'ಅಯ್ಯೋ..' ಎನ್ನುತ್ತಲೇ ವೇದಿಕೆಗೆ ಸ್ವಾಗತ, ರಾಜ್ಯದ ಶ್ರದ್ಧಾಗೆ Most Creative Creator ಪ್ರಶಸ್ತಿ ನೀಡಿದ ಪ್ರಧಾನಿ ಮೋದಿ!

By Santosh NaikFirst Published Mar 8, 2024, 1:50 PM IST
Highlights


ಪ್ರಧಾನ ಮಂತ್ರಿ ಮೋದಿ ಅವರು ಜಾಹ್ನ್ವಿ ಸಿಂಗ್ ಅವರಿಗೆ ಹೆರಿಟೇಜ್ ಫ್ಯಾಷನ್ ಐಕಾನ್ ಪ್ರಶಸ್ತಿಯನ್ನು ಮತ್ತು  ಕಬಿತಾ ಸಿಂಗ್ (ಕಬಿತಾಸ್ ಕಿಚನ್) ಅವರಿಗೆ ಆಹಾರ ವಿಭಾಗದಲ್ಲಿ ಅತ್ಯುತ್ತಮ ಕ್ರಿಯೇಟರ್‌ ಪ್ರಶಸ್ತಿಯನ್ನು ಪ್ರದಾನ ಮಾಡಿದರು.

ನವದೆಹಲಿ (ಮಾ.8): ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಶುಕ್ರವಾರ ರಾಷ್ಟ್ರ ರಾಜಧಾನಿಯ ಭಾರತ್ ಮಂಟಪದಲ್ಲಿ ರಾಜ್ಯದ ಪ್ರಖ್ಯಾತ ಆರ್‌ಜೆ ಹಾಗೂ ಕಂಟೆಂಟ್‌ ಕ್ರಿಯೇಟರ್‌ ಆಗಿರುವ 'ಅಯ್ಯೋ ಶ್ರದ್ಧಾ' ಎಂದೇ ಫೇಮಸ್‌ ಆಗಿರುವ ಶ್ರದ್ಧಾ ಜೈನ್‌ ಅವರಿಗೆ ಮಹಿಳಾ ವಿಭಾಗದಲ್ಲಿ ಅತ್ಯಂತ ಸೃಜನಶೀಲ ಕ್ರಿಯೇಟರ್‌ ಎನ್ನುವ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ. ಪುರುಷರ ವಿಭಾಗದಲ್ಲಿ ಈ ಪ್ರಶಸ್ತಿಯನ್ನು ಬುವಾವಾ ಎಂದೇ ಪ್ರಸಿದ್ಧರಾಗಿರುವ ಆರ್‌ಜೆ ರೌನಕ್‌ಗೆ ಈ ಪ್ರಶಸ್ತಿ ನೀಡಲಾಗಿದೆ.  ಕೆಲವೊಮ್ಮೆ ರಾಜಕೀಯ ಅಥವಾ ಸಾಮಾಜಿಕ ಸಮಸ್ಯೆಗಳಿಂದಾಗಿ ದೇಶದ ಒಟ್ಟಾರೆ ವಾತಾವರಣ ಹೇಗೆ ಉದ್ವಿಗ್ನವಾಗುತ್ತದೆ ಎನ್ನುವುದನ್ನು ಶ್ರದ್ಧಾ ಈ ವೇಳೆ ಉಲ್ಲೇಖಿಸಿದ್ದಾರೆ. ಈ ಹಂತದಲ್ಲಿ ತಮ್ಮ ಕಂಟೆಂಟ್‌ ಮೂಲಕ ಕಡಿಮೆ ಈ ವಾತಾವರಣವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಪ್ರಯತ್ನ ಪಡುವುದಾಗಿ ತಿಳಿಸಿದ್ದಾರೆ. ಮೊಟ್ಟಮೊದಲ ಬಾರಿಗೆ ಯೂಟ್ಯೂಬ್‌, ಇನ್ಸ್‌ಟಾಗ್ರಾಮ್‌ ಸೇರಿದಂತೆ ಹಲವು ಸೋಶಿಯಲ್‌ ಮೀಡಿಯಾ ವೇದಿಕೆಗಳಲ್ಲಿ ಜನಪರ ಕಂಟೆಂಟ್‌ಗಳ ಮೂಲಕ ಪ್ರಖ್ಯಾತರಾಗಿರುವ ವ್ಯಕ್ತಿಗಳಿಗೆ ನ್ಯಾಷನಲ್‌ ಕ್ರಿಯೇಟರ್‌ ಪ್ರಶಸ್ತಿಯನ್ನು ಪ್ರಧಾನಿ ನರೇಂದ್ರ ಮೋದಿ ವಿತರಣೆ ಮಾಡಿದರು. ಈ ಹಂತದಲ್ಲಿ ಮಾತನಾಡಿದ ಅವರು, ಮುಂದಿನ ಲೋಕಸಭೆ ಚುನಾವಣೆ ಇದೆ ಎನ್ನುವ ಕಾರಣಕ್ಕಾಗಿ ಇದನ್ನು ಮಾಡುತ್ತಿದ್ದೇನೆ ಎಂದು ಕೆಲವರು ಹೇಳ್ತಾರೆ. ಆದರೆ, ಮುಂದಿನ ವರ್ಷ ಶಿವರಾತ್ರಿಗೂ ನಾನೇ ಈ ಪ್ರಶಸ್ತಿ ಪ್ರದಾನ ಮಾಡಲಿದ್ದೇನೆ. ಇದು ಮೋದಿ ಗ್ಯಾರಂಟಿ ಎನ್ನುವ ಮೂಲಕ ಮತ್ತೊಮ್ಮೆ ಅಧಿಕಾರಕ್ಕೇರುವ ವಿಶ್ವಾಸ ವ್ಯಕ್ತಪಡಿಸಿದರು.

