಧ NCP ನಾಯಕ ಶರದ್ ಪವಾರ್ ಜೊತೆ ಸಂಪರ್ಕ ನಡೆಸಿ ಮಾತನಾಡುತ್ತಿದ್ದೇವೆ. ಈಗಾಗಲೇ ಎರಡು ಬಾರಿ ಉದ್ಧವ್ ಠಾಕ್ರೆ ಹಾಗೂ ಶರದ್ ಪವಾರ್ ಮಾತುಕತೆ ನಡೆಸಿದ್ದಾರೆ. ಇದು ಇಡೀ ಎನ್‌ಸಿಪಿ ಪಕ್ಷದ ನಿರ್ಧಾರವಲ್ಲ, ಇದು ಅಜಿತ್ ಪವಾರ್ ವೈಯುಕ್ತಿಕ ನಿರ್ಧಾರ ಎಂದು ಶರದ್ ಪವಾರ್ ತಿಳಿಸಿದ್ದಾರೆ' ಎಂದು ತಿಳಿಸಿದ್ದಾರೆ.

ದೇವೇಂದ್ರ ಫಡ್ನವೀಸ್ ಇಂದು ಶನಿವಾರ ಬೆಳಗ್ಗೆ ಮಹಾರಾಷ್ಟ್ರದ ಸಿಎಂ ಹಾಗೂ ಅಜಿತ್ ಪವಾರ್ ಡಿಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ ಎಂಬುವುದು ಉಲ್ಲೇಖನೀಯ

ಮಹಾರಾಷ್ಟ್ರ ರಾಜಕೀಯದಲ್ಲಿ ಏನೇನಾಯ್ತು? ಒಂದೇ ಕ್ಲಿಕ್‌ನಲ್ಲಿ ಹಲವು ಸುದ್ದಿಗಳು

click me!