
ಅಹಮ್ಮದಾಬಾದ್ (ಜು.28) ಏರ್ ಇಂಡಿಯಾ ವಿಮಾನ ದುರಂತ ಘಟನೆಯ ತನಿಖೆ ನಡೆಯುತ್ತಿದೆ. ಇತ್ತ ಈ ಘಟನೆಯಲ್ಲಿ ಮಡಿದವರ ಕುಟಂಬ ಈಗಲೂ ಕಣ್ಣೀರಿಡುತ್ತಾ ದಿನ ದೂಡುತ್ತಿದೆ.ಇತ್ತ ಇದೇ ಘಟನೆಯಲ್ಲಿ ಗಾಯಗೊಂಡು ಆಸ್ಪತ್ರೆ ಸೇರಿದವರು ಬಿಡುಗಡೆಯಾಗಿದ್ದಾರೆ. ಈ ಪೈಕಿ ದುರಂತದಲ್ಲಿ ಗಾಯಗೊಂಡು ಬದುಕುಳಿದ ಅತ್ಯಂತ ಕಿರಿಯ ಎಂದರೆ ಅದು ಧ್ಯಾಂಶ್. ಏರ್ ಇಂಡಿಯಾ ವಿಮಾನ ಅಹಮ್ಮದಾಬಾದ್ ಬಿಜೆ ಮೆಡಿಕಲ್ ಕಾಲೇಜು ಹಾಸ್ಟೆಲ್ ಮೇಲೆ ಪತನಗೊಂಡಿತ್ತು. ಈ ವೇಳೆ ಇದೇ ಹಾಸ್ಟೆಲ್ ಪಕ್ಕದಲ್ಲೇ ಇದ್ದ ಮನೆಯಲ್ಲಿ 8 ತಿಂಗಳ ಮಗು ಧ್ಯಾಂಶ್ ಹಾಗೂ ಮಗುವಿನ ತಾಯಿ ಮನೀಶಾ ಕಚಾಡಿಯಾ ಗಂಭೀರವಾಗಿ ಗಾಯಗೊಂಡಿದ್ದರು.ಮಗುವನ್ನು ಬೆಂಕಿಯ ಕೆನ್ನಾಲಗೆಯಿಂದ ತಾಯಿ ರಕ್ಷಣೆ ನೀಡಿದ್ದರು. ಈ ಘಟನೆಯಲ್ಲಿ ತಾಯಿ ಮಗು ಇಬ್ಬರೂ ಗಂಭೀರವಾಗಿ ಗಾಯಗೊಂಡಿದ್ದರು. ಇದೀಗ ಸುದೀರ್ಘ ದಿನಗಳ ಚಿಕಿತ್ಸೆ ಬಳಿಕ ತಾಯಿ ಹಾಗೂ ಮಗೂ ಇಬ್ಬರು ಚೇತರಿಸಿಕೊಂಡು, ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಮಗುವಿಗಾಗಿ ತಾಯಿಯ ನಿರಂತರ ಹೋರಾಟ
ಮಗುವಿನ ಜೊತೆ ಮನೀಶಾ ಮನೆಯಲ್ಲಿದ್ದರೆ, ಪತಿ ಕಪಿಲ್ ಕಚಾಡಿಯಾ ಬಿಜೆ ಆಸ್ಪತ್ರೆಯಲ್ಲಿ ಸೇವೆಯಲ್ಲಿದ್ದರು. ಮಧ್ಯಾಹ್ನದ ವೇಳೆ ಏರ್ ಇಂಡಿಯಾ ವಿಮಾನ ಪತನಗೊಂಡಿತ್ತು. ಇಂಧನ ಭರ್ತಿಯಾಗಿದ್ದ ಕಾರಣ ವಿಮಾನದ ಬೆಂಕಿ ಬಿಜೆ ಮೆಡಿಕಲ್ ಹಾಸ್ಟೆಲ್, ಅಕ್ಕ ಪಕ್ಕದ ಕಟ್ಟಗಳಿಗೂ ವ್ಯಾಪಿಸಿತ್ತು. ಈ ವೇಳೆ ವಿಮಾನ ಪತನಗೊಳ್ಳುತ್ತಿದ್ದಂತೆ ಮಗು ಎತ್ತಿಕೊಂಡ ಮನೀಶಾ ರಕ್ಷಣೆ ನೀಡಿದ್ದರು. ಕಟ್ಟದ ಭಾಗಗಳು ಕುಸಿದಿತ್ತು. ಇದರ ಬೆನ್ನಲ್ಲೇ ಬೆಂಕಿಯ ಕೆನ್ನಾಲಗಿ ಇಡೀ ಕೋಣೆಯೊಳಗೆ ಆವರಿಸಿಕೊಂಡಿತ್ತು. ದಟ್ಟ ಹೊಗೆ ಕಾಣಿಸಿಕೊಂಡಿತ್ತು. ಇದರ ನಡುವೆ ಮಗುವಿಗೆ ಬೆಂಕಿ ತಟ್ಟದಂತೆ ಹಿಡಿದು ಬೆಂಕಿಯ ನಡುವಿನಿಂದ ಎದ್ದು ಓಡುತ್ತಾ ಹೊರಬಂದಿದ್ದರು. ಇದರಿಂದ ಮಗು ಹಾಗೂ ತಾಯಿ ಇಬ್ಬರು ಗಾಯಗೊಂಡಿದ್ದರು.
