ಏರ್‌ಪೋರ್ಟ್ ಭದ್ರತಾ ಸಿಬ್ಬಂದಿ ಐಪಿಎಸ್ ಅಧಿಕಾರಿಗೆ ತಮ್ಮ ಶೂಟ್‌ಕೇಸ್ ತೆರೆಯಲು ಹೇಳಿದ್ದು, ಶೂಟ್‌ಕೇಸ್ ತೆರೆದ ಏರ್‌ಪೋರ್ಟ್ ಭದ್ರತಾ ಸಿಬ್ಬಂದಿಗೆ ಶೂಟ್‌ಕೇಸ್ ಒಳಗಿದ್ದ ವಸ್ತುವನ್ನು ನೋಡಿ ಅಚ್ಚರಿ ಜೊತೆ ಶಾಕ್ ಕಾದಿತ್ತು. ಹಾಗಾದರೆ ಅದರೊಳಗೆ ಏನಿತ್ತು ಗೊತ್ತೆ. ಅದರೊಳಗಿದ್ದಿದ್ದು, ಇನ್ನು ಸಿಪ್ಪೆಯಿಂದ ಬೇರ್ಪಡಿಸದ ಹಸಿರು ಬಟಾಣಿ ಕಾಳುಗಳು. ಹೌದು ಹಿರಿಯ ಐಪಿಎಸ್ ಅಧಿಕಾರಿ ಅರುಣ್ ಬೋತ್ರಾ ತಮ್ಮ ಟ್ವಿಟ್ಟರ್‌ನಲ್ಲಿ ಜೈಪುರ ಏರ್‌ಪೋರ್ಟ್‌ನ ಸೆಕ್ಯೂರಿಟಿ ಸಿಬ್ಬಂದಿ ನನ್ನ ಬ್ಯಾಗ್‌ನ್ನು ತೆರೆಯುವಂತೆ ಕೇಳಿದರು ಎಂದು ಬರೆದು ಬಟಾಣಿ ಕಾಳುಗಳಿಂದ ತುಂಬಿರುವ ಶೂಟ್‌ಕೇಸ್‌ನ ಫೋಟೋವೊಂದನ್ನು ಶೇರ್ ಮಾಡಿದ್ದಾರೆ.
ಒಡಿಶಾದ ಸಾರಿಗೆ ಆಯುಕ್ತರು ಆಗಿರುವ ಅರುಣ್ ಬೋತ್ರಾ ಅವರು ಹಸಿರು ಬಟಾಣಿಗಳಿಂದ ತುಂಬಿದ ಸೂಟ್‌ಕೇಸ್‌ನ ಚಿತ್ರವನ್ನು ಹಂಚಿಕೊಂಡಿದ್ದಾರೆ. ಜೈಪುರ ವಿಮಾನ ನಿಲ್ದಾಣದಲ್ಲಿ ಈ ಚಿತ್ರವನ್ನು ತೆಗೆಯಲಾಗಿದೆ ಎಂದು ಅವರು ಬಹಿರಂಗಪಡಿಸಿದರು. ಅಲ್ಲಿ ಭದ್ರತಾ ಅಧಿಕಾರಿಗಳು ಹೆಚ್ಚಿನ ತಪಾಸಣೆಗಾಗಿ ನನ್ನ ಬ್ಯಾಗ್‌ನ್ನು ತೆರೆಯಲು ಹೇಳಿದರು, ಬಹುಶಃ ಸ್ಕ್ಯಾನರ್‌ನಲ್ಲಿ ಇದು ಏನೆಂದು ಸರಿಯಾಗಿ ಕಾಣಿಸಿಲ್ಲದ ಕಾರಣ ಬ್ಯಾಗ್ ತೆರೆಯಲು ಹೇಳಿದ್ದಾರೆ. ಸೂಟ್‌ಕೇಸ್ ಅನ್ನು ತೆರೆದಾಗ ಅದು ತಾಜಾ ಅವರೆಕಾಳುಗಳಿಂದ ತುಂಬಿತ್ತು ಎಂದು ತಿಳಿದುಬಂದಿದೆ ಇದನ್ನು ಪ್ರತಿ ಕಿಲೋಗ್ರಾಂಗೆ 40 ರೂಪಾಯಿ ನೀಡಿ ಖರೀದಿಸಲಾಗಿದೆ ಎಂದು ಐಪಿಎಸ್ ಅಧಿಕಾರಿ ಹೇಳಿದ್ದಾರೆ.
