ಪ್ರಧಾನಿ ನರೇಂದ್ರ ಮೋದಿಗೆ ಸೆಂಗೋಲ್‌ ಹಸ್ತಾಂತರಿಸಿದ ಅಧೀನಂ ಪೀಠ!

By Santosh NaikFirst Published May 27, 2023, 10:18 PM IST
Highlights

ನೂತನ ಸಂಸತ್ ಭವನದ ಉದ್ಘಾಟನೆಯ ಮುನ್ನಾದಿನದಂದು ಅಧೀನಂ ಮಠದ ಸ್ವಾಮಿಗಳು ಪವಿತ್ರ ರಾಜದಂಡ 'ಸೆಂಗೊಲ್' ಅನ್ನು ಪ್ರಧಾನಿ ನರೇಂದ್ರ ಮೋದಿಯವರಿಗೆ ಹಸ್ತಾಂತರಿಸಿದರು. 
 

ನವದೆಹಲಿ (ಮೇ.27): ಹೊಸ ಸಂಸತ್‌ ಭವನದ ಉದ್ಘಾಟನೆಗೂ ಒಂದು ದಿನ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರು ಅಧೀನಂ ಪೀಠದ ಸ್ವಾಮಿಗಳನ್ನು ಭೇಟಿ ಮಾಡಿ ಅವರ ಆಶೀರ್ವಾದ ಪಡೆದುಕೊಂಡರು. ಈ ವೇಳೆ ಹೊಸ ಸಂಸತ್ತಿನಲ್ಲಿ ಸ್ಪೀಕರ್ ಆಸನದ ಪಕ್ಕದಲ್ಲಿ ಇಡಲಾಗುವ ರಾಜದಂಡ ಅಥವಾ ಸೆಂಗೋಲ್‌ಅನ್ನು ಪ್ರಧಾನಿ ನರೇಂದ್ರ ಮೋದಿಗೆ ಅವರಿಗೆ ಹಸ್ತಾಂತರ ಮಾಡಲಾಯಿತು. ಅಧೀನಂ ಪೀಠದ ಸ್ವಾಮಿಗಳು ಪ್ರಧಾನಿಗೆ ವಿಶೇಷ ಉಡುಗೊರೆಯನ್ನೂ ಈ ವೇಳೆ ನೀಡಿದರು. ಈ ವೇಳೆ ಸ್ವಾಮೀಜಿಗಳನ್ನು ಉದ್ದೇಶಿಸಿ ಮಾತನಾಡಿದ ಮೋದಿ, ನಿಮ್ಮೆಲ್ಲರಿಗೂ ನಮಸ್ಕರಿಸುತ್ತೇನೆ. ನೀವು ನನ್ನ ನಿವಾಸಕ್ಕೆ ಬಂದಿರುವುದು ನನ್ನ ಅದೃಷ್ಟ. ಇದು ಶಿವನ ಆಶೀರ್ವಾದದಿಂದಾಗಿ ನಾನು ಶಿವಭಕ್ತರಾದ ನಿಮ್ಮ ದರ್ಶನಕ್ಕೆ ಅವಕಾಶವನ್ನು ಪಡೆಯುತ್ತಿದ್ದೇನೆ ಎಂದು ಹೇಳಿದರು.ಬೆಳ್ಳಿ ಮತ್ತು ಚಿನ್ನದಿಂದ ಮಾಡಲ್ಪಟ್ಟ, ಐದು ಅಡಿ ಉದ್ದದ ರಾಜದಂಡವನ್ನು ಲಾರ್ಡ್ ಮೌಂಟ್ ಬ್ಯಾಟನ್ ಅವರು 1947ರ ಆಗಸ್ಟ್ 14 ರಂದು ಪಂಡಿತ್ ಜವಾಹರಲಾಲ್ ನೆಹರೂ ಅವರಿಗೆ ಅಧಿಕಾರದ ಹಸ್ತಾಂತರದ ಸಂಕೇತವಾಗಿ ಹಸ್ತಾಂತರಿಸಿದರು ಎಂದು ಸರ್ಕಾರ ಹೇಳಿದೆ.  ಹಿಂದಿನ ತಮಿಳು ಸಾಮ್ರಾಜ್ಯಗಳಲ್ಲಿ ಆಡಳಿತದ ಸಂಕೇತವಾದ ಸೆಂಗೋಲ್ ಅನ್ನು ಪಡೆದುಕೊಂಡಿದ್ದ ಅಂದಿನ ಪ್ರಧಾನಿ ಜವಾಹರಲಾಲ್‌ ನೆಹರು ಅದನ್ನು, ಅಲಹಾಬಾದ್ ಮ್ಯೂಸಿಯಂನಲ್ಲಿ ಇರಿಸಿದ್ದರು. ಐತಿಹಾಸಿಕವಾಗಿ ವಿಶೇಷವಾಗಿದ್ದ ಈ ರಾಜದಂಡವನ್ನು ಮ್ಯೂಸಿಯಂನಲ್ಲಿ ನೆಹರು ಅವರಿಗೆ ಉಡುಗೊರೆಯಾಗಿ ಸಿಕ್ಕ ವಾಕಿಂಗ್‌ ಸ್ಟಿಕ್‌ ಎಂದು ಬರೆದು ಗಾಜಿನ ಬಾಕ್ಸ್‌ನಲ್ಲಿ ಇಡಲಾಗಿತ್ತು.

