ದಿಲ್ಲಿ ಅಧಿಕಾರದ ಬಗ್ಗೆ ತೀರ್ಪು ನೀಡಿದ ಬೆನ್ನಲ್ಲೇ ಮತ್ತೆ ಸುಪ್ರೀಂ ಕದ ತಟ್ಟಿದ ಆಪ್!

By Kannadaprabha NewsFirst Published May 12, 2023, 8:49 PM IST
Highlights

ದೆಹಲಿಯ ಆಡಳಿತಾತ್ಮಕ ಸೇವೆಗಳ ಅಧಿಕಾರವೆಲ್ಲ ದೆಹಲಿ ಸರ್ಕಾರಕ್ಕೇ ಸೇರಿದ್ದು ಎಂದು ಸುಪ್ರೀಂಕೋರ್ಚ್‌ ತೀರ್ಪು ನೀಡಿದ ಮರುದಿನವೇ ಮತ್ತೆ ಆಮ್‌ ಆದ್ಮಿ ಪಕ್ಷದ ಸರ್ಕಾರ ತಾನು ಮಾಡಿದ ವರ್ಗಾವಣೆಯನ್ನು ಕೇಂದ್ರ ಸರ್ಕಾರ ತಡೆಹಿಡಿದಿದೆ ಎಂದು ಸುಪ್ರೀಂಕೋರ್ಚ್‌ನ ಕದ ಬಡಿದಿದೆ.

ಪಿಟಿಐ ನವದೆಹಲಿ (ಮೇ.12) : ದೆಹಲಿಯ ಆಡಳಿತಾತ್ಮಕ ಸೇವೆಗಳ ಅಧಿಕಾರವೆಲ್ಲ ದೆಹಲಿ ಸರ್ಕಾರಕ್ಕೇ ಸೇರಿದ್ದು ಎಂದು ಸುಪ್ರೀಂಕೋರ್ಚ್‌ ತೀರ್ಪು ನೀಡಿದ ಮರುದಿನವೇ ಮತ್ತೆ ಆಮ್‌ ಆದ್ಮಿ ಪಕ್ಷದ ಸರ್ಕಾರ ತಾನು ಮಾಡಿದ ವರ್ಗಾವಣೆಯನ್ನು ಕೇಂದ್ರ ಸರ್ಕಾರ ತಡೆಹಿಡಿದಿದೆ ಎಂದು ಸುಪ್ರೀಂಕೋರ್ಚ್‌ನ ಕದ ಬಡಿದಿದೆ.

ದೆಹಲಿಯ ಐಎಎಸ್‌ ಅಧಿಕಾರಿಗಳ ವರ್ಗಾವಣೆ ಅಧಿಕಾರ ದೆಹಲಿ ಸರ್ಕಾರಕ್ಕಿದೆ ಎಂದು ಗುರುವಾರ ಸುಪ್ರೀಂಕೋರ್ಚ್‌ ತೀರ್ಪು ನೀಡಿತ್ತು. ಅದರ ಬೆನ್ನಲ್ಲೇ ಆಪ್‌ ಸರ್ಕಾರ ಸೇವೆಗಳ ಇಲಾಖೆಯ ಕಾರ್ಯದರ್ಶಿ ಆಶಿಶ್‌ ಮೋರೆ ಅವರನ್ನು ಆ ಹುದ್ದೆಯಿಂದ ಕಿತ್ತುಹಾಕಿತ್ತು. ಆದರೆ ಅದನ್ನು ಕೇಂದ್ರ ಸರ್ಕಾರ ತಡೆಹಿಡಿದಿದೆ ಎನ್ನಲಾಗಿದೆ.

Latest Videos

ದೆಹಲಿ ಮೇಲೆ ದೆಹಲಿ ಸರ್ಕಾರಕ್ಕೇ ಅಧಿಕಾರ: ಸುಪ್ರೀಂಕೋರ್ಟ್ ಮಹತ್ವದ ತೀರ್ಪು

ಶುಕ್ರವಾರ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌ ಅವರ ಪೀಠದೆದುರು ಈ ವಿಚಾರ ಪ್ರಸ್ತಾಪಿಸಿದ ಹಿರಿಯ ವಕೀಲ ಎ.ಎಂ.ಸಿಂಘ್ವಿ, ‘ಸುಪ್ರೀಂಕೋರ್ಚ್‌ ತೀರ್ಪು ನೀಡಿದ್ದರೂ ದೆಹಲಿ ಸರ್ಕಾರ ಮಾಡಿದ ವರ್ಗಾವಣೆಯನ್ನು ಕೇಂದ್ರ ಸರ್ಕಾರ ತಡೆಹಿಡಿದಿದೆ. ದೆಹಲಿ ಸರ್ಕಾರ ಯಾರನ್ನೂ ವರ್ಗಾವಣೆ ಮಾಡುವಂತಿಲ್ಲ ಎಂದು ಕೇಂದ್ರ ಸರ್ಕಾರ ಹೇಳುತ್ತಿದೆ. ನಾನು ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸುತ್ತೇನೆ. ಈ ಬಗ್ಗೆ ವಿಚಾರಣೆ ನಡೆಸಬೇಕು’ ಎಂದು ಕೋರಿದರು. ಅದಕ್ಕೆ ಒಪ್ಪಿದ ನ್ಯಾ.ಚಂದ್ರಚೂಡ್‌, ಮುಂದಿನ ವಾರ ಈ ಬಗ್ಗೆ ವಿಚಾರಣೆ ನಡೆಸಲು ಪ್ರತ್ಯೇಕ ಪೀಠ ರಚಿಸುವುದಾಗಿ ಹೇಳಿದರು.

click me!