
ಲಖನೌ (ಮೇ.9): ರಫೇಲ್‌ಗೆ ಕಟ್ಟಿದ ನಿಂಬೆಹಣ್ಣು ಹಾಗೂ ಮೆಣಸಿನಕಾಯಿ ತ ಯಾವಾಗ ತೆಗೀತೀರಿ? ಯಾವಾಗ ಅವುಗಳ ಮೂಲಕ ಪಾಕ್ ಮೇಲೆ ಯುದ್ಧ ಮಾಡುತ್ತೀರಿ ಎಂದು ಉತ್ತರ ಪ್ರದೇಶ ಕಾಂಗ್ರೆಸ್ ನಾಯಕ ಅಜಯ ರಾಯ್ ಅವರು ಮೋದಿ ಸರ್ಕಾರವನ್ನುಪ್ರಶ್ನಿಸಿದ್ದಾರೆ.
ಭಾನುವಾರ ಕಾಂಗ್ರೆಸ್ ಸಮಾವೇಶದಲ್ಲಿ ಅವರು ಮಾತನಾಡಿ, ‘ಪ್ರಧಾನಿ, ಗೃಹ ಸಚಿವರು, ರಕ್ಷಣಾ ಸಚಿವರು ರಫೇಲ್‌ಗೆ ನಿಂಬೆ ಮತ್ತು ಮೆಣಸಿನಕಾಯಿ ಕಟ್ಟಿ ಪೂಚಿಸಿದ್ದರು. ಹಾಗಿದ್ದರೆ ರಫೇಲ್ ನಿಂದ ನಿಂಬೆ ಮತ್ತು ಮೆಣಸಿನಕಾಯಿಯನ್ನು ಅವರು ಯಾವಾಗ ತೆಗೆಯುತ್ತಾರೋ’ ಎಂದು ಕೇಳಿದರು.
ಪಹಲ್ಗಾಮ್ ಭಯೋತ್ಪಾದಕ ದಾಳಿಯ ಸಮಯದಲ್ಲಿ ಇಸ್ಲಾಮಿಕ್ ಭಯೋತ್ಪಾದಕರು ಹಿಂದೂಗಳನ್ನು ಹತ್ಯೆ ಮಾಡಿದ ಕೆಲವು ದಿನಗಳ ನಂತರ, ಉತ್ತರ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಅಜಯ್ ರೈ ಭಾನುವಾರ (ಮೇ 4) ಭಾರತೀಯ ವಾಯುಪಡೆ (IAF) ಯನ್ನು ಅಣಕಿಸಿರುವುದು ಬಿಜೆಪಿ ನಾಯಕರು ತೀವ್ರ ಕಿಡಿಕಾರಿದ್ದಾರೆ.
ಇದನ್ನೂ ಓದಿ: 'ರಾಮ ಪೌರಾಣಿಕ ವ್ಯಕ್ತಿ' ಎಂದ ರಾಹುಲ್ ಗಾಂಧಿ; ಹಿಂದೂಗಳನ್ನ ಅವಮಾನಿಸೋದು ಕಾಂಗ್ರೆಸ್ಸಿನ ಹುಟ್ಟುಗುಣ - ಬಿಜೆಪಿ ಕಿಡಿ
ಕಾಂಗ್ರೆಸ್ಸಿಗ ಹೇಳಿದ್ದೇನು?
ರಫೇಲ್ ಜೆಟ್‌ಗಳನ್ನು ಬಳಕೆಗೆ ತರುತ್ತಿಲ್ಲ, ಅವುಗಳ ಮೇಲೆ ನಿಂಬೆ ಮತ್ತು ಮೆಣಸಿನಕಾಯಿಗಳು ಮಾತ್ರ ನೇತಾಡುತ್ತಿವೆ ಎಂದು ಅವರು ಹೇಳಿದ್ದಾರೆ. ಆಟಿಕೆ ವಿಮಾನವನ್ನು ಬಳಸಿ ಅದಕ್ಕೆ 'ರಫೇಲ್' ಎಂದು ಹೆಸರಿಸುವ ಮೂಲಕ ಅಜಯ್ ರೈ ಐಎಎಫ್ ಅನ್ನು ಅಪಹಾಸ್ಯ ಮಾಡಿದರು. ಅವರು ಅದಕ್ಕೆ ನಿಂಬೆ ಮತ್ತು ಮೆಣಸಿನಕಾಯಿಗಳನ್ನು ಕೂಡ ಜೋಡಿಸಿದರು.
'ಬಹಳಷ್ಟು ಮಾತನಾಡುವ ಈ ಸರ್ಕಾರ ಭಯೋತ್ಪಾದಕರನ್ನು ಹತ್ತಿಕ್ಕುತ್ತೇವೆ ಎಂದು ಹೇಳಿ ಅವರು ರಫೇಲ್ ತಂದರು, ಆದರೆ ತಮ್ಮ ಹ್ಯಾಂಗರ್‌ಗಳಲ್ಲಿ ಮೆಣಸಿನಕಾಯಿ ಮತ್ತು ನಿಂಬೆಹಣ್ಣು ನೇತು ಹಾಕಿಕೊಂಡು ಇದ್ದಾರೆ ಎಂದು ಅವರು ನಿರ್ಲಜ್ಜವಾಗಿ ಹೇಳಿದರು.
ರಾಷ್ಟ್ರೀಯ ಬಿಕ್ಕಟ್ಟಿನ ಸಮಯದಲ್ಲೂ ಕಾಂಗ್ರೆಸ್ ಪಕ್ಷ ರಾಜಕೀಯ ಮಾಡುವುದನ್ನು ನಿಲ್ಲಿಸಲು ಸಾಧ್ಯವಿಲ್ಲ. ಪಹಲ್ಗಾಮ್ ಭಯೋತ್ಪಾದಕ ದಾಳಿ ವಿಚಾರದಲ್ಲಿ ಪಾಕಿಸ್ತಾನಿ ರಾಜಕಾರಣಿಗಳಿಗಿಂತ ಕೀಳುಮಟ್ಟಕ್ಕೆ ಇಳಿದು ಹೇಳಿಕೆ ಕೊಡುತ್ತಿರುವದು ನಾಚಿಕೆಗೇಡಿನ ಸಂಗತಿ. ಕೇಂದ್ರ ಸರ್ಕಾರ ಪಾಕಿಸ್ತಾನದೊಂದಿಗೆ ಯುದ್ಧ ಮಾಡುವ ಮೊದಲು ಇಂಥವರ ವಿರುದ್ಧ ಕಠಿಣ ಕ್ರಮ ಜರುಗಿಸುವುದು ಅಗತ್ಯವಾಗಿದೆ.
ಗಡಿ ಮೇಲೆ ನಿಗಾ ಇಡುವ ‘ಬಲೂನ್’ ಪ್ರಯೋಗ ಯಶಸ್ವಿ ಏನಿದು ಏರ್‌ಶಿಪ್? ಹೇಗೆ ನಿಗಾ ಇಡುತ್ತೆ?...
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