ವಾಯುಪಡೆ ಸೇರಿದ 2 ಸೀಟಿನ ತೇಜಸ್‌ ಯುದ್ಧ ವಿಮಾನ: ದಕ್ಷಿಣ ಭಾರತದಲ್ಲಿ ಏರಿಂಡಿಯಾ ಹಬ್‌?

Published : Oct 06, 2023, 10:16 AM ISTUpdated : Oct 06, 2023, 10:17 AM IST
ವಾಯುಪಡೆ ಸೇರಿದ  2 ಸೀಟಿನ ತೇಜಸ್‌ ಯುದ್ಧ ವಿಮಾನ: ದಕ್ಷಿಣ ಭಾರತದಲ್ಲಿ ಏರಿಂಡಿಯಾ ಹಬ್‌?

ಸಾರಾಂಶ

ಬೆಂಗಳೂರಿನಲ್ಲಿ ಕೇಂದ್ರ ಕಚೇರಿ ಹೊಂದಿರುವ ಹಿಂದುಸ್ತಾನ್‌ ಏರೋನಾಟಿಕ್ಸ್ ಲಿಮಿಟೆಡ್ ತಯಾರಿಸಿರುವ ಎರಡು ಸೀಟಿನ ಆವೃತ್ತಿಯ ಮೊದಲ ತೇಜಸ್ ಯುದ್ಧವಿಮಾನವನ್ನು ಬುಧವಾರ ಭಾರತೀಯ ವಾಯುಪಡೆಗೆ ಹಸ್ತಾಂತರಿಸಲಾಯಿತು.

ನವದೆಹಲಿ: ಬೆಂಗಳೂರಿನಲ್ಲಿ ಕೇಂದ್ರ ಕಚೇರಿ ಹೊಂದಿರುವ ಹಿಂದುಸ್ತಾನ್‌ ಏರೋನಾಟಿಕ್ಸ್ ಲಿಮಿಟೆಡ್ ತಯಾರಿಸಿರುವ ಎರಡು ಸೀಟಿನ ಆವೃತ್ತಿಯ ಮೊದಲ ತೇಜಸ್ ಯುದ್ಧವಿಮಾನವನ್ನು ಬುಧವಾರ ಭಾರತೀಯ ವಾಯುಪಡೆಗೆ ಹಸ್ತಾಂತರಿಸಲಾಯಿತು.

ಇದು ಲಘು ಯುದ್ಧ ವಿಮಾನವಾಗಿದ್ದು(fighter aircraft), ಎಲ್ಲ ಹವಾಗುಣಕ್ಕೂ ಹೊಂದಿಕೊಳ್ಳುತ್ತದೆ. ಈ ವಿಮಾನವನ್ನು ಪ್ರಮುಖವಾಗಿ ತರಬೇತಿಗಾಗಿ ಬಳಸಲಾಗುವುದಾದರೂ, ಅವಶ್ಯಕತೆ ಬಿದ್ದರೆ, ಯುದ್ಧ ಮಾಡುವ ಸಾಮರ್ಥ್ಯ ಹೊಂದಿದೆ. ಈ ವಿಮಾನ 4.5 ಜನರೇಷನ್‌ ಮಾದರಿಯದ್ದಾಗಿದ್ದು, ಚಾಲಕರಿಗೆ ಆರಾಮದಾಯಕ, ಸದೃಢವಾದ ಗಾಜಿನ ಕಾಕ್ಪಿಟ್ (ಕ್ಯಾಬಿನ್), ಚಾಲನ ಸ್ನೇಹಿ ತಂತ್ರಜ್ಞಾನ, ಸುಲಲಿತ ವ್ಯವಸ್ಥೆ ಹೊಂದಿಕೊಂಡಿದೆ. ವಿಶೇಷವೆಂದರೆ ಈ ಯುದ್ಧ ವಿಮಾನವು, ಎದುರಾಳಿಯೆಡೆಗೆ ಆಕ್ರಮಣಕಾರಿಯಾಗಿ ನುಗ್ಗಿ ದಾಳಿ ನಡೆಸುವುದರ ಜೊತೆಗೆ ಸಮುದ್ರದ ಮೇಲಿನ ಕಾರ್ಯಚರಣೆಯಲ್ಲೂ ಯಶಸ್ವಿಯಾಗಿ ಕೆಲಸ ಮಾಡಲಿದೆ.

ಸಿಕ್ಕಿಂ ಪ್ರವಾಹ: 14 ಸಾವು, 102 ಜನ ನಾಪತ್ತೆ: ಕಣ್ಮರೆಯಾದ 22 ಯೋಧರಿಗಾಗಿ ತೀವ್ರ ಶೋಧ

ಇದರಿಂದಾಗಿ ಭಾರತವು ಸೂಕ್ಷ್ಮ ಕಾರ್ಯಾಚರಣೆ ನಡೆಸಲು ಸಾಮರ್ಥ್ಯ ಇರುವ ಕೆಲವೇ ದೇಶಗಳ ಪಟ್ಟಿಗೆ ಸೇರಿದೆ. ಈ ಆವೃತ್ತಿಯ ಯುದ್ಧ ವಿಮಾನಕ್ಕೆ ಭಾರತೀಯ ವಾಯುಪಡೆ (Indian Air Force) 18 ವಿಮಾನಗಳ ಖರೀದಿ ಒಪ್ಪಂದ ಮಾಡಿಕೊಂಡಿದೆ. ಈ ಪೈಕಿ ಈ ವರ್ಷ 8 ವಿಮಾನಗಳನ್ನು ಎಚ್ಎಎಲ್ ಪೂರೈಕೆ ಮಾಡಿದರೆ, ಮುಂದಿನ ವರ್ಷ 10 ಯುದ್ಧ ವಿಮಾನಗಳನ್ನು ಒದಗಿಸಲಿದೆ.