ಇನ್ನು ಸಂಸತ್‌ ಭವನದಲ್ಲಿ ರಾಜದಂಡವನ್ನು ಪ್ರತಿಷ್ಠಾಪನರ ಮಾಡುವ ಕುರಿತು ರಾಜಕೀಯ ವಿವಾದವೂ ಏರ್ಪಟ್ಟಿದೆ. ಭಾರತದ ಸ್ವಾತಣತ್ರ್ಯದ ಸಂದರ್ಭದಲ್ಲಿ ಅಧಿಕಾರದ ಹಸ್ತಾಂತರವನ್ನು ಸಂಕೇತಿಸಲು ಇದನ್ನು ಬಳಸಲಾಗಿದೆ ಎಂದು ಸರ್ಕಾರ ಹೇಳಿರುವ ಮಾತನ್ನು ಕಾಂಗ್ರೆಸ್‌ ಪ್ರಶ್ನೆ ಮಾಡಿದೆ. ಆದರೆ, ಭಾರತೀಯ ಜನತಾ ಪಕ್ಷ ಮಾತ್ರ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದು, ಕಾಂಗ್ರೆಸ್‌ ಎಂದಿಗೂ ಭಾರತದ ಸಂಸ್ಕೃತಿಯನ್ನು ಇಷ್ಟಪಟ್ಟಿಲ್ಲ ಎಂದು ತಿವಿದಿದೆ.

ಬಿಜೆಪಿಯ ಮಾತನ್ನು ಕಾಂಗ್ರೆಸ್‌ ಟೀಕಿಸಿದ್ದು, ರಾಜದಂಡವನ್ನು ಮದ್ರಾಸ್‌ನಲ್ಲಿ ರಚಿಸಲಾಗಿದೆ ಮತ್ತು 1947 ರಲ್ಲಿ ನೆಹರೂಗೆ ನೀಡಲಾಯಿತು, ಆದರೆ ಸ್ವಾತಂತ್ರ್ಯ ಚಳುವಳಿ ಅಥವಾ ಭಾರತದ ಸ್ವಾತಂತ್ರ್ಯಕ್ಕೆ ಯಾವುದೇ ಸಂಬಂಧವಿಲ್ಲ ಎಂದು ಹೇಳಿದೆ.

