
ನವದೆಹಲಿ[ನ.15]: ಶುಲ್ಕ ಹೆಚ್ಚಳ ಕುರಿತು ತೀವ್ರ ಸ್ವರೂಪದ ಪ್ರತಿಭಟನೆ ನಡೆದ ದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ (ಜೆಎನ್‌ಯು)ದಲ್ಲಿ ಮತ್ತೆ ‘ಆಜಾದಿ’ ಘೋಷಣೆ ಕೂಗಿರುವ ವಿಡಿಯೋವೊಂದು ಹರಿದಾಡುತ್ತಿದೆ.
ಜೆಎನ್‌ಯು ವಿವೇಕಾನಂದ ಪ್ರತಿಮೆ ಪೀಠ ಮೇಲೆ ಆಕ್ಷೇಪಾರ್ಹ ಸಂದೇಶ!
ಆದರೆ ಈ ವಿಡಿಯೋ ಯಾವಾಗಿನದ್ದು ಎಂಬುದು ತಿಳಿದುಬಂದಿಲ್ಲ. 2016ರಲ್ಲಿ ಆಜಾದಿ ಘೋಷಣೆ ಕೂಗಿದ್ದು ವಿವಾದಕ್ಕೆ ಕಾರಣವಾಗಿತ್ತು. ಈ ಸಂಬಂಧ ಪ್ರಕರಣವೂ ದಾಖಲಾಗಿ ಅದು ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದೆ.
ಜೆಎನ್’ಯು ಹೆಸರು ಬದಲಿಸಿ ಮೋದಿ ಹೆಸರಿಡಿ: ಹನ್ಸ್ ರಾಜ್ ಏಕಿಷ್ಟು ಗಡಿಬಿಡಿ?
ವಿಶ್ವವಿದ್ಯಾಲಯದ ಹಾಸ್ಟೆಲ್ ಶುಲ್ಕ ಹೆಚ್ಚಳ ವಿರೋಧಿಸಿ ಸೋಮವಾರ ಭಾರಿ ಸ್ವರೂಪದ ಪ್ರತಿಭಟನೆ ನಡೆದಿತ್ತು. ಇದಾದ ಬೆನ್ನಲ್ಲೇ ಆಜಾದಿ ವಿಡಿಯೋ ಪ್ರತ್ಯಕ್ಷವಾಗಿದೆ ಎಂದು ಟೀವಿ ವಾಹಿನಿಯೊಂದು ವರದಿ ಮಾಡಿದೆ. ಆದರೆ ಇದರ ಅಸಲಿತನ ಹಾಗೂ ದಿನಾಂಕ ಗೊತ್ತಿಲ್ಲ ಎಂದೂ ತಿಳಿಸಿದೆ.
ವಿದ್ಯಾರ್ಥಿ ಶಕ್ತಿಗೆ ಮಣಿದ ಜೆಎನ್‌ಯು: ಶುಲ್ಕ ಪ್ರಮಾಣ ಕಡಿತಕ್ಕೆ ಒಪ್ಪಿಗೆ!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