
ನವದೆಹಲಿ(ಮಾ.26) ಏರ್ ಇಂಡಿಯಾ ಹಾಗೂ ನೇಪಾಳ ಏರ್‌ಲೈನ್ಸ್ ಕೂದಲೆಳೆಯುವ ಅಂತರದಲ್ಲಿ ಅಪಘಾತದಿಂದ ಬಚಾವ್ ಆಗಿದೆ. ದೆಹಲಿಯಿಂದ ನೇಪಾಳ ರಾಜಧಾನಿ ಕಾಠ್ಮಂಡುವಿಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ ಹಾಗೂ ಮೇಲಿಷಿಯಾದ ಕೌಲಾಲಾಂಪುರದಿಂ ಕಾಠ್ಮಂಡುವಿನಿಂದ ಆಗಮಿಸುತ್ತಿದ್ದ ವಿಮಾನಏರ್ ಇಂಡಿಯಾ ವಿಮಾನ ಒಂದೇ ಸಮನೇ 19,000 ಅಡಿ ಎತ್ತರಕ್ಕೆ ಹಾರಿದರೆ, ನೇಪಾಳ ಏರ್‌ಲೈನ್ಸ್ 15,000 ಅಡಿ ಕೆಳಕ್ಕೆ ಹಾರಾಟ ನಡೆಸಿ ಅಪಘಾತ ತಪ್ಪಿಸಲಾಗಿದೆ. ಈ ಘಟನೆಗೆ ಕಾರಣರಾದ ಮೂವರು ಅಧಿಕಾರಿಗಳನ್ನು ನೇಪಾಳ ವಿಮಾನ ಸಚಿವಾಲಯ ಅಮಾನತು ಮಾಡಿದೆ.
ಪ್ರಯಾಣದ ನಡುವೆ ಏರ್ ಇಂಡಿಯಾ ಹಾಗೂ ನೇಪಾಳ ಏರ್‌ಲೈನ್ಸ್ ಪೈಲೆಟ್‌ಗೆ ವಾರ್ನಿಂಗ್ ಬಂದಿದೆ. ಎರಡೂ ವಿಮಾನಗಳು ಕಾಕ್‌ಪಿಟ್‌ಗೆ ವಾರ್ನಿಂಗ್ ಸಂದೇಶ ನೀಡಿದೆ. ಹೀಗಾಗಿ ಪೈಲೆಟ್‌ಗಳು ಅಪಘಾತ ತಪ್ಪಿಸಿದ್ದಾರೆ. ನೇಪಾಳ ಕಂಟ್ರೋಲ್ ರೂಂ ಅಧಿಕಾರಿಗಳು ನಿರ್ಲಕ್ಷ್ಯವಹಿಸಿದ ಕಾರಣ ಈ ಘಟನೆಗೆ ಕಾರಣವಾಗಿದೆ.
ದುಬೈನಿಂದ ಭಾರತಕ್ಕೆ ಹಾರುತ್ತಿದ್ದ ವಿಮಾನದಲ್ಲಿ ಕುಡಿದು ಗಲಾಟೆ, ತಾಯ್ನಾಡಿಗೆ ಕಾಲಿಟ್ಟ ತಕ್ಷಣ ಕೈಗೆ ಕೋಳ!
ಒಂದೇ ದಾರಿಯ ವಿರುದ್ಧ ದಿಕ್ಕಿನಲ್ಲಿ ಮತ್ತೊಂದು ವಿಮಾನ ಬರುತ್ತಿರುವುದನ್ನು ರೇಡಾರ್ ಪತ್ತೆ ಹಚ್ಚಿದೆ. ಹೀಗಾಗಿ ಅಲರ್ಟ್ ಸಂದೇಶ ಪಡೆದ ಕೆಲವೇ ಸೆಕೆಂಡ್‌ಗಳಲ್ಲಿ ಪೈಲೆಟ್ಸ್ ಚಾಣಾಕ್ಷ ನಡೆ ಮೂಲಕ ದುರಂತ ತಪ್ಪಿಸಲಾಗಿದೆ. ನೇಪಾಳ ಕಂಟ್ರೋಲ್ ರೂಂ ಅಧಿಕಾರಿಗಳ ನಿರ್ಲಕ್ಷ್ಯ ಮೇಲ್ನೋಟಕ್ಕೆ ಸಾಬೀತಾಗಿದೆ. ಹೀಗಾಗಿ ಮೂವರನ್ನು ಅಮಾನತು ಮಾಡಲಾಗಿದೆ. ಇಷ್ಟೇ ಅಲ್ಲ ಘಟನೆಯ ತನಿಖೆಗೆ ಆದೇಶಿಸಿದೆ.
