ಏರ್‌ ಇಂಡಿಯಾ ವಿಮಾನ ಅಪಘಾತದಲ್ಲಿ ಮೃತಪಟ್ಟ ಕೆನಡಾದ ಏಕೈಕ ಪ್ರಜೆ, ಭಾರತೀಯ ಮೂಲದ ದಂತವೈದ್ಯೆ!

Published : Jun 13, 2025, 04:55 PM IST
Nirali Patel

ಸಾರಾಂಶ

ಟೊರೊಂಟೊದ ಎಟೋಬಿಕೋಕ್‌ನಲ್ಲಿ ವಾಸಿಸುತ್ತಿದ್ದ 32 ವರ್ಷದ ನಿರಾಲಿ ಪಟೇಲ್ ಅವರು ಸೋಶಿಯಲ್‌ ಟ್ರಿಪ್‌ ಮುಗಿಸಿ ಕೆನಡಾಕ್ಕೆ ಹಿಂತಿರುಗುತ್ತಿದ್ದಾಗ ಅಪಘಾತ ಸಂಭವಿಸಿದೆ ಎಂದು ಸಿಟಿವಿ ನ್ಯೂಸ್ ಟೊರೊಂಟೊ ವರದಿ ಮಾಡಿದೆ. 

ಒಟ್ಟಾವ (ಜೂ.13): ಅಹಮದಾಬಾದ್‌ನಲ್ಲಿ ನಡೆದ ಏರ್‌ ಇಂಡಿಯಾ ವಿಮಾನ ಅಪಘಾತದಲ್ಲಿ ಸಾವನ್ನಪ್ಪಿದ ಏಕೈಕ ಕೆನಡಾದ ಪ್ರಜೆ ಭಾರತೀಯ ಮೂಲದ ದಂತವೈದ್ಯೆ ನಿರಾಲಿ ಪಟೇಲ್ ಎಂದು ಕೆನಡಾದ ಮಾಧ್ಯಮಗಳು ವರದಿ ಮಾಡಿವೆ. ಟೊರೊಂಟೊದ ಎಟೋಬಿಕೋಕ್‌ನಲ್ಲಿ ವಾಸಿಸುತ್ತಿದ್ದ 32 ವರ್ಷದ ನಿರಾಲಿ ಪಟೇಲ್, ಭಾರತದಲ್ಲಿ ಸೋಶಿಯಲ್‌ ಟ್ರಿಪ್‌ ಮುಗಿಸಿ ಕೆನಡಾಕ್ಕೆ ಹಿಂತಿರುಗುತ್ತಿದ್ದಾಗ ಈ ದುರದೃಷ್ಟಕರ ಅಪಘಾತ ಸಂಭವಿಸಿದೆ ಎಂದು ಸಿಟಿವಿ ನ್ಯೂಸ್ ಟೊರೊಂಟೊ ಗುರುವಾರ ವರದಿ ಮಾಡಿದೆ.

ನಿರಾಲಿಯ ಪತಿ ತಮ್ಮ ಒಂದು ವರ್ಷದ ಮಗುವಿನೊಂದಿಗೆ ಭಾರತಕ್ಕೆ ಪ್ರಯಾಣಿಸಲು ಯೋಜಿಸುತ್ತಿದ್ದಾರೆ ಎಂದು ವರದಿಯಾಗಿದೆ. 242 ಪ್ರಯಾಣಿಕರು ಮತ್ತು ಸಿಬ್ಬಂದಿಯನ್ನು ಹೊತ್ತ ಲಂಡನ್‌ಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ ಗುರುವಾರ ಅಹಮದಾಬಾದ್‌ನ ವಸತಿ ಪ್ರದೇಶದಲ್ಲಿ ಪತನಗೊಂಡಿತ್ತು. ಟೇಕ್ ಆಫ್ ಆದ ಕೆಲವೇ ನಿಮಿಷಗಳಲ್ಲಿ 241 ಜನರು ಸಾವನ್ನಪ್ಪಿದರು. ಇದು ಭಾರತದ ಅತ್ಯಂತ ಭೀಕರ ವಾಯು ದುರಂತಗಳಲ್ಲಿ ಒಂದಾಗಿದೆ.

ವಿಮಾನದಲ್ಲಿ 12 ಸಿಬ್ಬಂದಿಗಳ ಜೊತೆಗೆ 169 ಭಾರತೀಯರು, 53 ಬ್ರಿಟಿಷರು, ಒಬ್ಬ ಕೆನಡಿಯನ್ ಮತ್ತು ಏಳು ಪೋರ್ಚುಗೀಸ್ ಪ್ರಜೆಗಳಿದ್ದರು. ಈ ದುರಂತದಲ್ಲಿ ಒಬ್ಬ ವ್ಯಕ್ತಿ ಪವಾಡಸದೃಶ್ಯವಾಗಿ ಬದುಕುಳಿದಿದ್ದಾರೆ.

"ಇದು ಸಂಪೂರ್ಣವಾಗಿ ಆಘಾತಕಾರಿ. ಈ ದುಃಖಕ್ಕೆ ಯಾವುದೇ ಪದಗಳಿಲ್ಲ" ಎಂದು ಕುಟುಂಬವನ್ನು ತಿಳಿದಿರುವ ವ್ಯಕ್ತಿ ಡಾನ್ ಪಟೇಲ್ ಸಿಟಿವಿ ನ್ಯೂಸ್‌ಗೆ ತಿಳಿಸಿದ್ದಾರೆ.

