ಸ್ನೇಹಿತರ ಜೊತೆ ಸೇರಿ ಕುಡಿದು ರೆಸ್ಟೋರೆಂಟ್‌ನಲ್ಲಿ ಗಲಾಟೆ: ಗಗನಸಖಿಯ ಬಂಧನ

By Suvarna News  |  First Published Aug 14, 2022, 10:42 AM IST

ಗಗನಸಖಿಯೊಬ್ಬರು ಸ್ನೇಹಿತರ ಜೊತೆ ಸೇರಿಕೊಂಡು ಕುಡಿದು ತೂರಾಡಿದ್ದಲ್ಲದೇ ರೆಸ್ಟೋರೆಂಟ್‌ನಲ್ಲಿ ದಾಂಧಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಗಗನಸಖಿಯನ್ನು ಪೊಲೀಸರು ಬಂಧಿಸಿದ್ದಾರೆ.


ಮದ್ಯದ ನಶೆಯೇ ಹಾಗೆ ಹೊಟ್ಟೆ ಸೇರಿದ ಮೇಲೆ ಮದ್ಯ ಕುಡಿದವರಿಗೆ ತಾವು ಏನು ಮಾಡುತ್ತೇವೆ ಎಂಬುದರ ಅರಿವೇ ಇರುವುದಿಲ್ಲ. ಹಾಗೆಯೇ ಇಲ್ಲೊಬ್ಬಳು ಮದ್ಯ ಕುಡಿದು ದಾಂಧಲೆ ನಡೆಸಿದ್ದು, ಈಗ ಕಂಬಿ ಎಣಿಸುವಂತಾಗಿದೆ. ಗಗನಸಖಿಯೊಬ್ಬರು ಸ್ನೇಹಿತರ ಜೊತೆ ಸೇರಿಕೊಂಡು ಕುಡಿದು ತೂರಾಡಿದ್ದಲ್ಲದೇ ರೆಸ್ಟೋರೆಂಟ್‌ನಲ್ಲಿ ದಾಂಧಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಗಗನಸಖಿಯನ್ನು ಪೊಲೀಸರು ಬಂಧಿಸಿದ್ದಾರೆ. ರಾಜಸ್ತಾನದ ಜೈಪುರದ ರೆಸ್ಟೋರೆಂಟ್ ಒಂದರಲ್ಲಿ ಈ ಘಟನೆ ನಡೆದಿದೆ. ಕುಡಿದು ತೂರಾಡುತ್ತಾ ಹೊಟೇಲ್‌ಗೆ ಬಂದ ಗಗನಸಖಿ ಪ್ರಾಚಿ ಸಿಂಗ್ ಹೊಟೇಲ್‌ನಲ್ಲಿದ್ದ ಕುಟುಂಬವೊಂದರ ಜೊತೆ ಗಲಾಟೆ ಆರಂಭಿಸಿದ್ದಾರೆ. ಅಲ್ಲದೇ ಹೊಟೇಲ್‌ನಿಂದ ಹೊರಗೆ ಬಂದ ಆಕೆ ಆ ಕುಟುಂಬಕ್ಕೆ ಸೇರಿದ್ದ ಕಾರೊಂದರ ಮುಂಭಾಗದ ಗಾಜನ್ನು ಬೀರ್ ಬಾಟಲಿಯಿಂದ ಒಡೆದು ಹಾಕಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. 

ಘಟನೆಗೆ ಸಂಬಂಧಿಸಿದಂತೆ ಪ್ರಾಚಿ ಸಿಂಗ್‌, ಆಕೆಯ ಒತಿ ಕಾರ್ತಿಕ್ ಚೌಧರಿ, ವಿಕಾಸ್ ಖಂಡೆಲ್ವಾಲಾ ಹಾಗೂ ನೇಹಾ ಎಂಬುವವರ ವಿರುದ್ಧ ಕುಟುಂಬವೊಂದು ದೂರು ನೀಡಿದ್ದು, ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಅಲ್ಲದೇ ಪೊಲೀಸರು ನಾಲ್ವರನ್ನು ಕೋರ್ಟ್‌ಗೆ ಹಾಜರುಪಡಿಸಿದ್ದು, ಬಳಿಕ ಜಾಮೀನು ನೀಡಿ ಬಿಡುಗಡೆ ಮಾಡಲಾಗಿದೆ ಎಂದು ಸಿಂಧಿ ಕ್ಯಾಂಪ್‌ನ ಎಸ್‌ಹೆಚ್‌ಒ ಗುಂಜನ್ ಸೋನಿ ಮಾಧ್ಯಮಗಳಿಗೆ ತಿಳಿಸಿದರು. ಅಲ್ಲದೇ ವಿರೋಧ ಗುಂಪಿನ ವಿಶಾಲ್ ದುವೆ ಹಾಗೂ ಆರ್ಯಾ ಎಂಬುವವರನ್ನು ಕೂಡ ಪೊಲೀಸರು ಬಂಧಿಸಿ ಜಾಮೀನಿನ ಮೇಲೆ ಬಿಡುಗಡೆಗೊಳಿಸಿದ್ದಾರೆ. ಸಾರ್ವಜನಿಕ ಪ್ರದೇಶದಲ್ಲಿ ಶಾಂತಿ ಕದಡಿದ್ದಕ್ಕಾಗಿ ಅವರನ್ನು ಬಂಧಿಸಲಾಗಿದೆ. ಒಟ್ಟಿನಲ್ಲಿ ಮದ್ಯದ ನಶೆಯಲ್ಲಿ ತೇಲುತ್ತಿದ್ದವರನ್ನು ಪೊಲೀಸರು ಬಂಧಿಸುವ ಮೂಲಕ ಅವರ ಚಳಿ ಬಿಡಿಸಿದ್ದಾರೆ. 