ದಕ್ಷಿಣ ಭಾರತದಲ್ಲಿ ಏರಿಂಡಿಯಾ ಹಬ್‌ ಬೆಂಗಳೂರೋ, ಹೈದ್ರಾಬಾದೋ?

ನವದೆಹಲಿ: ಟಾಟಾ ಒಡೆತನದ ಏರ್‌ ಇಂಡಿಯಾ ದೇಶದಲ್ಲಿ ತನ್ನ 2ನೇ ಹಬ್‌ನ್ನು ದಕ್ಷಿಣ ಭಾರತದಲ್ಲಿ ಸ್ಥಾಪಿಸಲು ಚಿಂತನೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ. ಈ ಹಬ್‌ ಬೆಂಗಳೂರು ಪಾಲಾಗಲಿದೆಯಾ ಅಥವಾ ಹೈದರಾಬಾದ್‌ಗೆ ಹೋಗಲಿದೆಯಾ ಎಂಬುದನ್ನು ಕಾದುನೋಡಬೇಕಿದೆ.

ಪ್ರಸ್ತುತ ನವದೆಹಲಿಯಲ್ಲಿ ಮಾತ್ರ ಏರ್ ಇಂಡಿಯಾ (Air India) ತನ್ನ ಹಬ್‌ ಹೊಂದಿದ್ದು, ದೇಶೀಯ ಮತ್ತು ಅಂತಾರಾಷ್ಟ್ರೀಯ ವಿಮಾನಯಾನ ಸಂಪರ್ಕವನ್ನು ಮತ್ತಷ್ಟು ಹೆಚ್ಚಳಗೊಳಿಸುವ ನಿಟ್ಟಿನಲ್ಲಿ ಏರಿಂಡಿಯಾ ಈ ಹೊಸ ಹಬ್‌ ಬಳಕೆ ಮಾಡಕೊಳ್ಳಲಿದೆ ಎಂದು ವರದಿಗಳು ತಿಳಿಸಿವೆ. ಪ್ರಯಾಣಿಕರನ್ನು ಅವರ ಅಂತಿಮ ಗುರಿಯತ್ತ ತಲುಪಿಸುವಲ್ಲಿ ಈ ಹಬ್‌ಗಳು ಕಾರ್ಯಾಚರಣೆ ನಡೆಸುತ್ತವೆ. ಪ್ರತಿಯೊಂದು ವಿಮಾನಯಾನ ಸಂಸ್ಥೆಯ ಎಲ್ಲಾ ಪ್ರಮುಖ ಕಾರ್ಯಾಚರಣೆಗಳು ಈ ಹಬ್‌ಗಳಿಂದಲೇ ನಿರ್ಧಾರವಾಗುತ್ತವೆ.

ಅಬಕಾರಿ ಹಗರಣ: ಬಂಧಿತ ಎಎಪಿ ಶಾಸಕ ಸಂಜಯ ಸಿಂಗ್‌ 5 ದಿನ ಇ.ಡಿ. ಕಸ್ಟಡಿಗೆ

ಈ ಹೊಸ ಹಬ್‌ ನಿರ್ಮಾಣದ ಮುಖಾಂತರ ನವದೆಹಲಿಯಲ್ಲದೇ ದೇಶಾದ್ಯಂತ ತನ್ನ ಮಾರುಕಟ್ಟೆಯನ್ನು ವಿಸ್ತರಿಸಿಕೊಳ್ಳಲು ಏರಿಂಡಿಯಾ ಚಿಂತನೆ ನಡೆಸುತ್ತಿದೆ. ಅಲ್ಲದೇ ಹೆಚ್ಚು ಹಬ್‌ಗಳನ್ನು ನಿರ್ಮಾಣ ಮಾಡುವ ಮೂಲಕ ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಒನ್‌ಸ್ಟಾಪ್‌ ಸೇವೆ ನೀಡಲು ಕೇಂದ್ರವೂ ಸಹ ವಿಮಾನಯಾನ ಸಂಸ್ಥೆಗಳಿಗೆ ಪ್ರೋತ್ಸಾಹ ನೀಡುತ್ತಿದೆ. ಅಲ್ಲದೇ ಇದು ದೇಶೀಯವಾಗಿ ಹೆಚ್ಚಿನ ಹೂಡಿಕೆಯನ್ನು ಆಕರ್ಷಿಸುತ್ತದೆ. ಹಾಗೆಯೇ ಟೈರ್‌-1 ಮತ್ತು ಟೈರ್‌-2 ನಗರಗಳಿಗೆ ಏರಿಂಡಿಯಾ ಎಕ್ಸ್‌ಪ್ರೆಸ್‌ ಮೂಲಕ ಸೇವೆ ನೀಡಲು ಕಂಪನಿ ನಿರ್ಧರಿಸಿದೆ ಎಂದು ವರದಿಗಳು ತಿಳಿಸಿವೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮಧುಮೇಹ ಚಿಕಿತ್ಸೆಯಲ್ಲಿ ಹೊಸ ಕ್ರಾಂತಿ: AIIMS ವೈದ್ಯರಿಂದ ಅದ್ಭುತ ಸಾಧನೆ, ಈಗ ಕೇವಲ 2 ಗಂಟೆಯಲ್ಲಿ ಗುಣಪಡಿಸಬಹುದು!
ನದಿ ಸಮೀಪ ಡೆತ್ನೋಟ್ ಬರೆದಿಟ್ಟು ರೇ*ಪ್ ಆರೋಪಿ ಎಸ್ಕೇಪ್: ಆತನಿಗಾಗಿ ನದಿಯಲ್ಲಿ 3 ದಿನ ಹುಡುಕಿದ ಪೊಲೀಸರು