ನಿರಾಲಿ ನಾಲ್ಕು ಅಥವಾ ಐದು ದಿನಗಳ ಕಾಲ ಭಾರತಕ್ಕೆ ಭೇಟಿ ನೀಡಿದ್ದರು. ಆಕೆಯ ಪೋಷಕರು, ಸಹೋದರ ಮತ್ತು ಅತ್ತಿಗೆ ಬ್ರಾಂಪ್ಟನ್‌ನಲ್ಲಿ ವಾಸಿಸುತ್ತಿದ್ದಾರೆ ಎಂದು ಡಾನ್ ಮಾಹಿತಿ ನೀಡಿದ್ದಾರೆ. ಸುದ್ದಿ ಹೊರಬಿದ್ದ ಕೂಡಲೇ ತನ್ನ ಸಹೋದರನೊಂದಿಗೆ "ತುಂಬಾ ಸಂಕ್ಷಿಪ್ತವಾಗಿ" ಮಾತನಾಡಿದ್ದು, "ಅವರು ಆಘಾತಕ್ಕೊಳಗಾಗಿದ್ದರು ಮತ್ತು ಹೆಚ್ಚು ಮಾತನಾಡಲು ಸಾಧ್ಯವಾಗಲಿಲ್ಲ" ಎಂದು ಹೇಳಿದರು. ಪಟೇಲ್ ಮಿಸ್ಸಿಸೌಗಾ ದಂತ ಚಿಕಿತ್ಸಾಲಯದಲ್ಲಿ ಕೆಲಸ ಮಾಡಿದರು ಮತ್ತು 2016 ರಲ್ಲಿ ಭಾರತದಲ್ಲಿ ದಂತ ಪದವಿ ಪಡೆದರು ಮತ್ತು ನಂತರ 2019 ರಲ್ಲಿ ಕೆನಡಾದಲ್ಲಿ ಅವರ ಲೈಸೆನ್ಸ್‌ಅನ್ನು ಪಡೆದರು ಎಂದು ವರದಿ ತಿಳಿಸಿದೆ.

ಈ ದುರಂತ ಅಪಘಾತದಲ್ಲಿ ಪಟೇಲ್ ಅವರ ನಿಧನಕ್ಕೆ ಒಂಟಾರಿಯೊ ಪ್ರೀಮಿಯರ್ ಡೌಗ್ ಫೋರ್ಡ್ ಸಂತಾಪ ಸೂಚಿಸಿದ್ದಾರೆ. "ಅಹಮದಾಬಾದ್ ಬಳಿ ನಡೆದ ಏರ್ ಇಂಡಿಯಾ ದುರಂತದಲ್ಲಿ ಸಾವನ್ನಪ್ಪಿದವರಲ್ಲಿ ಒಂಟಾರಿಯೊದ ಮಿಸ್ಸಿಸೌಗಾದ ಕೆನಡಾದ ಪ್ರಜೆಯೂ ಒಬ್ಬರು ಎಂದು ತಿಳಿದು ನನಗೆ ಬೇಸರವಾಯಿತು. ಒಂಟಾರಿಯೊ ಜನರ ಪರವಾಗಿ, ಪ್ರತಿಯೊಬ್ಬ ಸಂತ್ರಸ್ಥನ ಕುಟುಂಬಗಳು ಮತ್ತು ಪ್ರೀತಿಪಾತ್ರರಿಗೆ ನನ್ನ ಆಳವಾದ ಸಂತಾಪವನ್ನು ವ್ಯಕ್ತಪಡಿಸುತ್ತೇನೆ" ಎಂದು ಫೋರ್ಡ್ ಗುರುವಾರ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ಇದಕ್ಕೂ ಮೊದಲು, ಕೆನಡಾದ ಪ್ರಧಾನಿ ಮಾರ್ಕ್ ಕಾರ್ನಿ ಅವರು ವಿಮಾನ ಅಪಘಾತದ ಹಾಗೂ ಅದರಲ್ಲಿ ಕೆನಡಾದ ಒಬ್ಬ ಪ್ರಜೆಯೂ ಇದ್ದದ್ದು ಕೇಳಿ ಬೇಸರವಾಗಿದೆ ಎಂದು ಹೇಳಿದರು.

ವಿದೇಶಾಂಗ ಸಚಿವೆ ಅನಿತಾ ಆನಂದ್ ಕೂಡ ಪ್ರತಿಕ್ರಿಯೆ ನೀಡಿದ್ದು, "ಕೆನಡಾ ನಮ್ಮ ಅಂತರರಾಷ್ಟ್ರೀಯ ಪಾಲುದಾರರೊಂದಿಗೆ ನಿಕಟ ಸಂಪರ್ಕದಲ್ಲಿದೆ. ಈ ದುರಂತದಲ್ಲಿ ಮಡಿದವರ ಕುಟುಂಬಗಳು ಮತ್ತು ಪ್ರೀತಿಪಾತ್ರರೊಂದಿಗೆ ನನ್ನ ಸಂತಾಪಗಳು ಇವೆ" ಎಂದು ಅವರು X ನಲ್ಲಿ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಪುಟಿನ್ ಭಾರತ ಭೇಟಿಯಿಂದ ಹೊಸ ಚರಿತ್ರೆಗೆ ಮುನ್ನುಡಿ, ಕೆಲ ರಾಷ್ಟ್ರಗಳಿಗೆ ಟೆನ್ಶನ್
ಪುಟಿನ್ ಔತಣಕೂಟಕ್ಕೆ ರಾಹುಲ್ ಗಾಂಧಿ-ಖರ್ಗೆಗಿಲ್ಲ ಆಮಂತ್ರಣ, ಶಶಿ ತರೂರ್‌ಗೆ ಜಾಕ್‌ಪಾಟ್