ಹೊಸ ಮಾದರಿಯ ಕೊರೋನಾ ವೈರಸ್ ಪತ್ತೆ | ಬ್ರಿಟನ್, ದ. ಆಫ್ರಿಕಾದ ವೈರಸ್‌ಗಿಂತಲೂ ಭಿನ್ನ | ಸೀಮಿತ ಮಾದರಿ ಪರೀಕ್ಷೆಗಳಿಂದ ಈ ವೈರಸ್ ಪತ್ತೆ | ಹೆಚ್ಚಿನ ತನಿಖೆಗಾಗಿ ಇನ್ನಷ್ಟುಮಾದರಿಗಳ ಪರೀಕ್ಷೆ
ನವದೆಹಲಿ(ಡಿ.26): ಬ್ರಿಟನ್ ಹಾಗೂ ದಕ್ಷಿಣ ಆಫ್ರಿಕಾದಲ್ಲಿ ಕೊರೋನಾ ವೈರಸ್‌ನ ಹೊಸ ಮಾದರಿ ಆತಂಕ ಸೃಷ್ಟಿಸಿರುವಾಗಲೇ, ಆಫ್ರಿಕಾ ಖಂಡದ ಅತ್ಯಂತ ಜನದಟ್ಟಣೆಯ ದೇಶ ನೈಜೀರಿಯಾದಲ್ಲಿ ರೂಪಾಂತರಗೊಂಡ ಕೊರೋನಾ ವೈರಸ್‌ನ ಮಾದರಿಯೊಂದು ಪತ್ತೆ ಆಗಿದ್ದು ಆತಂಕಕ್ಕೆ ಕಾರಣವಾಗಿದೆ.
undefined
ಬ್ರಿಟನ್ ಹಾಗೂ ದಕ್ಷಿಣ ಆಫ್ರಿಕಾದಲ್ಲಿ ಪತ್ತೆ ಆಗಿರುವ ವೈರಸ್ ಅತಿ ಅಪಾಯಕಾರಿ ಹಾಗೂ ಅತಿ ವೇಗದಲ್ಲಿ ಹರಡುತ್ತಿರುವ ಕಾರಣ ವಿಶ್ವದೆಲ್ಲೆಡೆಯ ದೇಶಗಳು ಈ ದೇಶಗಳಿಗೆ ಪ್ರಯಾಣ ನಿಷೇಧ ಸೇರಿದಂತೆ ಹಲವು ಕಠಿಣ ನಿರ್ಬಂಧಗಳನ್ನು ಹೇರಿವೆ. ಇದೀಗ ನೈಜೀರಿಯಾದಲ್ಲಿ ಪತ್ತೆ ಆಗಿರುವ ಹೊಸ ಮಾದರಿ ಬ್ರಿಟನ್ ಹಾಗೂ ದಕ್ಷಿಣ ಆಫ್ರಿಕಾದ ವಂಶಾವಳಿಗಿಂತಲೂ ಭಿನ್ನವಾಗಿದೆ.
ಲ್ಯಾಬ್‌ನಲ್ಲಿ ತಯಾರಾಯ್ತು ವೆಜಿಟೇರಿಯನ್ ಮೊಟ್ಟೆ!
ನೈಜೀರಿಯಾದ ಒಸುನ್ ರಾಜ್ಯದಲ್ಲಿ ಆ.3 ಹಾಗೂ ಅ.9ರಂದು ಇಬ್ಬರು ರೋಗಿಗಳ ಮಾದರಿಯನ್ನು ಪರೀಕ್ಷಿಸಿದ ಸಂದರ್ಭದಲ್ಲಿ ಹೊಸ ಪ್ರಭೇದ ಪತ್ತೆ ಆಗಿತ್ತು. ಅಧ್ಯಯನದ ಬಳಿಕ ಕೊರೋನಾ ರೂಪಾಂತರಗೊಂಡಿರುವ ಸಂಗತಿ ಗೊತ್ತಾಗಿದೆ. ಈ ಹಿನ್ನೆಲೆಯಲ್ಲಿ ಇನ್ನಷ್ಟುಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಆಫ್ರಿಕಾ ಕೊರೋನಾ ನಿಯಂತ್ರಣ ಸಂಸ್ಥೆಯ ನಿರ್ದೇಶಕ ಎನ್ಕೆನ್ಗಾಸೊಂಗ್ ತಿಳಿಸಿದ್ದಾರೆ.
ನೈಜೀರಿಯಾದಲ್ಲಿ ಪತ್ತೆಯಾಗಿರುವ ಕೊರೋನಾದ ಹೊಸ ಮಾದರಿ ಸೀಮಿತ ಸ್ಯಾಂಪಲ್‌ಗಳನ್ನು ಆಧರಿಸಿದ್ದಾಗಿದೆ. ಹೀಗಾಗಿ ನೈಜೀರಿಯಾದ ರೋಗ ನಿಯಂತ್ರಣ ಸಂಸ್ಥೆ ಹಾಗೂ ಆಫ್ರಿಕಾದ ಸಾಂಕ್ರಾಮಿಕ ರೋಗಗಳ ಜೀನೋಮಿಕ್ ಶ್ರೇಷ್ಠತಾ ಕೇಂದ್ರಗಳು ಮತ್ತಷ್ಟುಮಾದರಿಗಳನ್ನು ಅಧ್ಯಯನಕ್ಕೆ ಒಳಪಡಿಸಲಿವೆ. ಆದಾಗ್ಯೂ ದೇಶದ ಮುಖ್ಯ ಕೊರೋನಾ ಅನ್ವೇಷಕರು ಹೊಸ ಮಾದರಿಯ ‘ಜೆನೆಟಿಕ್ಸ್ ಸೀಕ್ವೆನ್ಸ್’ ಬಿಡುಗಡೆ ಮಾಡಿದ್ದಾರೆ ಎಂದು ಹೇಳಿದ್ದಾರೆ.
ಸಚಿವ ಸುಧಾಕರ್ ಮಧ್ಯ ಪ್ರವೇಶ: ಮೃತದೇಹ ಹಸ್ತಾಂತರ
ಆಫ್ರಿಕಾ ಖಂಡದಲ್ಲೇ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶವಾಗಿರುವ ನೈಜೀರಿಯಾದಲ್ಲಿ 20 ಕೋಟಿ ಮಂದಿ ವಾಸಿಸುತ್ತಿದ್ದಾರೆ. ಆದರೆ ಬೇರೆ ದೇಶಗಳಿಗೆ ಹೋಲಿಸಿದರೆ ಕಡಿಮೆ ಕೊರೋನಾ ಪ್ರಕರಣಗಳು ಪತ್ತೆಯಾಗಿವೆ. ಈವರೆಗೆ 80 ಸಾವಿರ ಮಂದಿಗಷ್ಟೇ ಸೋಂಕು ತಗುಲಿದ್ದು, ಈ ತಿಂಗಳು ಮೊದಲ ಬಾರಿಗೆ ಒಂದೇ ದಿನ 1000ಕ್ಕೂ ಅಧಿಕ ಪ್ರಕರಣಗಳು ವರದಿಯಾಗಿವೆ.