ಹರ್ ಘರ್ ತಿರಂಗಾ ನಂತರ ದೇಶದ ಜನರಿಗೆ ಮತ್ತೊಂದು ಕರೆ ಕೊಟ್ಟ ಪ್ರಧಾನಿ

By Anusha Kb  |  First Published Aug 13, 2023, 12:33 PM IST

76ನೇ ವರ್ಷದ ಸ್ವಾತಂತ್ರ ದಿನಾಚರಣೆಗೆ ಇನ್ನೆರಡೇ ದಿನ ಬಾಕಿ ಇದ್ದು ದೇಶ ಸಕಲ ರೀತಿಯಿಂದ ಸಜ್ಜಾಗುತ್ತಿದೆ. ಈ ಹಿಂದೆ ಮನೆ ಮನೆಯಲ್ಲೂ ರಾಷ್ಟ್ರಧ್ವಜ ಹಾರಿಸಿ ಎಂದು ಕರೆ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ಈಗ ಸಾಮಾಜಿಕ ಜಾಲತಾಣಗಳಲ್ಲಿರುವ ಡಿಪಿಗಳಲ್ಲೂ ರಾಷ್ಟ್ರಧ್ವಜವನ್ನು ಹಾಕುವಂತೆ ಕರೆ ನೀಡಿದ್ದಾರೆ.


76ನೇ ವರ್ಷದ ಸ್ವಾತಂತ್ರ ದಿನಾಚರಣೆಗೆ ಇನ್ನೆರಡೇ ದಿನ ಬಾಕಿ ಇದ್ದು ದೇಶ ಸಕಲ ರೀತಿಯಿಂದ ಸಜ್ಜಾಗುತ್ತಿದೆ. ಈ ಹಿಂದೆ ಮನೆ ಮನೆಯಲ್ಲೂ ರಾಷ್ಟ್ರಧ್ವಜ ಹಾರಿಸಿ ಎಂದು ಕರೆ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ಈಗ ಸಾಮಾಜಿಕ ಜಾಲತಾಣಗಳಲ್ಲಿರುವ ಡಿಪಿಗಳಲ್ಲೂ ರಾಷ್ಟ್ರಧ್ವಜವನ್ನು ಹಾಕುವಂತೆ ಕರೆ ನೀಡಿದ್ದಾರೆ. ಸ್ವತಃ ತಮ್ಮ ಖಾತೆಯ ಟ್ವಿಟ್ಟರ್‌ ಡಿಪಿ ಬದಲಾಯಿಸಿರುವ ಮೋದಿ ನಂತರ ಟ್ವಿಟ್ಟರ್‌ನಲ್ಲಿ '#HarGharTiranga ಆಂದೋಲನದ ಉತ್ಸಾಹದಲ್ಲಿ, ನಮ್ಮ ಸಾಮಾಜಿಕ ಜಾಲತಾಣಗಳ ಖಾತೆಗಳ DP ಅನ್ನು ಬದಲಾಯಿಸೋಣ ಮತ್ತು ನಮ್ಮ ಪ್ರೀತಿಯ ದೇಶ ಮತ್ತು ನಮ್ಮ ನಡುವಿನ ಬಾಂಧವ್ಯವನ್ನು ಗಾಢವಾಗಿಸುವ ಈ ಅನನ್ಯ ಪ್ರಯತ್ನಕ್ಕೆ ಬೆಂಬಲವನ್ನು ನೀಡೋಣ ಎಂದು ಪ್ರಧಾನಿ ಬರೆದುಕೊಂಡಿದ್ದಾರೆ. 

ಇಂದು ಬೆಳಗೆ ಮಾಡಿದ ಈ ಟ್ವಿಟ್‌ನ್ನು  ಒಂದು ಮಿಲಿಯನ್‌ಗೂ ಹೆಚ್ಚು ಜನ ವೀಕ್ಷಿಸಿದ್ದು, ಈಗಾಗಲೇ  ಆರು ಸಾವಿರಕ್ಕೂ ಹೆಚ್ಚು ರೀಪೋಸ್ಟ್ ಆಗಿದೆ.  ಅದರ ಜೊತೆಗೆ 600ಕ್ಕೂ ಹೆಚ್ಚು ಜನ ಇದಕ್ಕೆ ಪ್ರತಿಕ್ರಿಯೆಯ ಜೊತೆ ರಿಟ್ವಿಟ್ ಮಾಡಿದ್ದಾರೆ. ಆದರೆ ಕೆಲವರು ಪ್ರಧಾನಿ ಈ ನಿರ್ಧಾರವನ್ನು ಟೀಕಿಸಿದ್ದು, ಡಿಪಿ ಬದಲಿಸಿದ ಕೂಡಲೇ ದೇಶ ಬದಲಾಗದು ಎಂದು ಟೀಕಿಸಿದ್ದಾರೆ. 