ಶ್ರದ್ಧಾ ಅವರನ್ನು ವೇದಿಕೆಗೆ ಸ್ವಾಗತಿಸುವ ವೇಳೆ ಸ್ವತಃ ಪ್ರಧಾನಿ ಮೋದಿ ಅವರೇ 'ಅಯ್ಯೋ..' ಎಂದು ಹೇಳಿದ್ದು ವಿಶೇಷವಾಗಿತ್ತು. ಇಡೀ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಅತ್ಯಂತ ಮನರಂಜನಾತ್ಮಕವಾಗಿದ್ದರು. ಕಂಟೆಂಟ್‌ ಕ್ರಿಯೆಟರ್‌ಗೆ ಅಗತ್ಯವಾಗಿದ್ದ ಮಾತುಗಳು ಮೋದಿ ಅವರಿಂದ ಸರಾಗವಾಗಿ ಬರುತ್ತಿದ್ದವು. ಹೆಚ್ಚಿನ ಎಲ್ಲಾ ಕಂಟೆಂಟ್‌ ಕ್ರಿಯೆಟರ್‌ಗಳು ವೇದಿಕೆಗೆ ಬರುವಾಗ ಅವರ ಕಾರ್ಯಕ್ರಮದ ವಿಶೇಷತೆಗಳನ್ನು ಮೋದಿ ಹೇಳುತ್ತಿದ್ದರು. ಅದರೊಂದಿಗೆ ತಾವು ಸ್ಪೂರ್ತಿದಾಯಕ ಅಂಶಗಳಿರುವ ಕಂಟೆಂಟ್‌ಗಳನ್ನೇ ಇಷ್ಟಪಡುವುದಾಗಿ ತಿಳಿಸಿದರು.