ಇತ್ತೀಚೆಗಷ್ಟೇ ನೇಪಾಳ ಅತೀ ದೊಡ್ಡ ವಿಮಾನ ದುರಂತಕ್ಕೆ ಸಾಕ್ಷಿಯಾಗಿತ್ತು. 72 ಜನರಿದ್ದ ನೇಪಾಳದ ಯೇತಿ ಏರ್‌ಲೈನ್ಸ್‌ಗೆ ಸೇರಿದ ವಿಮಾನ ನೇಪಾಳದ ಪೋಖರಾ ವಿಮಾನ ನಿಲ್ದಾಣದ ಬಳಿ ಭೀಕರ ಅಪಘಾತಕ್ಕೆ ತುತ್ತಾಗಿತ್ತು. ಈ ದುರ್ಘಟನೆಯಲ್ಲಿ ವಿಮಾನದಲ್ಲಿದ್ದ 68 ಪ್ರಯಾಣಿಕರು, ನಾಲ್ವರು ಸಿಬ್ಬಂದಿ ಸೇರಿ ಎಲ್ಲಾ 72 ಜನರು ಸಾವನ್ನಪ್ಪಿದ್ದರು.
ಬೆಂಗಳೂರು ಇಂಡಿಗೋ ವಿಮಾನದಲ್ಲಿ ಸಿಗರೇಟ್ ಸೇದಿದ ಯುವಕ: ಪ್ರಯಾಣಿಕರ ಜೀವದೊಂದಿಗೆ ಚೆಲ್ಲಾಟ
9ಎನ್-ಎಎನ್‌ಸಿ ಎಟಿಆರ್-72 ವಿಮಾನ ಬೆಳಗ್ಗೆ 10.33ಕ್ಕೆ ರಾಜಧಾನಿ ಕಾಠ್ಮಂಡುವಿನ ತ್ರಿಭುವನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಪ್ರಮುಖ ಪ್ರವಾಸಿ ತಾಣವಾದ ಪೋಖರಾಗೆ ಹೊರಟಿತ್ತು. ಬೆಳಗ್ಗೆ 11 ಗಂಟೆಗೆ ವಿಮಾನ ಇನ್ನೇನು ವಿಮಾನದ ರನ್‌ವೇನತ್ತ ಇಳಿಯಲು ಸಜ್ಜಾಗುತ್ತಿದೆ ಎನ್ನುವ ಹಂತದಲ್ಲಿ, ಇದ್ದಕ್ಕಿದ್ದಂತೆ ವಿಚಿತ್ರ ರೀತಿಯಲ್ಲಿ ಮಗುಚಿಕೊಂಡು ವಿಮಾನ ನಿಲ್ದಾಣದ ಸಮೀಪದಲ್ಲೇ ಇರುವ ಸೇತಿ ನದಿಯ ಕಂದಕದಲ್ಲಿ ಪತನಗೊಂಡಿದೆ. ಲ್ಯಾಂಡಿಂಗ್‌ಗೆ ಕೇವಲ 10-20 ಸೆಕೆಂಡ್ ಇದ್ದಾಗ ಘಟನೆ ಸಂಭವಿಸಿದೆ.ಐವರು ಭಾರತೀಯರು ಸೇರಿದಂತೆ 72 ಮಂದಿಯ ದುರ್ಮರಣಕ್ಕೆ ಕಾರಣವಾದ ಯೇತಿ ಏರ್‌ಲೈನ್ಸ್‌ನ ವಿಮಾನ ಪತನಗೊಂಡ ಸ್ಥಳದಿಂದ ಬ್ಲ್ಯಾಕ್‌ಬಾಕ್ಸ್ ಪತ್ತೆ ಹಚ್ಚಿ ತನಿಖೆ ತೀವ್ರಗೊಳಿಸಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