ಶನಿವಾರ ತಮ್ಮ ನಿವಾಸದಲ್ಲಿ ಸೆಂಗೋಲ್‌ ಸ್ವೀಕರಿಸಿ ಮಾತನಾಡಿದ ಪ್ರಧಾನಿ ಮೋದಿ, 'ಐತಿಹಾಸಿಕ ಸೆಂಗೋಲ್‌ಗೆ ಸ್ವಾತಂತ್ರ್ಯದ ಬಳಿಕ ಇದಕ್ಕೆ ಸಿಗಬೇಕಾದ ಗೌರವ ಸಿಕ್ಕಿದೆ. ಆದರೆ, ಪ್ರಯಾಗ್‌ರಾಜ್‌ನ ಆನಂದ ಭವನದಲ್ಲಿ ಇದನ್ನು ವಾಕಿಂಗ್‌ ಸ್ಟಿಕ್‌ ಎಂದು ಪ್ರದರ್ಶನಕ್ಕೆ ಇಡಲಾಗಿತ್ತು. ಆದರೆ, ನಿಮ್ಮ ಸೇವಕ ಹಾಗೂ ನಮ್ಮ ಸರ್ಕಾರ ಇದನ್ನು ಆನಂದ ಭವನದಿಂದ ಹೊರತಂದಿದೆ' ಎಂದು ಹೇಳಿದ್ದಾರೆ. ಭಾರತದ ಶ್ರೇಷ್ಠ ಸಂಪ್ರದಾಯದ ಪ್ರತೀಕವಾದ ಸೆಂಗೊಲ್ ಅನ್ನು ಹೊಸ ಸಂಸತ್ತಿನ ಕಟ್ಟಡದಲ್ಲಿ ಸ್ಥಾಪಿಸಲು ನನಗೆ ಸಂತೋಷವಾಗಿದೆ. ನಾವು ಕರ್ತವ್ಯದ ಹಾದಿಯಲ್ಲಿ ನಡೆಯಬೇಕು ಮತ್ತು ಸಾರ್ವಜನಿಕರಿಗೆ ಉತ್ತರಿಸಬೇಕು ಎಂದು ಈ ಸೆಂಗೋಲ್ ನಮಗೆ ನೆನಪಿಸುತ್ತಲೇ ಇರುತ್ತದೆ ಎಂದಿದ್ದಾರೆ.

| Delhi | Ahead of the inauguration ceremony of , PM Narendra Modi meets the Adheenams at his residence and takes their blessings. The Adheenams handover the to the Prime Minister. pic.twitter.com/0eEaJUAX58

— ANI (@ANI)

Historic Sceptre Sengol: ಕಾಂಗ್ರೆಸ್‌ ಮರೆತಿದ್ದ ರಾಜದಂಡವನ್ನು ಹೊಸ ಸಂಸತ್ತಿನಲ್ಲಿ ಇಡಲಿರುವ ಪ್ರಧಾನಿ ಮೋದಿ!

ಭಾರತ ಎಷ್ಟು ಒಗ್ಗಟ್ಟಾಗಿದೆಯೋ ಅಷ್ಟು ಬಲಿಷ್ಠವಾಗುತ್ತದೆ. ನಮ್ಮ ಅಭಿವೃದ್ಧಿಯ ಹಾದಿಯಲ್ಲಿ ಅಡೆತಡೆಗಳನ್ನು ಸೃಷ್ಟಿಸುವವರು ವಿವಿಧ ಸವಾಲುಗಳನ್ನು ಒಡ್ಡುತ್ತಾರೆ. ಭಾರತದ ಪ್ರಗತಿಯನ್ನು ಸಹಿಸಲಾಗದವರು ನಮ್ಮ ಏಕತೆಯನ್ನು ಮುರಿಯಲು ಪ್ರಯತ್ನಿಸುತ್ತಾರೆ. ಆದರೆ ನಿಮ್ಮ ಸಂಘಟನೆಗಳಿಂದ ರಾಷ್ಟ್ರವು ಪಡೆಯುತ್ತಿರುವ ಆಧ್ಯಾತ್ಮಿಕತೆಯ ಶಕ್ತಿಯು ಎಲ್ಲಾ ಸವಾಲುಗಳನ್ನು ಎದುರಿಸಲು ನಮಗೆ ಸಹಾಯ ಮಾಡುತ್ತದೆ ಎಂದು ನಾನು ನಂಬುತ್ತೇನೆ, ”ಎಂದು ಪ್ರಧಾನಿ ಮೋದಿ ಅಧೀನಂ ಪೀಠದ ಕುರಿತಾಗಿ (Narendra Modi)  ಹೇಳಿದ್ದಾರೆ.

Latest Videos

New Parliament Building: ಜಗತ್ತಿನ ಬೃಹತ್‌ ಪ್ರಜಾಪ್ರಭುತ್ವ ದೇಗುಲದ ಒಳನೋಟ!

click me!