ಪ್ರಶಸ್ತಿ ಸ್ವೀಕರಿಸುವ ವೇಳೆ ಮಾತನಾಡಿದ ಶ್ರದ್ಧಾ,  "ಎಷ್ಟೇ ಒತ್ತಡದ ಪರಿಸ್ಥಿತಿ ಇದ್ದರೂ, ನಾವು ಭಾರತೀಯರು ನಗುವ ಮಾರ್ಗವನ್ನು ಕಂಡುಕೊಳ್ಳುತ್ತಲೇ ಇರುತ್ತೇವೆ' ಎಂದು ಹೇಳಿದರು. ಶ್ರದ್ಧಾ ಜೈನ್ ಅವರು ಅಯ್ಯೋ ಶ್ರದ್ಧಾ ಎಂಬ ಯೂಟ್ಯೂಬ್ ಚಾನೆಲ್ ಅನ್ನು ನಡೆಸುತ್ತಿದ್ದಾರೆ.

Latest Videos

ಪ್ರಧಾನ ಮಂತ್ರಿ ಮೋದಿ ಅವರು ಜಾಹ್ನ್ವಿ ಸಿಂಗ್ ಅವರಿಗೆ ಹೆರಿಟೇಜ್ ಫ್ಯಾಷನ್ ಐಕಾನ್ ಪ್ರಶಸ್ತಿ, ಕಬಿತಾ ಸಿಂಗ್ (ಕಬಿತಾಸ್ ಕಿಚನ್) ಅವರಿಗೆ ಆಹಾರ ವಿಭಾಗದಲ್ಲಿ ಅತ್ಯುತ್ತಮ ಕಂಟೆಂಟ್‌ ಕ್ರಿಯೇಟರ್‌ ಪ್ರಶಸ್ತಿಯನ್ನು ಪ್ರದಾನ ಮಾಡಿದರು. ಗ್ರೀನ್‌ ಚಾಂಪಿಯನ್‌ ವಿಭಾಗದಲ್ಲಿ ಪಂಖಿತಿ ಪಾಂಡೆ (Pankhti Pandey), ಅತ್ಯುತ್ತಮ ಸ್ಟೋರಿ ಟೆಲ್ಲರ್‌ ವಿಭಾಗದಲ್ಲಿ ಕೀರ್ತಿಕಾ ಗೋವಿಂದಸಾಮಿ (Keerthika Govindasamy), ಗಾಯಕಿ ಮೈಥಿಲಿ ಠಾಕೂರ್ (Maithili Thakur) ಅವರಿಗೆ 'ವರ್ಷದ ಸಾಂಸ್ಕೃತಿಕ ರಾಯಭಾರಿ' ಪ್ರಶಸ್ತಿ,   ಟೆಕ್ ವಿಭಾಗದಲ್ಲಿ ಗೌರವ್ ಚೌಧರಿ (Gaurav Chaudhary), ಅತ್ಯುತ್ತಮ  ರೋಗ್ಯ ಮತ್ತು ಫಿಟ್‌ನೆಸ್ ಕಂಟೆಂಟ್‌ ವಿಭಾಗದಲ್ಲಿ ಅಂಕಿತ್ ಬೈಯಾನ್‌ಪುರಿಯಾ (Ankit Baiyanpuria), ಶಿಕ್ಷಣ ವಿಭಾಗದಲ್ಲಿ ಉತ್ತಮ ಸೃಷ್ಟಿಕರ್ತ ನಮನ್ ದೇಶಮುಖ್ (Naman Deshmukh) ಮತ್ತು ನೆಚ್ಚಿನ ಟ್ರಾವೆಲ್‌ ಕಂಟೆಂಟ್‌ಗಾಗಿ  ಕಾಮಿಯಾ ಜಾನಿ (Kamiya Jani) ಅವರಿಗೆ ಪ್ರಶಸ್ತಿ ಲಭಿಸಿದೆ. 