In the spirit of the movement, let us change the DP of our social media accounts and extend support to this unique effort which will deepen the bond between our beloved country and us.

— Narendra Modi (@narendramodi)

Tap to resize

Latest Videos

ರಾಷ್ಟ್ರಗೀತೆ ಗಾಯನ, ರಾಷ್ಟ್ರಧ್ವಜ ವಂದನೆ ನಿಷಿದ್ಧ ಎಂದಿದ್ದ ಮೌಲ್ವಿ ವಶಕ್ಕೆ

ಪೋರಬಂದರ್‌: ಮುಸ್ಲಿಮರು ರಾಷ್ಟ್ರಧ್ವಜಕ್ಕೆ ವಂದನೆ ಸಲ್ಲಿಸಬಾರದು ಮತ್ತು ರಾಷ್ಟ್ರಗೀತೆ ಹಾಡಬಾರದು ಎಂದಿದ್ದ ಗುಜರಾತ್‌ನ ಪೋರಬಂದರ್‌ ನಗರದ ಮುಸ್ಲಿಂ ಧರ್ಮಗುರುವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆರೋಪಿ ಮೌಲ್ವಿ ವಾಸಿದ್‌ ರಾಜಾ ವಿರುದ್ಧ ರಾಷ್ಟ್ರಧ್ಬಜಕ್ಕೆ ಅವಮಾನ ಹಾಗೂ ಗುಂಪುಗಳ ಮಧ್ಯೆ ದ್ವೇಷ ಹರಡುವ ಆರೋಪದಲ್ಲಿ ಪ್ರಕರಣ ದಾಖಲಿಸಲಾಗಿದೆ. ನಗರದ ನಗೀನಾ ಮಸೀದಿಯ ಮೌಲ್ವಿಯಾಗಿರುವ ಈತ ವಾಟ್ಸಾಪ್‌ ಗ್ರೂಪ್‌ನಲ್ಲಿ ನಡೆದ ಆಡಿಯೋ ಮೆಸೇಜ್‌ ಸಂಭಾಷಣೆಯಲ್ಲಿ ‘ಮುಸ್ಲಿಮರು ರಾಷ್ಟ್ರಗೀತೆ ಹಾಡಬಹುದೇ? ರಾಷ್ಟ್ರಧ್ವಜಕ್ಕೆ ಸೆಲ್ಯೂಟ್‌ ಮಾಡಬಹುದೇ?’ ಎಂಬ ಪ್ರಶ್ನಗೆ ಉತ್ತರವಾಗಿ ‘ರಾಷ್ಟ್ರಧ್ವಜ ಹಾರಿಸಬಹುದು ಆದರೆ ಅದಕ್ಕೆ ಸೆಲ್ಯೂಟ್‌ ಮಾಡಬಾರದು, ರಾಷ್ಟ್ರಗೀತೆ ಹಾಡಬಾರದು’ ಎಂದಿದ್ದ. ಈ ಆಡಿಯೋ ವೈರಲ್‌ ಆಗಿತ್ತು.