8 ತಿಂಗಳ ಮಗುವಾಗಿದ್ದ ಕಾರಣ ಗಂಭೀರವಾಗಿದ್ದ ಆರೋಗ್ಯ
ಮನೆಯ ಬೆಂಕಿಯ ನಡುವಿನಿಂದ ಹೊರಬಂದ ತಾಯಿ ಹಾಗೂ ಮಗುವನ್ನು ರಕ್ಷಣಾ ತಂಡ ಆಸ್ಪತ್ರೆ ದಾಖಲಿಸಿತ್ತು. ಈ ಪೈಕಿ ತಾಯಿ ನಿಧನಾವಾಗಿ ಚೇತರಿಸಿಕೊಳ್ಳಲು ಆರಂಭಿಸಿದ್ದರೆ, ಮಗುವಿನ ಆರೋಗ್ಯ ಗಂಭೀರವಾಗಿತ್ತು. ಸುಟ್ಟ ಗಾಯದ ಪ್ರಮಾಣ ಹೆಚ್ಚಾಗಿದ್ದ ಕಾರಣ ಆತಂಕ ಮನೆ ಮಾಡಿತ್ತು. ನಿರಂತರ ಚಿಕಿತ್ಸೆಯಲ್ಲೂ ತಾಯಿಯ ತ್ಯಾಗ ಎಂತವರನ್ನು ಭಾವುಕರನ್ನಾಗಿ ಮಾಡುತ್ತದೆ.
ಮಗುವಿಗೆ ಚರ್ಮ ನೀಡಿದ ತಾಯಿ
ಮಗುವಿನ ದೇಹದ ಬಹೇತುಕ ಭಾಗ ಸುಟ್ಟಿದ್ದ ಕಾರಣ ಮಗುವಿಗೆ ನಿರಂತರ ಚಿಕಿತ್ಸೆ ನಡೆದಿತ್ತು. ಪುಟ್ಟ ಮಗುವಾಗಿದ್ದ ಕಾರಣ ವೈದ್ಯರ ಸೂಚನೆಯಂತೆ ತಾಯಿ ಮನೀಶಾ ತನ್ನ ತರ್ಮವನ್ನು ಮಗುವಿಗೆ ನೀಡಿದ್ದಾರೆ. ಮನೀಶಾ ಚರ್ಮ ತೆಗೆದು ಮಗುವಿಗೆ ಸರ್ಜರಿ ಮೂಲಕ ಇಡಲಾಗಿದೆ. ಈ ಸರ್ಜರಿ ಬಳಿಕವೂ ಮಗುವಿನ ಆರೋಗ್ಯ ಗಂಭೀರವಾಗಿತ್ತು. ಆದರೆ ಸುದೀರ್ಘ ಚಿಕಿತ್ಸೆ ಬಳಿಕ ಮಗು ಚೇತರಿಸಿಕೊಂಡಿದೆ. ಹೀಗಾಗಿ ಇಬ್ಬರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