ಇಬ್ಬರು ಕನ್ನಡ ನಟಿಯರ ಅಕೌಂಟ್‌ ಹ್ಯಾಕ್; ಇದರ ಹಿಂದಿರುವ ಆ ವ್ಯಕ್ತಿ ಯಾರು ?

ಮೊಟ್ಟಮೊದಲ ನ್ಯಾಷನಲ್‌ ಕ್ರಿಯೇಟರ್‌ ಅವಾರ್ಡ್ಸ್‌ಗೆ ದೊಡ್ಡ ಮಟ್ಟದ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಪ್ರಶಸ್ತಿಗಾಗಿ 1.5 ಲಕ್ಷ ನಾಮಿನೇಷನ್‌ಗಳು ಬಂದಿದ್ದರೆ, 10 ಲಕ್ಷಕ್ಕೂ ಅಧಿಕ ಮತಗಳು ಬಂದಿದ್ದವು. ರಾಷ್ಟ್ರೀಯ ಕ್ರಿಯೇಟರ್‌ ಅವಾರ್ಡ್ಸ್‌, ಸ್ಟೋರಿ ಟೆಲ್ಲಿಂಗ್‌,  ಸಾಮಾಜಿಕ ಬದಲಾವಣೆಯ ಸಮರ್ಥನೆ, ಪರಿಸರ ಸಮರ್ಥನೀಯತೆ, ಶಿಕ್ಷಣ ಮತ್ತು ಗೇಮಿಂಗ್ ಸೇರಿದಂತೆ ಡೊಮೇನ್‌ಗಳಾದ್ಯಂತ ಶ್ರೇಷ್ಠತೆ ಮತ್ತು ಪ್ರಭಾವವನ್ನು ಗುರುತಿಸುವ ಪ್ರಯತ್ನವಾಗಿದೆ. ಸಕಾರಾತ್ಮಕ ಬದಲಾವಣೆಯನ್ನು ಹೆಚ್ಚಿಸಲು ಸೃಜನಶೀಲತೆಯನ್ನು ಬಳಸುವುದಕ್ಕಾಗಿ ಪ್ರಶಸ್ತಿಯನ್ನು ಲಾಂಚ್‌ಪ್ಯಾಡ್‌ನಂತೆ ಕಲ್ಪಿಸಲಾಗಿದೆ. ಮೊದಲ ಸುತ್ತಿನಲ್ಲಿ 20 ವಿಭಾಗಗಳಿಗೆ 1.5 ಲಕ್ಷಕ್ಕೂ ಅಧಿಕ ಶಿಫಾರಸುಗಳು ಬಂದಿದ್ದವು. ಆ ಬಳಿಕ ವೋಟಿಂಗ್‌ ಸುತ್ತಿನಲ್ಲಿ, ವಿವಿಧ ಪ್ರಶಸ್ತಿ ವಿಭಾಗಗಳಲ್ಲಿ ಡಿಜಿಟಲ್ ರಚನೆಕಾರರಿಗೆ ಸುಮಾರು 10 ಲಕ್ಷ ಮತಗಳು ಚಲಾವಣೆಯಾದವು. ಇದರ ನಂತರ, ಮೂವರು ಅಂತರರಾಷ್ಟ್ರೀಯ ರಚನೆಕಾರರು ಸೇರಿದಂತೆ 23 ವಿಜೇತರನ್ನು ನಿರ್ಧರಿಸಲಾಗಿದೆ.

 

370ನೇ ವಿಧಿ ರದ್ದಾದ ಬಳಿಕ ಮೊದಲ ಬಾರಿಗೆ ಶ್ರೀನಗರಕ್ಕೆ ಭೇಟಿ ನೀಡಿದ ಪ್ರಧಾನಿ ಮೋದಿ!

One of my favourites.. well deserved ❤️
Clean, witty, slice of life comedy without hurting anyone's faith. That she writes her own content is even more commendable 👏pic.twitter.com/wmurP6MTrh

— ❤︎ (@innsaei_07)

 

 

click me!