ಎಲ್ಲಾ ಬಾರ್ ಲೈಸನ್ಸ್ ರದ್ದುಗೊಳಿಸಿದ ರಾಜ್ಯ ಸರ್ಕಾರ!| ತಕ್ಷಣದಿಂದಲೇ ಜಾರಿಗೆ ಬರುವಂತೆ ಜಗನ್ ಆದೇಶ| ಲಾಟರಿ ಮೂಲಕ ಬಾರ್ ಲೈಸೆನ್ಸ್: 10 ಲಕ್ಷ ಶುಲ್ಕ
ಅಮರಾವತಿ[ನ.23]: ಮುಂದಿನ ಎರಡು ವರ್ಷಗಳಲ್ಲಿ ಬಾರ್‌ಗಳ ಸ್ಥಾಪನೆಗಾಗಿ ನೂತನ ಬಾರ್ ನಿಯಮಾವಳಿ ಜಾರಿಗೆ ತರಲಾಗುತ್ತದೆ ಎಂಬ ಘೋಷಣೆ ಬೆನ್ನಲ್ಲೇ, ಆಂಧ್ರಪ್ರದೇಶದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಲ್ಲ ಬಾರ್‌ಗಳ ಪರವಾನಗಿಯನ್ನು ತತ್‌ಕ್ಷಣವೇ ಜಾರಿಗೆ ಬರುವಂತೆ ಮುಖ್ಯಮಂತ್ರಿ ವೈ.ಎಸ್. ಜಗನ್ ಮೋಹನ್ ರೆಡ್ಡಿ ನೇತೃತ್ವದ ಸರ್ಕಾರ ಶುಕ್ರವಾರ ರದ್ದುಗೊಳಿಸಿದೆ. ಜಗನ್ ಸರ್ಕಾರದ ಈ ಕ್ರಮದಿಂದ ಸರ್ಕಾರಿ ಸ್ವಾಮ್ಯದ ರಾಜ್ಯ ಪಾನೀಯ ನಿಗಮದಡಿ ನಿರ್ವಹಿಸುತ್ತಿರುವ 3500 ಬಾರ್ ಅಂಡ್ ರೆಸ್ಟೋರೆಂಟ್‌ಗಳು ಸಂಕಷ್ಟಕ್ಕೀಡಾಗಿವೆ.
ಆಂಧ್ರ ಚುನಾವಣೆ: ಗೆದ್ದ ಜಗನ್, ಪ್ರಶಾಂತ್ ಕಿಶೋರ್‌ಗೆ 37 ಕೋಟಿ ರೂ ಶುಲ್ಕ!
undefined
ನೂತನ ಬಾರ್‌ಗಳ ಸ್ಥಾಪನೆಗಾಗಿ ಮುಂದಿನ ತಿಂಗಳಿಂದಲೇ ಲಾಟರಿ ಮೂಲಕ ಟೆಂಡರ್ ಆಹ್ವಾನಿಸಲು ಸರ್ಕಾರ ನಿರ್ಧರಿಸಿದ್ದು, ಬಾರ್‌ಗಳ ಸ್ಥಾಪನೆ ಲೈಸನ್ಸ್‌ಗೆ 10 ಲಕ್ಷ ರು. ಶುಲ್ಕ ನಿಗದಿಪಡಿಸಲಾಗಿದೆ. ಅಲ್ಲದೆ, 3 ಸ್ಟಾರ್ ಹೋಟೆಲ್‌ಗಳು ಮತ್ತು ಮೈಕ್ರೋ ಬೀವರೇಜ್‌ಗಳ ಸ್ಥಾಪನೆಗೆ 1.5 ಕೋಟಿ ರು. ಶುಲ್ಕ ನಿಗದಿಪಡಿಸಲಾಗಿದೆ. ಜೊತೆಗೆ, 2020ರ ಜನವರಿ 1ರಿಂದ ಬೆಳಗ್ಗೆ 11 ಗಂಟೆಯಿಂದ ರಾತ್ರಿ 10 ಗಂಟೆವರೆಗೂ ಮಾತ್ರವೇ ಬಾರ್‌ಗಳು ತೆರೆದಿರಬೇಕಾಗುತ್ತದೆ.
ಆಂಧ್ರಪ್ರದೇಶ ಮುಖ್ಯಮಂತ್ರಿಯೂ ಆಗಿರುವ ವೈಎಸ್‌ಆರ್ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಜಗನ್ ಮೋಹನ್ ರೆಡ್ಡಿ ಅವರು, ಈಗಾಗಲೇ ಬಾರ್‌ಗಳ ಸಂಖ್ಯೆಯನ್ನು ಶೇ.40ರಷ್ಟುಇಳಿಸುವುದಾಗಿ ಘೋಷಣೆ ಮಾಡಿದ್ದಾರೆ. ಈ ಪ್ರಕಾರ, ರಾಜ್ಯ ಸರ್ಕಾರವು ನೂತನ 479 ಬಾರ್‌ಗಳಿಗೆ ಮಾತ್ರವೇ ಪರವಾನಗಿ ನೀಡಲಿದೆ. ಇದಲ್ಲದೆ, ರಾಜ್ಯದಲ್ಲಿನ 38 ತ್ರಿಸ್ಟಾರ್ ಹೋಟೆಲ್‌ಗಳು ಮತ್ತು ನಾಲ್ಕು ಮೈಕ್ರೋ ಬೀವರೇಜಸ್ ಮಳಿಗೆಗಳಲ್ಲಿ ಮಾತ್ರವೇ ಮದ್ಯ ಮಾರಾಟಕ್ಕೆ ಅವಕಾಶವಿರಲಿದೆ.
ನಾಯ್ಡು ಕನಸಿನ ರಾಜಧಾನಿ ಅಮರಾವತಿಗೆ ಎಳ್ಳುನೀರು, ಒಪ್ಪಂದ ರದ್ದು!
ನವೆಂಬರ್ 23ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: