ನಟ ​ಸು​ಶಾಂತ್‌ದು ಕೊಲೆ: ಏಮ್ಸ್‌ ವೈದ್ಯನ ಆಡಿಯೋದಿಂದ ಕೇಸ್‌ಗೆ ಬಿಗ್ ಟ್ವಿಸ್ಟ್!

By Suvarna News  |  First Published Oct 6, 2020, 12:25 PM IST

ನಟ ​ಸು​ಶಾಂತ್‌ದು ಕೊಲೆ| ಏಮ್ಸ್‌ ವೈದ್ಯನ ಟೇಪ್‌?| ಆಡಿಯೋದಿಂದ ಭಾರಿ ಸಂಚಲನ


ನವ​ದೆ​ಹ​ಲಿ(ಆ.06): ‘ಬಾಲಿವುಡ್‌ ನಟ ಸುಶಾಂತ್‌ ಸಿಂಗ್‌ ರಜಪೂತ್‌ ಅವರದ್ದು ಕೊಲೆಯಲ್ಲ, ಆತ್ಮಹತ್ಯೆ’ ಎಂದು ಇತ್ತೀಚೆಗಷ್ಟೇ ಸಿಬಿಐಗೆ ವರದಿ ನೀಡಿದ್ದ ಏಮ್ಸ್‌ ಆಸ್ಪತ್ರೆಯ ಹಿರಿಯ ವಿಧಿವಿಜ್ಞಾನ ವೈದ್ಯ ಡಾ| ಸುಧೀರ್‌ ಗುಪ್ತಾ ಅವರದ್ದು ಎನ್ನಲಾದ ಆಡಿಯೋ ಟೇಪ್‌ವೊಂದು ಬಹಿರಂಗವಾಗಿದೆ. ಅದರಲ್ಲಿ ಸುಧೀರ್‌ ಅವರು ‘ಸು​ಶಾಂತ್‌ ಕೊಲೆ ಆಗಿ​ದ್ದಾ​ರೆ’ ಎಂದಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಆಡಿಯೋ ಟೇಪ್‌ ಭಾರಿ ಸಂಚಲನಕ್ಕೆ ಕಾರಣವಾಗಿದೆ.

‘ಸು​ಶಾಂತ್‌ ಆತ್ಮ​ಹತ್ಯೆ ಮಾಡಿ​ಕೊಂಡಿಲ್ಲ. ಕೊಲೆ​ಯಾ​ಗಿ​ದ್ದಾ​ರೆ’ ಎಂದು ಸುಧೀರ್‌ ಹೇಳಿರುವುದು ಆಡಿಯೋ ಟೇಪ್‌ನಲ್ಲಿ ಕೇಳಿಸುತ್ತದೆ, ಸುಶಾಂತ್‌ ಅವರ ಮೃತ​ದೇ​ಹದ ಫೋಟೋ​ಗ​ಳನ್ನು ನೋಡಿ ಗುಪ್ತಾ ಈ ಮಾತು​ಗ​ಳನ್ನು ಆಡಿ​ದ್ದಾರೆ ಎಂದು ಕೆಲವು ಟೀವಿ ಚಾನೆ​ಲ್‌​ಗಳು ವರದಿ ಮಾಡಿ​ವೆ.

Tap to resize

Latest Videos

ಇದರ ಬೆನ್ನಲ್ಲೇ ಸುಶಾಂತ್‌ ಕುಟುಂಬ ಹಾಗೂ ವಕೀ​ಲರು, ‘ಹೊಸ ವಿಧಿವಿಜ್ಞಾನ ತಂಡ​ವನ್ನು ಸಿಬಿಐ ರಚಿ​ಸ​ಬೇ​ಕು. ಹೊಸ​ದಾಗಿ ಸುಶಾಂತ್‌ ಮರ​ಣೋ​ತ್ತರ ತಪಾ​ಸಣೆ ನಡೆ​ಸ​ಬೇಕು’ ಎಂದು ಆಗ್ರ​ಹಿ​ಸಿ​ದ್ದಾರೆ. ಸುಶಾಂತ್‌ ಅವರದ್ದು ಕೊಲೆ ಇದು ದೂರಿದ್ದಾರೆ. ಈ ನಡುವೆ, ಸಿಬಿಐಗೆ ವರದಿ ಸಲ್ಲಿಸಿಯಾಗಿದೆ. ಅಲ್ಲಿಂದ ವರದಿ ಪಡೆದುಕೊಳ್ಳಬಹುದು ಎಂದು ಏಮ್ಸ್‌ ತಿಳಿಸಿದೆ.

click me!