ಗ್ವಾಲಿಯರ್‌ಗೆ ಬರುತ್ತಿದ್ದಂತೆ ಇಬ್ಬರು ಮಕ್ಕಳನ್ನು ಪೋಷಕರು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ಇಬ್ಬರು ಮೃತರಾಗಿರೋದನ್ನು ವೈದ್ಯರು ಖಚಿತಪಡಿಸಿದ್ದಾರೆ. ಹೀಟ್‌ಸ್ಟ್ರೋಕ್‌ನಿಂದ ಮಕ್ಕಳು ಮೃತರಾಗಿರೋದನ್ನು ವೈದ್ಯರು ದೃಢಪಡಿಸಿದ್ದಾರೆ.
ಭೋಪಾಲ್: ಗ್ವಾಲಿಯರ್-ಚಂಬಲ್ ಪ್ರದೇಶದಲ್ಲಿ (Gwalior-Chambal region) ಅತಿಯಾದ ಬಿಸಿಲು (Heat Stroke) 12 ಮತ್ತು 15ನೇ ವಯಸ್ಸಿನ ಇಬ್ಬರು ಮಕ್ಕಳನ್ನು (Children Death) ಬಲಿ ಪಡೆದುಕೊಂಡಿದ್ದಾರೆ. ಭಾರತದ ಉತ್ತರ ಭಾಗದಲ್ಲಿ ತಾಪಮಾನ (Extreme Heat) ಪ್ರತಿದಿನ ಹೊಸ ದಾಖಲೆಗಳನ್ನು ಬರೆಯುತ್ತಿದೆ. ಬಿಸಿಯಾದ ಗಾಳಿ, ಅತಿಯಾದ ಶಾಖದಿಂದ ಜನರು ಸಾವನ್ನಪ್ಪುತ್ತಿರೋದು ಆತಂಕವನ್ನುಂಟು ಮಾಡುತ್ತಿದೆ. ದೆಹಲಿಯಲ್ಲಿ ಸೂರ್ಯದೇವ ಅರ್ಧ ಶತಕ ಬರೆಯುವ ಮೂಲಕ ದಾಖಲೆ ಬರೆದಿದ್ದಾನೆ. ಮಧ್ಯಪ್ರದೇಶದ ಗ್ವಾಲಿಯರ್-ಚಂಬಲ್ ಪ್ರದೇಶದಲ್ಲಿ ಕಳೆದ 15 ದಿನಗಳಿಂದ 47 ಡಿಗ್ರಿ ಸೆಲ್ಸಿಯಸ್‌ಗೂ ಅಧಿಕ ತಾಪಮಾನ ದಾಖಲಾಗುತ್ತಿದೆ. ಅತಿಯಾದ ಬಿಸಿಲಿಗೆ ಬುಧವಾರ ಇಬ್ಬರು ಮಕ್ಕಳು ಸಾವನ್ನಪ್ಪಿದ್ದಾರೆ. ಸೋಮವಾರ ಮತ್ತು ಮಂಗಳವಾರ ತಲಾ ಒಬ್ಬರು ಮೃತರಾದ್ರೆ, ಆಟೋ ಚಾಲಕನೋರ್ವನನ್ನು (Auto Driver Death) ನಡುರಸ್ತೆಯಲ್ಲಿ ಸೂರ್ಯನ ಶಾಖ ಬಲಿ ಪಡೆದುಕೊಂಡಿದೆ.
