
ಪಿಟಿಐ ಇಂಫಾಲ/ಕೋಲ್ಕತಾ: ಜನಾಂಗೀಯ ಸಂಘರ್ಷದಿಂದ ನಲುಗಿರುವ ಈಶಾನ್ಯ ರಾಜ್ಯ ಮಣಿಪುರದಲ್ಲಿ ಪರಿಸ್ಥಿತಿ ಮತ್ತಷ್ಟು ವಿಕೋಪಕ್ಕೆ ಹೋಗುತ್ತಿರುವಂತಿದೆ. ರಾತ್ರಿಯಿಡೀ ಸಹಸ್ರಾರು ಜನರನ್ನು ಒಳಗೊಂಡ ದೊಂಬಿ ವಿವಿಧ ಸ್ಥಳಗಳಿಗೆ ಬೆಂಕಿ ಹಚ್ಚಿದೆ. ಮತ್ತೊಂದೆಡೆ, ಈ ಗುಂಪು ಬಿಜೆಪಿ ನಾಯಕರ ಮನೆ- ಆಸ್ತಿಗಳನ್ನೇ ಗುರಿಯಾಗಿಸಿಕೊಂಡಿರುವುದು ಸ್ಪಷ್ಟವಾಗಿದೆ. ಶುಕ್ರವಾರ ರಾತ್ರಿ ಬಿಜೆಪಿ ರಾಜ್ಯಾಧ್ಯಕ್ಷೆ, ಬಿಜೆಪಿ ಶಾಸಕ ಸೇರಿದಂತೆ ಕೆಲವರ ಮನೆಗೆ ಬೆಂಕಿ ಹಚ್ಚಲು ಪ್ರಯತ್ನ ನಡೆಸಿದ್ದು, ಕ್ಷಿಪ್ರ ಕಾರ್ಯಾಚರಣೆ ಪಡೆ (ಆರ್‌ಪಿಎಫ್) ಹಾಗೂ ಸೇನಾಪಡೆಗಳ ಮಧ್ಯಪ್ರವೇಶದಿಂದಾಗಿ ಅದು ತಪ್ಪಿದೆ. ಮೊನ್ನೆಯಷ್ಟೇ ಕೇಂದ್ರ ಸಚಿವರೊಬ್ಬರ ಮನೆಯನ್ನು ದಹಿಸಲಾಗಿತ್ತು.
ಈ ಮಧ್ಯೆ, ಭದ್ರತಾ ಪಡೆಗಳ ಜತೆ ಗುಂಪೊಂದು ಸಂಘರ್ಷಕ್ಕೆ ಇಳಿದಿದ್ದರಿಂದ ಇಬ್ಬರು ಗಾಯಗೊಂಡಿದ್ದಾರೆ. ಮಣಿಪುರದ (Manipur) ಬಿಷ್ಣುಪುರ (Bishnupur) ಹಾಗೂ ಚೂರಾಚಾಂದ್‌ಪುರ (Churachandpur) ಜಿಲ್ಲೆಯಲ್ಲಿ ರಾತ್ರಿಯಿಡೀ ಆ್ಯಟೋಮ್ಯಾಟಿಕ್ ರೈಫಲ್‌ಗಳಿಂದ (automatic rifles) ಗುಂಡಿನ ಶಬ್ದ ಕೇಳಿ ಬಂದಿದೆ. ಪಶ್ಚಿಮ ಇಂಫಾಲ ಜಿಲ್ಲೆಯ ಇರಿಂಗ್‌ಬಾಮ್ ಪೊಲೀಸ್ ಠಾಣೆಯಿಂದ (Iringbaum police) ಶಸ್ತ್ರಾಸ್ತ್ರ ಲೂಟಿಗೆ ಯತ್ನ ನಡೆದಿದೆ.
ಮಣಿಪುರದಲ್ಲಿ ಸಂಘರ್ಷ ತಡೆಗೆ ಶಾಂತಿ ಸಮಿತಿ ರಚನೆ: ಸೈನಿಕರಿಂದ ಕಸಿದ ಗನ್ ಮರಳಿಸಲು ಡ್ರಾಪ್‌ಬಾಕ್ಸ್
ಇಂಫಾಲದಲ್ಲಿ ಅಸ್ಸಾಂ ರೈಫಲ್ಸ್ (Assam Rifles) ಹಾಗೂ ಆರ್‌ಎಎಫ್ ಯೋಧರು (RAF soldiers) ಶುಕ್ರವಾರ ತಡರಾತ್ರಿವರೆಗೆ ಜಂಟಿ ಪಥಸಂಚಲನ ನಡೆಸಿದರೂ, ದೊಂಬಿಕೋರರು ಹೆದರಿಲ್ಲ. ಸುಮಾರು 1000 ಜನರು ಒಟ್ಟುಗೂಡಿ ಪ್ಯಾಲೇಸ್ ಕಾಂಪೌಂಡ್ ಬಳಿಯ ಕಟ್ಟಡಗಳಿಗೆ ಬೆಂಕಿ ಹಚ್ಚಲು ಯತ್ನಿಸಿದ್ದಾರೆ. ಆರ್‌ಎಎಫ್ ಸ್ಥಳಕ್ಕೆ ಆಗಮಿಸಿ, ರಬ್ಬರ್ ಬುಲೆಟ್ ಹಾಗೂ ಅಶ್ರುವಾಯು ಸಿಡಿಸಿದ್ದರಿಂದ ಅವರು ಪರಾರಿಯಾಗಿದ್ದಾರೆ.
ಮತ್ತೊಂದು ದೊಂಬಿಯು ಬಿಜೆಪಿ ಶಾಸಕ ಬಿಸ್ವಜೀತ್ (BJP MLA Biswajeet) ಮನೆಗೆ ಬೆಂಕಿ ಹಚ್ಚಲು ಯತ್ನಿಸಿದೆ. ಆರ್‌ಎಎಫ್ ಆ ಗುಂಪನ್ನೂ ಚದುರಿಸುವಲ್ಲಿ ಯಶಸ್ವಿಯಾಗಿದೆ. ಇನ್ನೊಂದು ಗುಂಪು ಶುಕ್ರವಾರ ತಡರಾತ್ರಿ ಬಿಜೆಪಿ ಕಚೇರಿಯನ್ನು ಸುತ್ತುವರೆದು ದಾಂಧಲೆಗೆ ಯತ್ನಿಸಿತಾದರೂ ಸೇನೆ ಆ ಯತ್ನವನ್ನು ವಿಫಲಗೊಳಿಸಿದೆ. ಬಿಜೆಪಿ ರಾಜ್ಯಾಧ್ಯಕ್ಷೆ ಶಾರದಾದೇವಿ (Sharadadevi) ಅವರ ನಿವಾಸದಲ್ಲೂ ದಾಂಧಲೆಗೆ ಯತ್ನ ನಡೆದಿದ್ದು, ಭದ್ರತಾ ಪಡೆಗಳೂ ಯುವಕರನ್ನು ಓಡಿಸಿವೆ. ಇದಕ್ಕೂ ಮುನ್ನ ಇಂಫಾಲದ ವಿವಿಧೆಡೆ ಹಲವಾರು ಆಸ್ತಿಗಳಿಗೆ ಬೆಂಕಿ ಹಚ್ಚಲಾಗಿದೆ.
ಮಣಿಪುರ ಹಿಂಸಾಚಾರ,ಆಸ್ಪತ್ರೆ ತೆರಳುತ್ತಿದ್ದ ತಾಯಿ-ಮಗನ ಜೀವಂತ ಸುಟ್ಟ ಪ್ರತಿಭಟನಾಕಾರರು!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