A drunk Air Hostess along with her friends created a ruckus outside the 'Taxi Chick-Inn' restaurant in Sindhi Camp police station area of ​​. pic.twitter.com/gjebdpMen8

— Nikhil Choudhary (@NikhilCh_)

Tap to resize

Latest Videos

ಮದ್ಯದ ಅಮಲು ಮೈಗೇರಿದ ಮೇಲೆ ಏನಾಗುತ್ತಿದೆ ಎಂದು ಹೇಳುವುದು ಕಷ್ಟ. ಅನೇಕರು ಕುಡಿದು ಸಾರ್ವಜನಿಕರಿಗೆ ತೊಂದರೆ ನೀಡಿದ ಹಲವು ಉದಾಹರಣೆಗಳಿವೆ. ಹಾಗೆಯೇ ಕೆಲ ದಿನಗಳ ಹಿಂದೆ ಯುವಕನೋರ್ವ ಕಂಠಪೂರ್ತಿ ಕುಡಿದು ಪೊಲೀಸ್ ಕಾರಿನ ಮೇಲೆ ಏರಿ ಜಾಲಿ ರೈಡ್ ಹೋಗಿದ್ದ ಘಟನೆ ಕಳೆದ ಜೂನ್‌ನಲ್ಲಿ ನಡೆದಿತ್ತು. ಮುತ್ತಿನ ನಗರಿ ಹೈದರಬಾದ್‌ನಲ್ಲಿ ಈ ಘಟನೆ ನಡೆದಿತ್ತು. ಪೊಲೀಸ್‌ ವಾಹನವನ್ನು ಪೊಲೀಸೊಬ್ಬರು ಚಾಲನೆ ಮಾಡುತ್ತಿದ್ದಾರೆ. ಪೊಲೀಸ್ ಕಾರಿನ ಮಧ್ಯದ ಸನ್ ಪ್ರೂಫ್‌ ಒಳಗಿನಿಂದ ಮೇಲೆ ಬಂದ ಈತ ಸೆಲೆಬ್ರಿಟಿಯಂತೆ ಜಾಲಿಯಾಗಿ ಓಡಾಡಿದ್ದಾನೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಮತ್ತೊಂದು ವಿಡಿಯೋದಲ್ಲಿ, ಪೆಟ್ರೋಲ್ ಬಂಕ್‌ ಸಮೀಪ ಪೊಲೀಸ್‌ ವಾಹನದಿಂದ ಇಳಿದ ಯುವಕನನ್ನು ಪೊಲೀಸರು ಪ್ಲಾಸ್ಟಿಕ್ ಲಾಠಿಯಿಂದ ಥಳಿಸುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. 

ಎಲಾನ್ ಮಸ್ಕ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ: ಗಗನಸಖಿ ಬಾಯಿ ಮುಚ್ಚಿಸಲು $2.5 ಮಿಲಿಯನ್ ಸಂದಾಯ?

ಹೈದರಾಬಾದ್‌ನ ಆಸಿಫ್ ನಗರದಲ್ಲಿ ಈ ಘಟನೆ ನಡೆದಿತ್ತು. ಕಾಂಗ್ರೆಸ್ ವಕ್ತಾರ ದಾಸೋಜು ಶ್ರವಣ್ (Dasoju Sravan) ಅವರು ಕೂಡ ಈ ವೀಡಿಯೊವನ್ನು ಟ್ವೀಟ್ ಮಾಡಿದ್ದಾರೆ. ಫ್ರೆಂಡ್ಲಿ ಪೊಲೀಸ್ ಹೆಸರಿನಲ್ಲಿ, ತೆಲಂಗಾಣದಲ್ಲಿ ಈಗ ಪೊಲೀಸರ ಭಯವು ಮಾಯವಾಗಿದೆ. ರೌಡಿಗಳು ಪೊಲೀಸರನ್ನು ಲಘುವಾಗಿ ಪರಿಗಣಿಸುತ್ತಿದ್ದಾರೆ ಎಂದು ವೀಡಿಯೊದಿಂದ ನೋಡಬಹುದಾಗಿದೆ, ಗಾಂಜಾ ಕುಡಿದ ಯುವಕನೋರ್ವ ಪೊಲೀಸ್ ವಾಹನದ ಮೇಲ್ಛಾವಣಿಯ ಮೇಲೆ ಜಾಲಿ ಸವಾರಿ ಮಾಡುತ್ತಿದ್ದಾರೆ ಎಂದು ಅವರು ಬರೆದಿದ್ದಾರೆ. ಅವರು ತಮ್ಮ ಪೋಸ್ಟ್‌ನಲ್ಲಿ ಡಿಜಿಪಿ ಎಂ ಮಹೇಂದರ್ ರೆಡ್ಡಿ (DGP M Mahendar Reddy) ಮತ್ತು ಹೈದರಾಬಾದ್ ಕಮಿಷನರ್ (Hyderabad Commissioner) ಸಿವಿ ಆನಂದ್ (CV Anand) ಅವರನ್ನು ಟ್ಯಾಗ್ ಮಾಡಿದ್ದಾರೆ. 'ಜನಸ್ನೇಹಿ ಪೊಲೀಸ್' ಎಂಬುದು ತೆಲಂಗಾಣ ಪೊಲೀಸ್ ಇಲಾಖೆಯ ಅಡಿಬರಹ ಎಂಬುದು ಗಮನಾರ್ಹ ವಿಚಾರವಾಗಿದೆ. 

ಬೆಂಗಳೂರು: ಕುಡಿದು ಗಲಾಟೆ ಮಾಡ್ಬೇಡ, ಬುದ್ಧಿ ಹೇಳಿದವರಿಗೆ ಇದೆಂಥಾ ಅವಸ್ಥೆ

click me!