ಗ್ವಾಲಿಯರ್-ಚಂಬಲ್ ಪ್ರದೇಶದಲ್ಲಿ ತಾಪಮಾನವು 48 ಡಿಗ್ರಿ ಸೆಲ್ಸಿಯಸ್‌ಗೂ ಅಧಿಕವಾಗಬಹುದು. ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೂ ಮನೆಯಿಂದ ಹೊರ ಬರದಂತೆ ಹವಾಮಾನ ತಜ್ಞರು (Meteorologists predict) ಸಲಹೆ ನೀಡಿದ್ದಾರೆ. ಅದರಲ್ಲಿಯೂ ಹಿರಿಯರು ಮತ್ತು ಮಕ್ಕಳ ಬಗ್ಗೆ ಹೆಚ್ಚು ಕಾಳಜಿ ತೆಗೆದುಕೊಳ್ಳಬೇಕು ಎಂದು ಆರೋಗ್ಯ ಇಲಾಖೆ ಎಚ್ಚರಿಕೆಯನ್ನು ನೀಡಿದೆ.
undefined
ತಾಯಿ ಮಡಿಲಿನಲ್ಲಿಯೇ ಕಣ್ಮುಚ್ಚಿದ ಮಕ್ಕಳು
ಗ್ವಾಲಿಯರ್‌ನ ಇಬ್ಬರು ಮಕ್ಕಳು ತಾಯಿಯ ಮಡಿಲಿನಲ್ಲಿಯೇ ಪ್ರಾಣಬಿಟ್ಟಿದ್ದಾರೆ. ಗ್ವಾಲಿಯರ್‌ನ ಕಿಲಾ ಗೇಟ್ ಪೊಲೀಸ್ ಠಾಣೆ ವ್ಯಾಪ್ತಿಯ ಹರಿಪುರ ವಾರ್ಡ್ ನಂ. 31ರ ನಿವಾಸಿಯಾಗಿರುವ ರಾಮ್ ಬಾಬು ಮತ್ತು ಸುನಿತಾ ದಂಪತಿಯ ಮಕ್ಕಳು ಸಾವನ್ನಪ್ಪಿದ್ದಾರೆ. ಮಂಗಳವಾರ ರಾತ್ರಿ 10 ಗಂಟೆಗೆ ತಾಯಿ ಭಗವತಿ ಅವರನ್ನು ಚಿಕಿತ್ಸೆಗಾಗಿ ಮೊರೆನಾ ಜಿಲ್ಲೆಯ ಜೋರಾಗೆ ಕರೆದುಕೊಂಡು ಹೋಗುತ್ತಿದ್ದರು. ಈ ವೇಳೆ ಮಕ್ಕಳಿಬ್ಬರು ತಾವು ಜೊತೆಯಾಗಿ ಬರೋದಾಗಿ ಹೋಗಿದ್ದಾರೆ. ಸುನಿತಾ ಸಹ ಮಕ್ಕಳನ್ನು ಕರೆದುಕೊಂಡು ಹೋಗಿದ್ದಾರೆ.
ಚಿಕಿತ್ಸೆಯ ಬಳಿಕ ಹಿಂದಿರುಗುವಾಗ ಆಟೋದಲ್ಲಿ 15 ವರ್ಷದ ಮಗಳು ತೀವ್ರ ಅಸ್ವಸ್ಥಗೊಂಡಿದ್ದಾಳೆ. ಸುನಿತಾ ತಮ್ಮ ಬಳಿಯಲ್ಲಿದ್ದ ಮಾತ್ರೆಯನ್ನು ಮಗಳಿಗೆ ನೀಡಿದ್ದಾರೆ. ನಂತರ 12 ವರ್ಷದ ಮಗನ ಆರೋಗ್ಯದಲ್ಲಿ ವ್ಯತ್ಯಾಸವುಂಟಾಗಿದೆ. ಇಬ್ಬರು ಪ್ರಜ್ಞೆ ಕಳೆದುಕೊಂಡಿದ್ದಾರೆ. ಗ್ವಾಲಿಯರ್‌ಗೆ ಬರುತ್ತಿದ್ದಂತೆ ಇಬ್ಬರು ಮಕ್ಕಳನ್ನು ಪೋಷಕರು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ಇಬ್ಬರು ಮೃತರಾಗಿರೋದನ್ನು ವೈದ್ಯರು ಖಚಿತಪಡಿಸಿದ್ದಾರೆ. ಹೀಟ್‌ಸ್ಟ್ರೋಕ್‌ನಿಂದ ಮಕ್ಕಳು ಮೃತರಾಗಿರೋದನ್ನು ವೈದ್ಯರು ದೃಢಪಡಿಸಿದ್ದಾರೆ.