ಮಣಿಪುರ ಹಿಂಸೆ ತಗ್ಗಿಸಲು ಸರ್ಜಿಕಲ್‌ ಸ್ಟ್ರೈಕ್‌ ಮಾಡಿ: ಬಿಜೆಪಿಗೆ ಮಿತ್ರಪಕ್ಷ ಎನ್‌ಪಿಪಿ

ಇಂಫಾಲ್‌: ಹಿಂಸಾಚಾರ ಪೀಡಿತ ಮಣಿಪುರದಲ್ಲಿ ಅಕ್ರಮ ವಲಸಿಗರು ಮತ್ತು ಉಗ್ರಗಾಮಿಗಳ ಸಮಸ್ಯೆಯನ್ನು ಸಂಪೂರ್ಣವಾಗಿ ಬಗೆಹರಿಸಲು ‘ಸರ್ಜಿಕಲ್‌ ಸ್ಟ್ರೈಕ್’ನಂತಹ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳವೇಕು ಎಂದು ರಾಜ್ಯದಲ್ಲಿ ಬಿಜೆಪಿಯ ಮಿತ್ರಪಕ್ಷವಾಗಿರುವ ನ್ಯಾಷನಲ್‌ ಪೀಪಲ್ಸ್‌ ಪಾರ್ಟಿ (NCP) ನಾಯಕ ಎಂ. ರಾಮೇಶ್ವರ್‌ ಸಿಂಗ್‌ (Rameshwar singh) ಹೇಳಿದ್ದಾರೆ. ಈ ಬಗ್ಗೆ ಮಾತನಾಡಿದ ಅವರು ‘ಕೆಲವು ಅಕ್ರಮ ಕುಕಿ ಉಗ್ರಗಾಮಿಗಳು ಮತ್ತು ಅಕ್ರಮ ವಲಸಿಗರು ಗಡಿಯಾಚೆಯಿಂದ ಬರುತ್ತಿದ್ದಾರೆ ಎಂಬುದು ಗೃಹ ಸಚಿವರ ಹೇಳಿಕೆಯಿಂದ ಸ್ಪಷ್ಟವಾಗಿದೆ. ಹಿಂಸಾಚಾರದಲ್ಲಿ ಬಾಹ್ಯ ಆಕ್ರಮಣವಿದೆ ಎಂದು ನಾನು ಯಾವಾಗಲೂ ಹೇಳುತ್ತಿದ್ದೆ. ಇದರಿಂದ ರಾಷ್ಟ್ರೀಯ ಭದ್ರೆತೆಯೊಂದಿಗೆ ರಾಜಿಯಾದಂತಾಗಿದೆ. ಮಣಿಪುರ (Manipur) ಮಾತ್ರವಲ್ಲದೇ ಇಡೀ ರಾಷ್ಟ್ರವನ್ನು ಉಳಿಸುವುದು ಮುಖ್ಯ. ಒಮ್ಮೆಲೆ ಎಲ್ಲ ಸಮಸ್ಯೆಯನ್ನು ಬಗೆಹರಿಸಲು ಸರ್ಜಿಕಲ್‌ ಸ್ಟೆ್ರೖಕ್‌ನಂತಹ ಪರಿಣಾಮಕಾರಿ ಕ್ರಮ ಕೈಗೊಳ್ಳಬೇಕು’ ಎಂದರು.

ಅಮಾನತುಗೊಂಡ ಸಂಸತ್‌ ಸದಸ್ಯ: ಛಡ್ಡಾ ಟ್ವೀಟರ್‌ ಬಯೋ ಬದಲು

ನವದೆಹಲಿ: ನಕಲಿ ಸಹಿ ಆರೋಪದಲ್ಲಿ ಸಂಸತ್ತಿನಿಂದ ಅಮಾನತುಗೊಂಡಿರುವ ಬೆನ್ನಲ್ಲೇ ಆಪ್‌ ಸಂಸದ ರಾಘವ್‌ ಛಡ್ಡಾ (Raghav chadda) ತಮ್ಮ ಟ್ವೀಟರ್‌ ಖಾತೆಯ ಬಯೋದಲ್ಲಿ ‘ಸಂಸತ್ತಿನಿಂದ ಅಮಾನತುಗೊಂಡ ಸಂಸದ’ ಎಂದು ಬರೆದುಕೊಂಡಿದ್ದಾರೆ. ತಮ್ಮ ಅಮಾನತು ಬಗ್ಗೆ ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಅವರು ‘ನೀವು ಪ್ರಶ್ನಿಸಿದರೆ ನಿಮ್ಮ ಧ್ವನಿಯನ್ನೇ ಪುಡಿ ಮಾಡುತ್ತೇವೆ ಎಂದು ನನ್ನ ಅಮಾನತಿನ ಮೂಲಕ ಇಂದಿನ ಯುವಜನರಿಗೆ ಬಿಜೆಪಿ ಕಟು ಸಂದೇಶ ನೀಡಿದೆ. ನಾನು ಕೇಳಿದ ಕಠಿಣ ಪ್ರಶ್ನೆಗಳಿಗೆ ಉತ್ತರವಿಲ್ಲದೆ ನನ್ನನ್ನು ಅಮಾನತು ಮಾಡಲಾಗಿದೆ’ ಎಂದಿದ್ದಾರೆ. ದಿಲ್ಲಿ ಸುಗ್ರೀವಾಜ್ಞೆ ಮಸೂದೆಯನ್ನು ಸಂಸತ್ತಿನ ಆಯ್ಕೆ ಸಮಿತಿ ಪರಿಶೀಲಿಸಬೇಕು ಎಂಬ ತಮ್ಮ ಪ್ರಸ್ತಾವಕ್ಕೆ ಸೂಚಕರಾಗಿ ಛಡ್ಡಾ ಕೆಲವರನ್ನು ಹೆಸರಿಸಿದ್ದರು. ಅವರು ತಮ್ಮ ಅನುಮತಿ ಇಲ್ಲದೇ ಹೆಸರಿಸಲಾಗಿದೆ ಎಂದು ದೂರಿದ್ದಾರೆ.

click me!