ಒಂದೇ ದಿನ ತಿರುಪತಿ ದೇಗುಲದ ಹುಂಡಿಗೆ 2 ಕೋಟಿ ರೂ ದೇಣಿಗೆ!

Published : Oct 06, 2020, 10:10 AM IST
ಒಂದೇ ದಿನ ತಿರುಪತಿ ದೇಗುಲದ ಹುಂಡಿಗೆ 2 ಕೋಟಿ ರೂ ದೇಣಿಗೆ!

ಸಾರಾಂಶ

ಒಂದೇ ದಿನ ತಿರುಪತಿ ದೇಗುಲದ ಹುಂಡಿಗೆ 2 ಕೋಟಿ ದೇಣಿಗೆ| ಲಾಕ್‌ಡೌನ್‌ ಬಳಿಕ ತೆರೆದ ದೇವಾಲಯದಲ್ಲಿ ಇಷ್ಟೊಂದು ದೇಣಿಗೆ ಬಂದಿದ್ದು ಇದೇ ಮೊದಲು

 

ತಿರುಪತಿ(ಅ.06): ತಿರುಮಲ ವೆಂಕಟೇಶ್ವರ ದೇವಾಲಯದ ಹುಂಡಿಗೆ ಕಳೆದ ಶನಿವಾರ (ಅ.3) ಒಂದೇ ದಿನ ಬರೋಬ್ಬರಿ 2.14 ಕೋಟಿ ರು. ದೇಣಿಗೆ ಬಂದಿದೆ.
 

ಕೊರೋನಾ ಹಿನ್ನೆಲೆಯಲ್ಲಿ ಮುಚ್ಚಿದ್ದ ದೇವಸ್ಥಾನ ಭಕ್ತಾದಿಗಳಿಗೆ ತೆರೆದ ನಂತರದಲ್ಲಿ ಒಂದೇ ದಿನ ಇಷ್ಟೊಂದು ಆದಾಯ ಬಂದಿರುವುದು ಇದೇ ಮೊದಲು ಎಂದು ಸೋಮವಾರ ತಿರುಮಲ ತಿರುಪತಿ ದೇವಸ್ಥಾನ ಮಂಡಳಿ(ಟಿಟಿಡಿ) ತಿಳಿಸಿದೆ.

ಲಾಕ್‌ಡೌನ್‌ ಪೂರ್ವದಲ್ಲಿ ಪ್ರತಿನಿತ್ಯ ತಿರುಪತಿ ಹುಂಡಿಗೆ ಸರಾಸರಿ 3 ಕೋಟಿ ರು.ಗೂ ಅಧಿಕ ಹಣ ಬರುತ್ತಿತ್ತು. ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಮುಚ್ಚಿದ್ದ ದೇವಾಲಯವನ್ನು ಜೂನ್‌ 11ರಿಂದ ತೆರೆಯಲಾಗಿದೆ. ಸೆ.6ರಂದು ಹುಂಡಿ ಆದಾಯ 1 ಕೋಟಿ ತಲುಪಿತ್ತು.

ಲಾಕ್‌ಡೌನ್‌ ನಿರ್ಬಂಧಗಳ ತೆರವಿನ ಬಳಿಕ ಸಂದಾಯವಾದ ಅತಿ ಹೆಚ್ಚು ಹುಂಡಿ ಆದಾಯ ಆದಾಗಿತ್ತು. ಬಳಿಕ ಸೆ.9, 10 ಮತ್ತು 13 ಹಾಗೂ 14ರಂದು ಹುಂಡಿಗೆ ಭಕ್ತರಿಂದ 1 ಕೋಟಿ ದೇಣಿಗೆ ಸಂದಾಯವಾಗಿತ್ತು. ಅ.3ರಂದು ದೇವಾಲಯಕ್ಕೆ 20,228 ಭಕ್ತರು ಆಗಮಿಸಿ 2.14 ಕೋಟಿ ದೇಣಿಗೆ ನೀಡಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

India Latest News Live: ನಾವು ದೇಶಕ್ಕಾಗಿ, ನೀವು ಚುನಾವಣೆಗಾಗಿ: ಬಿಜೆಪಿ. ಮೋದಿ ವಿರುದ್ದ ಪ್ರಿಯಾಂಕಾ ಗಾಂಧಿ ವಾಗ್ದಾಳಿ
18 ದಿನದಲ್ಲಿ 10 ಲಕ್ಷ ಪ್ರಯಾಣಿಕರ ಇಂಡಿಗೋ ಟಿಕೆಟ್‌ ರದ್ದು