ಸುಡುವ ಬಿಸಿಲಿನಲ್ಲಿ ಮೂರು ದಿನ ಧ್ಯಾನ ಮಾಡಿ ಪ್ರಾಣ ಕಳೆದುಕೊಂಡ ಖ್ಯಾತ ಸ್ವಾಮೀಜಿ
ರಸ್ತೆಯಲ್ಲಿಯೇ ಆಟೋ ಚಾಲಕನ ಸಾವು
ಬಿಸಿಲಿನ ತೀವ್ರ ಹೊಡೆತಕ್ಕೆ 51 ವರ್ಷದ ಆಟೋ ಚಾಲಕ ರಸ್ತೆಯಲ್ಲಿಯೇ ಮೃತರಾಗಿದ್ದಾರೆ. ಮೃತರನ್ನು ಸಂಜಯ್ ಸಿಂಗ್ ಯಾದವ್ ಎಂದು ಗುರುತಿಸಲಾಗಿದೆ. ಸಂಜಯ್ ಸಿಂಗ್ ಮೃತದೇಹ ಹಿಳಾ ಪೊಲೀಸ್ ಠಾಣೆ ಬಳಿಯಲ್ಲಿ ಪತ್ತೆಯಾಗಿದೆ. ಸಂಜಯ್ ಸಿಂಗ್ ಯಾದವ್ ಲಿಯರ್‌ನ ಬಾಲಾಜಿಪುರಂ ಪ್ರದೇಶದ ನಿವಾಸಿ ಎಂದು ವರದಿಯಾಗಿದ್ದು, ಮೃತದೇಹವನ್ನು ಮರಣೋತ್ತರ ಶವ ಪರೀಕ್ಷೆಗಾಗಿ ರವಾನಿಸಲಾಗಿದೆ. ಗ್ವಾಲಿಯರ್‌ನಲ್ಲಿಯೇ ಬಿಸಿಲಿನ ಹೊಡೆತಕ್ಕೆ ಐವರು ಸಾವನ್ನಪ್ಪಿದ್ದಾರೆ.
ಬಿರು ಬಿಸಿಲಿನಿಂದಾಗಿ ಕೋರ್ಟ್ ವಿಚಾರಣೆಯೇ ಮುಂದೂಡಿಕೆ!
ಟ್ರಾಫಿಕ್ ಸಿಗ್ನಲ್ ಬಂದ್ ಮಾಡಿದ ಪೊಲೀಸರು
ಬಿಸಿಲು 47 ಡಿಗ್ರಿ ಸೆಲ್ಸಿಯಸ್‌ಗೂ ಅಧಿಕವಾದ ಹಿನ್ನೆಲೆ ಗ್ವಾಲಿಯರ್ ನಗರದಲ್ಲಿಯ ಟ್ರಾಫಿಕ್ ಸಿಗ್ನಲ್‌ಗಳನ್ನು (Traffic Signals) ಬಂದ್ ಮಾಡಲಾಗಿದೆ. ಬಿಸಿಲು ಹೆಚ್ಚಾಗಿರುವ ಕಾರಣ ಕೋಚಿಂಗ್ ಸಂಸ್ಥೆಗಳನ್ನು ತಾತ್ಕಾಲಿಕವಾಗಿ ಬಂದ್ ಮಾಡುವಂತೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ದಾರೆ. ಬೆಳಗ್ಗೆ 6 ರಿಂದ ಬೆಳಗ್ಗೆ 11ರವರೆಗೆ ಮಾತ್ರ ಕೋಚಿಂಗ್ ಸೆಂಟರ್ ತೆರೆಯಬಹುದು ಎಂದು ಷರತ್ತು ವಿಧಿಸಲಾಗಿದೆ.