5 ರಾಜ್ಯಗಳಲ್ಲಿ ಕೋವಿಡ್‌ ಅಬ್ಬರ : ಕರ್ನಾಟಕ ರಾಜ್ಯಕ್ಕೆ ಎಚ್ಚರಿಕೆ ಗಂಟೆ

By Kannadaprabha NewsFirst Published Feb 21, 2021, 7:26 AM IST
Highlights

ಮತ್ತೆ ಈಗ ಕೊರೋನಾ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಸಾಗಿದೆ. ಕೋವಿಡ್ ಇದೀಗ ಐದು ರಾಜ್ಯಗಳಲ್ಲಿ ಅಬ್ಬರೊಸುತ್ತಿದೆ. ಈ ನಿಟ್ಟಿನಲ್ಲಿ ಕರ್ನಾಟಕಕ್ಕೂ ಎಚ್ಚರಿಕೆ ನೀಡಲಾಗಿದೆ. 

ನವದೆಹಲಿ (ಫೆ.21):  ಕೇವಲ ಮಹಾರಾಷ್ಟ್ರ ಹಾಗೂ ಕೇರಳದಲ್ಲಷ್ಟೇ ಅಲ್ಲ, ಕೊರೋನಾ ವೈರಸ್‌ ಇನ್ನೂ 3 ರಾಜ್ಯಗಳಲ್ಲಿ ಪುನಃ ಹೆಚ್ಚಿನ ಪ್ರಮಾಣದಲ್ಲಿ ಏರಿಕೆ ಕಾಣುತ್ತಿದೆ ಎಂದು ಕೇಂದ್ರ ಸರ್ಕಾರ ಶನಿವಾರ ಎಚ್ಚರಿಕೆ ನೀಡಿದೆ. ಮಧ್ಯಪ್ರದೇಶ, ಪಂಜಾಬ್‌ ಹಾಗೂ ಛತ್ತೀಸ್‌ಗಢಗಳಲ್ಲಿ ಪ್ರಕರಣಗಳು ಏರತೊಡಗಿವೆ. ಹೀಗಾಗಿ, ‘ಕೊರೋನಾ ನಿಗ್ರಹಕ್ಕೆ ಇರುವ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಿದರೆ ಮಾತ್ರ ಸೋಂಕಿಗೆ ತಡೆ ಒಡ್ಡಲು ಸಾಧ್ಯ’ ಎಂದು ಅದು ಹೇಳಿದೆ.

ಕೇಂದ್ರದ ಈ ಎಚ್ಚರಿಕೆ ಸೋಂಕಿನ ಇಳಿಕೆ ಕಾಣುತ್ತಿರುವ ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಿಗೆ ಎಚ್ಚರಿಕೆ ಗಂಟೆಯಾಗಿದೆ. ಸುರಕ್ಷತಾ ಕ್ರಮಗಳನ್ನು ಈ ರಾಜ್ಯಗಳು ಪಾಲಿಸಲೇಬೇಕೆಂಬ ಸಂದೇಶವನ್ನು ಸಾರಿ ಹೇಳಿದೆ.

ಶನಿವಾರ ಬೆಳಗ್ಗೆ 8 ಗಂಟೆಗೆ ಅಂತ್ಯಗೊಂಡ 24 ತಾಸಿನ ಅವಧಿಯಲ್ಲಿ ದೇಶದಲ್ಲೇ ಅತ್ಯಧಿಕ ಪ್ರಕರಣಗಳು ಮಹಾರಾಷ್ಟ್ರದಲ್ಲಿ (6612) ದಾಖಲಾಗಿವೆ. ಇನ್ನು ಕೇರಳದಲ್ಲಿ 4,584 ಪ್ರಕರಣಗಳು ವರದಿಯಾಗಿವೆ. ಇದೇ ಅವಧಿಯಲ್ಲಿ ಛತ್ತೀಸ್‌ಗಢದಲ್ಲಿ 259, ಮಧ್ಯಪ್ರದೇಶದಲ್ಲಿ 297, ಪಂಜಾಬ್‌ನಲ್ಲಿ 383 ಕೊರೋನಾ ಪ್ರಕರಣಗಳು ದಾಖಲಾಗಿವೆ. ಪ್ರಕರಣಗಳ ಇಳಿಕೆ ಕಾಣುತ್ತಿದ್ದ ಛತ್ತೀಸ್‌ಗಢ, ಮಧ್ಯಪ್ರದೇಶ ಹಾಗೂ ಪಂಜಾಬ್‌ನಲ್ಲಿ ಕಳೆದ 1 ವಾರದಿಂದ ಹೊಸ ಕೇಸುಗಳು ಏಕಾಏಕಿ ಏರತೊಡಗಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ.

ರಾಜ್ಯಕ್ಕೆ 2ನೇ ಅಲೆ ಭೀತಿ : ಮತ್ತೆ ಲಾಕ್‌ಡೌನ್‌, ನೈಟ್‌ ಕರ್ಫ್ಯೂ ..?

ಮಹಾರಾಷ್ಟ್ರ ಹಾಗೂ ಕೇರಳಗಳು, ದೇಶದ ಒಟ್ಟಾರೆ ಸಕ್ರಿಯ ಕೊರೋನಾ ಪ್ರಕರಣಗಳ ಶೇ.75.87ರಷ್ಟುಪಾಲು ಹೊಂದಿವೆ.

ಹೀಗಾಗಿ, ‘ಕೊರೋನಾ ನಿಯಂತ್ರಣಕ್ಕೆ ವಿಧಿಸಲಾಗಿದ್ದ ನಿಯಮಗಳನ್ನು ಜನರು ಕಟ್ಟುನಿಟ್ಟಾಗಿ ಪಾಲಿಸಬೇಕು. ಹೀಗಿದ್ದರೆ ಮಾತ್ರ ಸೋಂಕಿನ ಸರಣಿ ತುಂಡರಿಸಲು ಸಾಧ್ಯ’ ಎಂದು ಜನತೆಗೆ ಸಚಿವಾಲಯ ಮನವಿ ಮಾಡಿದೆ. ಸಮಾಧಾನದ ವಿಷಯವೆಂದರೆ 18 ರಾಜ್ಯಗಳಲ್ಲಿ ಕಳೆದ 24 ತಾಸಿನಲ್ಲಿ ಯಾವುದೇ ಕೋವಿಡ್‌ ಸಂಬಂಧಿ ಸಾವು ಸಂಭವಿಸಿಲ್ಲ.

ಪ್ರಕರಣಗಳ ಏರಿಕೆ ಹೇಗೆ?

ರಾಜ್ಯ ವಾರದ ಹಿಂದೆ ವಾರದ ಈಚೆ

ಮಧ್ಯಪ್ರದೇಶ 150+ 250+

ಪಂಜಾಬ್‌ 150+ 300+

ಛತ್ತೀಸ್‌ಗಢ 100+ 250+

ಮಹಾರಾಷ್ಟ್ರ 2500+ 5000+

ಕೇರಳ 4500+ 4500+

click me!