ಆದರೆ ಅರುಣ್ ಬೋತ್ರಾ ತಮಾಷೆ ಮಾಡಿದ್ದಾರೋ ಇಲ್ಲವೋ ಎಂಬುದು ಸ್ಪಷ್ಟವಾಗಿಲ್ಲ, ಆದರೆ ಅವರ ಪೋಸ್ಟ್ ಖಂಡಿತವಾಗಿಯೂ ಸಾಮಾಜಿಕ ಜಾಲತಾಣ ಬಳಕೆದಾರರನ್ನು ರಂಜಿಸಿದೆ. ಇವರ ಈ ಟ್ವಿಟ್‌ಗೆ 48,000 ಕ್ಕೂ ಹೆಚ್ಚು 'ಲೈಕ್ಸ್ ಬಂದಿದ್ದು, ನೂರಾರು ಜನ ತಮಾಷೆಯಾಗಿ ಪ್ರತಿಕ್ರಿಯಿಸಿದ್ದಾರೆ.
Smuggling Attempt Busted : ಚೆನ್ನೈ ಏರ್‌ಪೋರ್ಟ್‌ನಲ್ಲಿ 1364 ಜೀವಂತ ನಕ್ಷತ್ರ ಆಮೆಗಳ ಜಪ್ತಿ
ಅರುಣ್ ಬೋತ್ರಾ ಟ್ವಿಟ್ ನೋಡಿ ಐಎಎಸ್ ಅಧಿಕಾರಿ ಅವನೀಶ್ ಶರಣ್ (Awanish Sharan)ಅವರು ಕೂಡ ವಿಮಾನದಲ್ಲಿ ತರಕಾರಿ ಸಾಗಿಸುವಾಗ ತಮಗಾದ ಅನುಭವವನ್ನು ಹಂಚಿಕೊಂಡರು. ಕಳೆದ ಬಾರಿ ನಾನು ಮನೆಗೆ ಹೋಗಿ ಬರುವಾಗ ಸೋರೆಕಾಯಿ ಹಾಗೂ ಬದನೆಕಾಯಿ ತೆಗೆದುಕೊಂಡು ಬಂದಿದ್ದಕ್ಕೆ ಇಂಡಿಗೋ ಸಿಬ್ಬಂದಿಗೆ ನಾನು ಏರ್‌ಪೋರ್ಟ್‌ನಲ್ಲಿ 2000 ರೂಪಾಯಿ ನೀಡಬೇಕಾಯಿತು ಎಂದು ಕಾಮೆಂಟ್ ಮಾಡಿದ್ದಾರೆ. ಅರಣ್ಯ ಸೇವಾ ಅಧಿಕಾರಿ ಪರ್ವೀನ್ ಕಸ್ವಾನ್(Parveen Kaswan) ಪ್ರತಿಕ್ರಿಯಿಸಿ ಇದು ಅವರೆಕಾಳು ಕಳ್ಳಸಾಗಣೆ ಪ್ರಕರಣವೇ ಎಂದು ತಮಾಷೆಯಾಗಿ ಪ್ರತಿಕ್ರಿಯಿಸಿದ್ದಾರೆ.
ಬುರ್ಕಾದಲ್ಲಿ 18 ಲಕ್ಷದ ಚಿನ್ನ ಪೋಣಿಸಿ ಕಳ್ಳಸಾಗಣೆ: ಹೈದರಾಬಾದ್ ಏರ್‌ಪೋರ್ಟ್‌ನಲ್ಲಿ ಸಿಕ್ಕಿಬಿದ್ದ ಮಹಿಳೆ
ರಾಜಸ್ಥಾನದ ರಾಜಧಾನಿ ಜೈಪುರದಲ್ಲಿ ಪ್ರತಿ ಕೆಜಿಗೆ ₹ 40 ದರದಲ್ಲಿ 10 ಕಿಲೋ ಹಸಿರು ಬಟಾಣಿ ಖರೀದಿಸಿದೆ ಎಂದು ಟ್ವಿಟರ್ ಬಳಕೆದಾರರು ಹೇಳಿದಾಗ, ಬೋತ್ರಾ ನಾನು ಅಷ್ಟೇ ಎಂದು ಪ್ರತಿಕ್ರಿಯಿಸಿದರು. ಒಡಿಶಾ ಕೇಡರ್‌ನ ಐಪಿಎಸ್ ಅಧಿಕಾರಿ (Odisha cadre IPS officer) ಅರುಣ್ ಬೋತ್ರಾ (Arun Bothra) ಟ್ವಿಟರ್‌ನಲ್ಲಿ ಸದಾ ಸಕ್ರಿಯರಾಗಿದ್ದಾರೆ. ಅವರು ಟ್ವಿಟ್ಟರ್‌ನಲ್ಲಿ 2.3 ಲಕ್ಷಕ್ಕೂ ಹೆಚ್ಚು ಅನುಯಾಯಿಗಳನ್ನು ಹೊಂದಿದ್ದಾರೆ. ಅಲ್ಲಿ ಅವರು ಹಾಕುವ ಪೋಸ್ಟ್‌ಗಳು ತಮಾಷೆಯಿಂದ ಕೂಡಿರುತ್ತದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